ಪುನಿತ್ ಸಾವಿನ ಸುದ್ದಿ ನಂಬಲು ಆಗುತ್ತಿಲ್ಲ: ಹೆಚ್.ಡಿ ದೇವೇಗೌಡ
ಬೆಂಗಳೂರು, ಅ 29 ಚಿತ್ರರಂಗದ ನಾಯಕ ನಟ, ಪುನೀತ್ ರಾಜಕುಮಾರ್ ಸಾವಿನ ಸುದ್ದಿಯನ್ನು ನಂಬಲು ಆಗುತ್ತಿಲ್ಲ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಂಬನಿ ಮಿಡಿದಿದ್ದಾರೆ.
ಇಂದು ರಾಜ್ಯಕ್ಕೆ ಬಂದ ಬರಸಿಡಿಲ ಸುದ್ದಿ. ಅವರ ಕುಟುಂಬ, ಮತ್ತು ಅವರ ಅಪಾರ ಅಭಿಮಾನಿಗಳಿಗೆ ನಟನ ಅಗಲಿಕೆಯ ನೋವು , ದುಖಃ ತಡೆದುಕೊಳ್ಳವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದೂ ದೇವೇಗೌಡರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ .