ಮುಂದಗೋಡ

ಅವಶ್ಯವಿರುವ ಅನುದಾನ ಬಿಡುಗಡೆ ಮಾಡಲಾಗುವುದು: ಸಿ.ಸಿ.ಪಾಟೀಲ

ಅವಶ್ಯವಿರುವ ಅನುದಾನ ಬಿಡುಗಡೆ ಮಾಡಲಾಗುವುದು: ಸಿ.ಸಿ.ಪಾಟೀಲ

ಮುಂಡಗೋಡ:ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಅವಶ್ಯವಿರುವ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ  

ಹೇಳಿದರು. 

ತಾಲೂಕಿನ ಕುಸೂರ ಗ್ರಾಮದಲ್ಲಿ ಬುಧವಾರ ಸಂಜೆ ಯಲ್ಲಾಪುರ-ಮುಂಡಗೋಡ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಡಾಂಬರ್ ಅನ್ನೇ ಕಾಣದ ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಯಾವಾಗ ಮಾಡುವುದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕ್ಷೇತ್ರದ ಗ್ರಾಮೀಣ ಭಾಗದ ಲೋಕೋಪಯೋಗಿ ಇಲಾಖೆಯ ರಸ್ತೆಗಳ ನಿರ್ಮಾಣಕ್ಕಾಗಿ ಸೂಕ್ತ ಅನುದಾನ ನೀಡಲಾಗುವುದು ಎಂದರು.  

ಅಂಕೋಲಾ, ಯಲ್ಲಾಪುರ ರಸ್ತೆಗೆ ಕಳೆದ ಹಲವು ವರ್ಷಗಳಿಂದ ಡಾಂಬರೀಕರಣವನ್ನೇ ಮಾಡಲು ಆಗಿಲ್ಲ ಕೇವಲ ತೇಪೆ ಹಚ್ಚುವ ಕೆಲಸ ಮಾತ್ರ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದಾಗ ಪಕ್ಕದಲ್ಲೇ ಇದ್ದ ಸಚಿವ ಶಿವರಾಮ ಹೆಬ್ಬಾರ ಅವರು ಸಚಿವ ಸಿ.ಸಿ.ಪಾಟೀಲ ಅವರಿಗೆ ಅದು ರಾಷ್ಟ್ರೀಯ ಹೆದ್ದಾರಿ ಎಂದು ತಿಳಿಸಿ ಹೇಳಿದರು. ಸಚಿವ ಸಿ.ಸಿ.ಪಾಟೀಲ ಆ ರಸ್ತೆ ನಮಗೆ ಸಂಬಂಧಿಸಿದ್ದು ಅಲ್ಲ ಅದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಳಿ ಎಂದರು. 

ಪಾಟೀಲರೇ ಕೋಪ ಯಾಕೆ..?  

ಸಚಿವ ಸಿ.ಸಿ.ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಒಂದೇ ಬಾರಿ ಇಬ್ಬರು ಪತ್ರಕರ್ತರು ಪ್ರತ್ಯೇಕ ಪ್ರಶ್ನೆ ಕೇಳಿದರು. ನಂಗೆ ಇರೋದು ಒಂದೇ ಬಾಯಿ ಒಂದೇ ಪ್ರಶ್ನೆ ಕೇಳಿ ಎಂದು ಸಿ.ಸಿ.ಪಾಟೀಲ್ ಗರಂ ಆಗಿ ಹೇಳಿದ್ದು ಕಂಡು ಬಂತು. 


ಸುದ್ದಿ ಓದಿ