ರಾಷ್ಟ್ರೀಯ

ಹೊಸ ಕೃಷಿ ಕಾಯಿದೆ ಸಮರ್ಥನೆ - ಮಾತುಕತೆಗೆ ಬರಲು ರೈತರಿಗೆ ಮೋದಿ ಆಹ್ವಾನ

ಹೊಸ ಕೃಷಿ ಕಾಯಿದೆ ಸಮರ್ಥನೆ - ಮಾತುಕತೆಗೆ ಬರಲು ರೈತರಿಗೆ  ಮೋದಿ ಆಹ್ವಾನ

ನವದೆಹಲಿ, ಡಿಸೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ 6 ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಿದ್ದಾರೆ.  

ಈ ವೇಳೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಿದ್ದಾರೆ. 

ಕೃಷಿ ಕಾಯಿದೆಗಳು ರೈತ ಪರವಾಗಿ  ಎಂದು ಅವರು ಬಲವಾಗಿ ಸಮರ್ಥನೆ ಮಾಡಿಕೊಂಡು,  ಮಾತುಕತೆಗೆ ಬರುವಂತೆ  ರೈತ ನಾಯಕರಿಗೆ  ಆಹ್ವಾನ ನೀಡಿದ್ದಾರೆ.

ಇಂದು ಪಶ್ಚಿಮ ಬಂಗಾಳದ 70 ಲಕ್ಷ ರೈತರು ಈ (ಪಿಎಂ-ಕಿಸಾನ್) ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.  ಈ ಯೋಜನೆಯ ಲಾಭ ಪಡೆಯಲು ಬಂಗಾಳದ 23 ಲಕ್ಷಕ್ಕೂ ಹೆಚ್ಚು ರೈತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಇಷ್ಟು ದಿನ ಪರಿಶೀಲನೆ  ನಡೆಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಮೋದಿ  ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ರೈತರ ಹಿತಕ್ಕಾಗಿ ಮಾತನಾಡದ ವಿಪಕ್ಷಗಳು ದೆಹಲಿಗೆ ಬಂದು ರೈತರ ಬಗ್ಗೆ ಮಾತನಾಡುತ್ತಾರೆ. ಈ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಎ.ಪಿ.ಎಂ.ಸಿ.-ಮಂಡಿಗಳನ್ನು ಕಳೆದುಕೊಳ್ಳುತ್ತಿವೆ. ಆದರೆ ಈ ಪಕ್ಷಗಳು ಕೇರಳದಲ್ಲಿ ಎ.ಪಿ.ಎಂ.ಸಿ-ಮಂಡಿಗಳು ಇಲ್ಲ ಎಂಬುದನ್ನು ಪದೇ,  ಪದೇ ಮರೆಯುತ್ತಾರೆ ಎಂದೂ  ವಿಪಕ್ಷಗಳ ವಿರುದ್ಧ ಪ್ರಧಾನಿ ಟೀಕಾ ಪ್ರಹಾರ ನಡೆಸಿದರು.

ಸುದ್ದಿ ಓದಿ