ಬಳ್ಳಾರಿ

ನೂತನ ಎಸ್‍ಡಿಎಂಸಿ, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ನೂತನ ಎಸ್‍ಡಿಎಂಸಿ, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಎಸ್‍ಡಿಎಂಸಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ಹಗರಿಬೊಮ್ಮನಹಳ್ಳಿ 19 : ಪಟ್ಟಣದ ಆದರ್ಶ ವಿದ್ಯಾಲಯಕ್ಕೆ ಶಾಲಾಭಿವೃದ್ಧಿ ಹಾಗೂ ಮೇಲು ಉಸ್ತುವರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಜಗದೀಶ್ ಕೆ.ಎಂ ಹಾಗೂ ಉಪಾಧ್ಯಕ್ಷರಾಗಿ ಶ್ವೇತಾ ಸಿ.ಕೆ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆದರ್ಶ ಶಾಲಾಭಿವೃದ್ಧಿ ಮೇಲು ಉಸ್ತುವಾರಿ ಸಮಿತಿಗೆ 18 ಜನ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.                 

ಸರ್ಕಾರದ ನಿಯಮನುಸಾರವಾಗಿ ಮೀಸಲಾತಿ ಅನ್ವಯ ನೆಡೆದ ಆಯ್ಕೆಯಲ್ಲಿ ಪರಿಶಿಷ್ಟ ಜಾತಿ 03 , ಪರಿಶಿಷ್ಟ ಪಂಗಡ-01 ಅಲ್ಪಸಂಖ್ಯಾತ ವರ್ಗ-01,ಹಿಂದುಳಿದ ವರ್ಗ-12, ಸಾಮಾನ್ಯ ವರ್ಗ-01 ಒಟ್ಟು 18 ಸ್ಥಾನಗಳಿಗೆ ಪುರುಷ ಮತ್ತು ಮಹಿಳೆಯರ ಸ್ಥಾನಗಳಿಗಿಂತ ಹೆಚ್ಚು ಅಕಾಂಕ್ಷೆಗಳಿದ್ದವರಿಗೆ ಚೀಟಿ ಹಾಕುವ ಮೂಲಕ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ಸದಸ್ಯರುಗಳಾಗಿ ಅಕ್ಕಂಡಿ ಕವಿತಾ ಬಸವರಾಜ್, ಸುಮ, ಕಮಲಾಬಾಯಿ, ಈರಮ್ಮ, ಸುಬಾಷ್ ನಾಯ್ಕ್, ಡಿ.ಸುಧಾ, ಹೆಚ್ ಮೆಹಬೂಬ್, ಅರವಿಂದ್, ಜಿ.ಸುರೇಶ್, ಭೀಮಪ್ಪ, ಎ.ಮಹೇಶ್, ಗೌರಮ್ಮ, ಲಕ್ಷ್ಮೀ, ಅಕ್ಕಮಹಾದೇವಿ, ಬಸವರಾಜ್ ಹೆಚ್, ವೆಂಕಟೇಶ್ ರೆಡ್ಡಿ ಆಯ್ಕೆಯಾಗಿದ್ದಾರೆ.  

ಈ ವೇಳೆ ಶಿಕ್ಷಣ ಇಲಾಖೆಯ ಬಸವರಾಜ ಮಾತನಾಡಿ ಶಾಲಾಭಿವೃದ್ಧಿ ಹಾಗೂ ಮೇಲು ಉಸ್ತುವರಿ ಸಮಿತಿಯ ಜವಾಬ್ದಾರಿ ಮಹತ್ವದಾಗಿದೆ. ಶಾಲೆಯ ಸರ್ವಾಂಗೀಣ ಪ್ರಗತಿಗೆ ಸಲಹೆ ಮಾಹಿತಿ ನೀಡುವ ಮೂಲಕ ಮಕ್ಕಳ ಪೋಷಕರಾಗಿ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೇ ವಿದ್ಯಾರ್ಥಿಗಳ ಆಸಕ್ತಿಗೆ, ಅಭಿರುಚಿಗೆ ಸಾಮಾರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ಪ್ರೋತ್ಸಾಹಿಸಬೇಕಿದೆ ಎಂದರು.                             

ಶಾಲೆಯ ಮುಖ್ಯ ಗುರು ಕೆ.ಕೊಟ್ರೇಶಪ್ಪ ಮಾತನಾಡಿ ಶಾಲಾಭಿವೃದ್ಧಿ ಮೇಲು ಉಸ್ತುವರಿ ಸಮಿತಿಯು ಶಾಲೆಯ ಮಕ್ಕಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು. 

ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಕೆ.ಸುರೇಶ್ ಮಾಲವಿ, ನಿಕಟ ಪೂರ್ವ ಉಪಾಧ್ಯಕ್ಷೆ ಶಿಲ್ಪ, ಪೋಷಕ ನಿಂಗಪ್ಪ, ಟಿ.ಕೆ ನಾಯ್ಕ್, ವಾಯಿದ್, ಗಂಗಮ್ಮ ದ್ರಾಕ್ಷಯಿಣಮ್ಮ, ಜಗದೀಶ್   ಶಿಕ್ಷಕ ಸ್ನೇಹಲತಾ, ಸಂತೋಷಕುಮಾರ್ ಮಂಜುನಾಥ. ಟಿ, ಸುಕುಮುನಿಸ್ವಾಮಿ, ಮಲ್ಲಿಕಾರ್ಜುನ, ಮಂಜುನಾಥ. ಎಂ, ಫೋಷಕರು ಹಾಜರಿದ್ದರು.


ಸುದ್ದಿ ಓದಿ