ನೇತಾಜಿ ವಿಚಾರಗಳು ಈಗಲೂ ಪ್ರಸ್ತುತ: ಕೆ.ಈರಣ್ಣ
ಬಳ್ಳಾರಿ 23: ಇಂದು ಸರಳಾದೇವಿ ಪದವಿ ಕಾಲೇಜುನಲ್ಲಿ ಸೃಜನ ವಿದ್ಯಾರ್ಥಿ ವೇದಿಕೆ ವತಿಯಿಂದ ನೇತಾಜಿ ಸುಭಾಷ್ಚಂದ್ರ ಭೋಸ್ರರವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು, ಕಾಲೇಜಿನ ಪ್ರಾಂಶುಪಾಲ ಪ್ರೋ. ಹೇಮಣ್ಣ ಮಾಲಾರ್ಪಣೆ ಮಾಡಿದರು.
ಸೃಜನ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಕೆ.ಈರಣ್ಣ ಮಾತನಾಡಿ, ನೇತಾಜಿಯವರ ವಿಚಾರಗಳು ಇಂದು ಪ್ರಸ್ತುತವಾಗಿವೆ. ಇಂದು ಆಳುವ ಸರ್ಕಾರಗಳು ವಿದ್ಯಾರ್ಥಿಗಳನ್ನು ಧರ್ಮ, ಜಾತಿ, ಭಷೆ ಮತ್ತು ಪ್ರಾದೆಶಿಕತೆ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿರುವ ಈಗಿನ ಪ್ರಕ್ಷುಬ್ದ ವೇಳೆಯಲ್ಲಿ ಅತ್ಯಂತ ಶ್ರದ್ದೆಯಿಂದ ಅವರ ಧರ್ಮ ನಿರಪೇಕ್ಷ, ಪ್ರಜಾತಾಂತ್ರಿಕ ವಿಚಾರ ಮತ್ತು ಕಾರ್ಯಗಳಿಗಾಗಿ ಮಹಾನ್ ನಾಯಕ ನೇತಾಜಿಯವರನ್ನು ನಾವು ನೆನೆಯಬೇಕಾಗಿದೆ ಎಂದರು.
ಕಾಲೇಜಿನ ಉಪನ್ಯಾಸಕರು ಹಾಗೂ ಸೃಜನ ವಿದ್ಯಾರ್ಥಿ ವೇದಿಕೆ ಸದಸ್ಯರಾದ ರೇವಣಸಿದ್ದೇಶ್ವರ, ಲಕ್ಷ್ಮಿ ಎರ್ರಿಸ್ವಾಮಿ, ವಿರೇಂದ್ರ ಮತ್ತು ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.