ನೂತನ ಕ್ಲಬ್’ನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
ಬ್ಯಾಡಗಿ: ಮಹಿಳೆಯರನ್ನೊಳಗೊಂಡ ಇಂಟರ್ ನ್ಯಾಷನಲ್ ಇನ್ನರ್ ವ್ಹೀಲ್ ಕ್ಲಬ್ ಆಫ್ ಬ್ಯಾಡಗಿಯು ಭಾರತದ 8104ನೇ ಕ್ಲಬ್ ಆಗಿ ನೋಂದಣಿಯಾಗಿದ್ದು, ಪಟ್ಟಣದ ಅಂಬೇಡ್ಕರ್ ಶಾಲೆಯ ಸಭಾಂಗಣದಲ್ಲಿ ನೂತನ ಕ್ಲಬ್’ನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜರುಗಿತು.
ಮಹಿಳಾ ಕ್ಲಬ್’ನ ನೂತನ ಅಧ್ಯಕ್ಷರಾಗಿ ಸಂಧ್ಯಾರಾಣಿ ದೇಶಪಾಂಡೆ, ಉಪಾಧ್ಯಕ್ಷರಾಗಿ ಪ್ರತಿಭಾ ಮೇಲಗಿರಿ. ಕಾರ್ಯದರ್ಶಿಯಾಗಿ ಮಹೇಶ್ವರಿ ಪಸಾರದ, ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಉಪ್ಪಾರ, ಖಜಾಂಚಿಯಾಗಿ ಶೋಭಾ ನೋಟದ, ಋಓ ಆಗಿ ಕವಿತಾ ಸೊಪ್ಪಿನಮಠ, ಎಡಿಟರ್ ಆಗಿ ಶಾಮಾ ಪಾಟೀಲ ಅವರುಗಳು ಸೇವಾಧಿಕಾರ ಸ್ವೀಕರಿಸಿದರು.ಜಿಲ್ಲಾ ಚೇರ್ಮನ್ ರತ್ನಾ ಬೆಹರೆ ಬೆಳಗಾವಿ ಅವರು ನೂತನ ಪದಾಧಿಕಾರಿಗಳಿಗೆ ಕಾರ್ಯ ಮತ್ತು ಕರ್ತವ್ಯದ ವಿಧಿಯನ್ನು ಭೋದಿಸಿ ಕ್ಲಬ್’ನ ಚಾರ್ಟರ್ ರಿಜಿಸ್ಟ್ರೇಷನ್ ಪ್ರಮಾಣ ಪತ್ರವನ್ನು ನೀಡಿ ಪದಗ್ರಹಣ ನೆರವೇರಿಸಿದರು. ರಾಣೇಬೆನ್ನೂರ ಹಾಗೂ ಹಾವೇರಿ ಇನ್ನರ್ ವ್ಹೀಲ್ ಕ್ಲಬ್’ನ ಪದಾಧಿಕಾರಿಗಳು ಹಾಗೂ ಸದಸ್ಯರು ಅತಿಥಿಗಳಾಗಿ ಆಗಮಿಸಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಸುಂಕಾಪುರ, ಕಾರ್ಯದರ್ಶಿ ಮಂಜುನಾಥ ಉಪ್ಪಾರ, ಸದಸ್ಯರಾದ ಪರಶುರಾಮ ಮೇಲಗಿರಿ, ಮಾಲತೇಶ ಅರಳಿಮಟ್ಟಿ, ವಿಶ್ವನಾಥ ಅಂಕಲಕೋಟಿ, ಲಿಂಗಯ್ಯ ಹಿರೇಮಠ, ಎಸ್.ಎನ್.ನಿಡಗುಂದಿ, ಮಹಾಂತೇಶ ಸುಂಕದ, ಎಂ.ಸಿ.ಯರಗಲ್, ಪವಾಡೆಪ್ಪ ಆಚನೂರ, ಸುಭಾಸ ಕುರಕುಂದಿ ಸೇರಿದಂತೆ ಇನ್ನಿತರ ಸದಸ್ಯರೆಲ್ಲರೂ ನೂತನ ಕ್ಲಬ್’ನ ಪದಾಧಿಕಾರಿಗಳಿಗೆ ಮತ್ತು ಮಹಿಳಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.