ಬಳ್ಳಾರಿ

ರೆಡ್ಡಿ ಸಹೋದರರೊಂದಿಗೆ ಕೈಜೋಡಿಸುವ ಸುದ್ದಿ ಶುದ್ದ ಸುಳ್ಳು

ರೆಡ್ಡಿ ಸಹೋದರರೊಂದಿಗೆ ಕೈಜೋಡಿಸುವ ಸುದ್ದಿ ಶುದ್ದ ಸುಳ್ಳು

ಬಳ್ಳಾರಿ 03: ನಗರದಲ್ಲಿ ರೆಡ್ಡಿ ಸಹೋದರರೊಂದಿಗೆ ಮಾಜಿ ಸಚಿವ ದಿವಾಕರ್ ಬಾಬು ಅವರು ಕೈಜೋಡಿಸಿ ಮುಂಬರುವ ಚುನಾವಣೆ ಅಖಾಡಕ್ಕಿಳಿಯಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದು, ಇದು ಶುದ್ದ ಸುಳ್ಳು. ನನ್ನ ಕೊನೆ ಉಸಿರು ಇರುವವರೆಗೆ ಕಾಂಗ್ರೆಸ್‌ನಲ್ಲೇ ಇರುವೆ ಎಂದು ಮಾಜಿ ಸಚಿವ ಎಂ.ದಿವಾಕರ್ ಬಾಬು ಅವರು ಹೇಳಿದರು. 

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು ಕರ್ನಾಟಕ ನ್ಯೂಸ್ ಎನ್ನುವ ಖಾಸಗಿ ಯೂಟೂಬ್ ಚಾನಲ್ ಅವರು, ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದು, ಇದು ಸಂಪೂರ್ಣ ಸುಳ್ಳು, ಪಕ್ಷದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ನನ್ನನ್ನು ತೇಜೋವಧೆ ಮಾಡಲು ಹೊರಟ ಖಾಸಗಿ ಚಾನಲ್ ವಿರುದ್ಧ ದೂರು ನೀಡುವೆ, ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುವೆ ಎಂದರು.  

ನಾನು ರೆಡ್ಡಿ ಸಹೋದರರೊಂದಿಗೆ ಹೋಗುವ ಪ್ರಶ್ನೆಯೇ ಇಲ್ಲ, ಅಂತಹ ಪ್ರಮೆಯವೂ ನನಗೆ ಬಂದಿಲ್ಲ, ಚುನಾವಣೆ ಹೊಸ್ತಿನಲ್ಲಿ ಇಂತಹ ಸುಳ್ಳುವದಂತಿ ಹಬ್ಬಿಸುವುದು ಸರಿಯಲ್ಲ, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ತಿಳಿದಿದೆ, ಬರುವ ದಿನಗಳಲ್ಲಿ ನಾನಲ್ಲ ನಗರದ ಮಹಾಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಗರ ಕ್ಷೇತ್ರದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿರುವೆ, ಈ ತರಹ ಸುಳ್ಳು ಸುದ್ದಿ ಹಬ್ಬಿಸಿ ಟಿಕೆಟ್ ಕೈತಪ್ಪಿಸುವ ಹುನ್ನಾರ ಇದಾಗಿದೆ. ಆದರೇ, ಅವರು ಅಂದುಕೊಂಡಂತೆ ನಡೆಯೋಲ್ಲ, ನನ್ನ ರಾಜಕೀಯ ಜೀವನ, ಅವದಿಯಲ್ಲಿ ನಾನು ಶ್ರಮಿಸಿದ ಕೆಲಸವನ್ನು ಪಕ್ಷದ ವರೀಷ್ಠರು, ನಗರದ ಮಹಾಜನತೆ ಗಮನಿಸಿದ್ದು, ವರೀಷ್ಠರು ಎಲ್ಲವನ್ನೂ ಗಮನಿಸಿ ಟಿಕೇಟ್ ನೀಡುವ ವಿಶ್ವಾಸವಿದೆ ಎಂದರು.ರೆಡ್ಡಿ ಅವರೊಂದಿಗೆ ನನ್ನ ಯಾವುದೇ ಒಡನಾಟವಿಲ್ಲ, ಅಂತಹ ಘಟನೆಗಳು ನಡೆದಿದ್ದರೇ ಸಾಕ್ಷಾಧಾರಗಳನ್ನು ಬಹಿರಂಗ ಪಡಿಸಬಹುದು. ಅದನ್ನು ಬಿಟ್ಟು ಇಂತಹ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ, ಇಂತಹ ಅಪಪ್ರಚಾರಕ್ಕೆ ಬಗ್ಗುವ ಜಾಯಮಾನ ನನ್ನದಲ್ಲ, ವರೀಷ್ಠರು ಟಿಕೇಟ್ ನೀಡುವ ವಿಸ್ವಾಸವಿದ್ದು, ನಗರದ ಮಹಾಜನತೆ ಆರ್ಶಿವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಎಂ.ದಿವಾಕರ್ ಬಾಬು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. 


ಸುದ್ದಿ ಓದಿ