ನೂತನ ಉಪನಿರ್ದೇಶಕ ಕೆ. ಎ. ಉಪ್ಪಾರಗೆ ಸನ್ಮಾನ
ಲೋಕದರ್ಶನ ವರದಿ
ವಿಜಯಪುರ 08: ದಿ. 08ರಂದು ವಿಜಯಪುರ ಜಿಲ್ಲೆಗೆ ನೂತನವಾಗಿ ಶಾಲಾ ಶಿಕ್ಷಣ ಇಲಾಖೆಗೆ (ಪದವಿ ಪೂರ್ವ) ಉಪನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಕೆ. ಎ. ಉಪ್ಪಾರ ಇವರಿಗೆ ವಿಜಯಪುರ ಜಿಲ್ಲಾ ಗಣಕ ವಿಜ್ಞಾನ ವಿಷಯದ ಉಪನ್ಯಾಸಕರ ವೇದಿಕೆಯ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು. ಇದೇ ಸಂದರ್ಭದಲ್ಲಿ ಶಾಖಾಧಿಕಾರಿಗಳಾದ ಪ್ರಕಾಶ ಗೊಂಗಡಿ, ವೇದಿಕೆಯ ಅಧ್ಯಕ್ಷರಾದ ರಾಜೇಶ್ವರಿ ದೊಡಮನಿ, ಹಿರಿಯ ಉಪನ್ಯಾಸಕಿಯರಾದ ಸಾವಿತ್ರಿ ಡಿ., ಉಪನ್ಯಾಸಕರಾದ ನಿಸಾರ ಅಹ್ಮದ ಬೇಪಾರಿ, ವೆಂಕಟೇಶ ದೊಡ್ಡಪತ್ತಾರ, ಅಜಿತಕುಮಾರ, ಜಯತೀರ್ಥ ಪಂಢರಿ, ಪ್ರವೀಣ ಅಣಚಿಮಠ, ಗುರುರಾಜ ಬಿ. ಕುಲಕರ್ಣಿ, ಶೃತಿ ಸೋನಾರ ಉಪಸ್ಥಿತರಿದ್ದರು.