ಬಳ್ಳಾರಿ

ರೆನಾಲ್ಟ್ ಶೋರೂಮ್‍ನಲ್ಲಿ ಹೊಸ ಕೈಗರ್ ಕಾರ್ ಬಿಡುಗಡೆ

ರೆನಾಲ್ಟ್ ಶೋರೂಮ್‍ನಲ್ಲಿ ಹೊಸ ಕೈಗರ್ ಕಾರ್ ಬಿಡುಗಡೆ

ಬಳ್ಳಾರಿ  18:  ನಗರದಲ್ಲಿ ಜನಸಂಖ್ಯೆ ಹೆಚ್ಚು ಆಗುತ್ತಾ ಇದೆ, ವಾಹನಗಳಿಂದ ಮಾಲಿನ್ಯ ಜಾಸ್ತಿ ಆಗತಾ ಇದೆ, ಇಂತಹ ಹೊಸ ಮಾಡಲ್ ಕಾರಿನಿಂದ ಮಾಲಿನ್ಯ, ಮೈಲೇಜ್ ಸೇಪ್ಟಿ ಡ್ರೈವಿಂಗ್, ಇನ್ನಿತರ ಸೌಲಭ್ಯಗಳು ಈ ಕಾರ್‍ನಲ್ಲಿ ಸಿಗುತ್ತಿದ್ದೆ. ಅದಕಾರಣ ಸದರಿ ಕೈಗರ್ ಕಾರ್‍ನ್ನು ನಗರದ ಜನತೆ ಉಪಯೋಗಿಸಿಕೊಳ್ಳಬೇಕೆಂದು ಆರ್.ಟಿ.ಒ. ಶೇಖರ್ ಹೇಳಿದರು. 

ಬಳ್ಳಾರಿ ನಗರದ ಅನಂತಪುರ ರೋಡ್ ಮಹೀಂದ್ರ ಶೋರೂಮ್ ಎದುರುಗಡೆ  ರೆನಾಲ್ಟ್ ಶೋರೂಮ್‍ನಲ್ಲಿ 2021 ವರ್ಷದ ಹೋಸ ಕೈಗರ್ ಕಾರ್‍ನ್ನು ಬಳ್ಳಾರಿ ಆರ್.ಟಿ.ಒ. ಶೇಖರ್ ಬಿಡುಗಡೆಗೊಳಿಸಿದರು. 

ಈ ಕಾರ್ಯಕ್ರಮದಲ್ಲಿ ರೆನಾಲ್ಡ್ ಶೋರೂಮ್ ಡೈರೆಕ್ಟರ್  ಮೇಟ್ರಿ ಅನಿಲ್ ಕುಮಾರ್  ಬಳ್ಳಾರಿ ಮೋಟರ್ಸ್ ಗ್ರೂಪ್ ಸಿ.ಇ.ಒ. ಸಂದೀಪ್, ಬಿಜೆನೆಸ್ ಹೆಡ್ ಸಮೀರ್ ಖಾನ್, ಸರ್ವಿಸ್ ಹೆಡ್ ಸಾಗರ್ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸುದ್ದಿ ಓದಿ