ಸೊಂಕಿತರಿಗೆ ಕೋವಿಡ್ ಕೇರ್ ಸೆಂಟರ್‌ಗೆ ಶೀಫ್ಟ ಮಾಡುವ ಆತಂಕ ಬೇಡ
ಹಗರಿಬೊಮ್ಮನಹಳ್ಳಿ 02: ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಬುಧವಾರ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಡಯನ್ನು ಭೇಟಿ ನೀಡಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ ಎಂದು ತಿಳಿಸಿದರು.
ಗ್ರಾಮೀಣ ಭಾಗ ಸೇರಿದಂತೆ ಪ್ರಥಮವಾಗಿ ಸರಕಾರಿ ಪಿಹೆಚ್‌ಸಿ ಸೇರಿದಂತೆ ತಲೂಕಾಸ್ಪತ್ರೆಗಳಲ್ಲಿ ಸಾರ್ವಜನಿಕರು ವಾಲೆಂಟೀಯರ್ ಅಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ, ನಕಲಿ ವೈದ್ಯರ ಬಳಿ ನಾಲ್ಕೈದು ದಿನಗಳವರೆಗೆ ಚಿಕಿತ್ಸೆ ಪಡೆದು ಫಲಕಾರಿಯಾಗದೇ ಸರಕಾರಿ ಆಸ್ಪತ್ರೆಗೆ ಬಂದರೆ ಇಲ್ಲದ ತೊಂದರೆ ಅನುಭವಿಸಬೇಕಾಗುತ್ತದೆ.ಜಿಲ್ಲೆಯ ತಾಲೂಕಾಸ್ಪತ್ರೆಗಳಿಗೆ ರೆಮ್ಡಿಸಿವಿಆರ್ ಲಸಿಕೆ ಲಭ್ಯವಿದೆ, ಸದ್ಯ ತಾಲೂಕಿನ ಕೋವಿಡ್ ಕೇರ್ ಸೆಂಟರ್‌ಗಳು ಸದಾ ಕಾರ್ಯನಿರ್ವಹಿಸುತ್ತವೆ,ಇದರ ಜೊತೆ ಮನೆಯಲ್ಲೆ ಸೂಕ್ತ ಚಿಕಿತ್ಸೆಗೆ ಅನುವು ಮಾಡಿಕೊಳ್ಳುವವರು ಮನೆಯಲ್ಲಿಯೇ ಇರಬಹುದಾಗಿದೆ,ಕೋವಿಡ್ ಕೇರ್ ಸೆಂಟರ್‌ಗಳಿಗೆ ಶಿಫ್ಟ್ ಮಾಡುವ ಆಂತಕವಿದ್ದರೆ ತೆಗೆದು ಹಾಕಿ ಎಂದರು.ಶಾಲಾ ಕಾಲೇಜು ಪ್ರಾರಂಭವಾದರೆ ಸೊಂಕಿತರಿಗೆ ಪರ್ಯಾಯ ವ್ಯೆವಸ್ಥೆಗೆ ಸಿಧ್ಧವಿದ್ದೆವೆ.ಜಿಲ್ಲೆಯಲ್ಲಿ ಶೇಕಡ 20ರಷ್ಟು ಪಾಸಿಟಿವಿಟಿ ರೇಟ್ ಬಂದಿದೆ ಮುಮದಿನ ದಿನಗಳಲ್ಲಿ ಶೇಕಡ 5ರಷ್ಟು ಸೊಂಕು ಬಂದರೆ ಮಾತ್ರ ಅನ್‌ಲಕ್ ವಿಷಯ ಪ್ರಸ್ತಾಪ ಮಾಡಲಾಗುವುದು,ರಾಜ್ಯ ಸರಕಾರದ ನಿರ್ಧರದ ನಂತರ ಜಿಲ್ಲೆಯ ಪರಿಸ್ಥಿತಿಯ ಅನುಗುಣವಾಗಿ ಲಾಕ್‌ಡೌನ್ ಬೇಕೋ ಬೆಡವೋ ಎಂಬ ನಿರ್ಧರ ಮಾಡಲಾಗುವುದೆಂದು ಪತ್ರಿಕೆಗೆ ತಿಳಿಸಿದರು.