ಮನರಂಜನೆ

1,500 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸಿನಿಮಾ ಬಿಡುಗಡೆ ದಿನ ಪ್ರಕಟಿಸಿದ ನೆಟ್‌ ಪ್ಲಿಕ್ಸ್‌

1,500 ಕೋಟಿ  ವೆಚ್ಚದಲ್ಲಿ ನಿರ್ಮಿಸಿದ ಸಿನಿಮಾ  ಬಿಡುಗಡೆ ದಿನ  ಪ್ರಕಟಿಸಿದ   ನೆಟ್‌ ಪ್ಲಿಕ್ಸ್‌

ಹಾಲಿವುಡ್‌,  ಜುಲೈ  9: ಹಾಲಿವುಡ್‌   ಚಿತ್ರ   "ರೆಡ್‌ ನೋಟೀಸ್‌"     ನೆಟ್ ಫ್ಲಿಕ್ಸ್‌     ತನ್ನ  ಇತಿಹಾಸದಲ್ಲಿ   ಬಿಡುಗಡೆಗೊಳಿಸಲಿರುವ   ಅತಿ ದೊಡ್ಡ ಬಜೆಟ್  ಚಿತ್ರವಾಗಿದೆ.  ಕಾಮಿಡಿ ಆಕ್ಷನ್ ಥ್ರಿಲ್ಲರ್    ಆಗಿರುವ  ಈ   ಚಿತ್ರದಲ್ಲಿ ರ್ಯಾನ್‌   ರೆನಾಲ್ಡ್ಸ್, ಗಾಲ್ ಗಾಡೊಟ್, ಡ್ವೇನ್ ಜಾನ್ಸನ್  ಹಾಗೂ  ರಿತು ಆರ್ಯ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಸುಮಾರು  200 ಮಿಲಿಯನ್  ಡಾಲರ್‌  (ಅಂದಾಜು 1,500 ಕೋಟಿ ರೂ.) ಬಜೆಟ್‌ ನ   ಈ    ಸಿನಿಮಾದ   ಬಿಡುಗಡೆ  ದಿನಾಂಕವನ್ನು    ಪ್ರಕಟಿಸಿದೆ. 

ನವೆಂಬರ್ 12 ರಂದು ಚಿತ್ರ   ಬಿಡುಗಡೆಗೊಳ್ಳಲಿದೆ  ಎಂದು ಡ್ವೇನ್ ಜಾನ್ಸನ್ (ದಿ ರಾಕ್) ತಮ್ಮ ಇನ್ಸ್ಟಾಗ್ರಾಮ್ ಮೂಲಕ    ಪ್ರಕಟಿಸಿದ್ದಾರೆ.   ತಮ್ಮ ಮೇಲೆ    ನಂಬಿಕೆ ಇಟ್ಟು  ಹೂಡಿಕೆ ಮಾಡಿದ್ದಕ್ಕಾಗಿ  ನೆಟ್‌ಫ್ಲಿಕ್ಸ್‌ಗೆ  ಅವರು  ಧನ್ಯವಾದ ಅರ್ಪಿಸಿದ್ದಾರೆ.  ವರ್ಷದ ಬಹು ನಿರೀಕ್ಷಿತ  ಸಿನಿಮಾ   ಎಂದು  ಭಾರಿ  ನಿರೀಕ್ಷೆಗಳನ್ನು  ಮೂಡಿಸಿರುವ ಅಭಿಮಾನಿಗಳು  ಹಾಗೂ  ನೆಟ್‌ಫ್ಲಿಕ್ಸ್ ಬಳಕೆದಾರರಿಗೆ   ಅವರು  ಧನ್ಯವಾದ  ಸಲ್ಲಿಸಿದ್ದಾರೆ.

ರಾಸನ್ ಮಾರ್ಷಲ್ ಥುಂಬರ್ ನಿರ್ದೇಶಿಸಿರುವ    ಈ  ಚಿತ್ರ...   ದರೋಡೆ   ಕಥಾ  ಹಿನ್ನಲೆ ಹೊಂದಿದೆ.    ಗಾಡ್ಗೊಟ್,  ರೆನಾಲ್ಡ್ಸ್   ಕ್ರಿಮಿನಲ್ಸ್‌  ಗಳಾಗಿ, ರಾಕ್ ಎಫ್‌  ಬಿ ಐ  ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  ಇನ್ನೂ  ರೆಡ್ ನೋಟಿಸ್‌ನಲ್ಲಿ  ಆಕ್ಷನ್ ದೃಶ್ಯಗಳಿಗೆ  ಯಾವುದೇ   ಕೊರತೆ  ಇರುವುದಿಲ್ಲ ಎಂದು ನೆಟ್‌ಫ್ಲಿಕ್ಸ್  ಹೇಳಿದೆ.


ಸುದ್ದಿ ಓದಿ