ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮ :ಸ್ವಾಗತಾರ್ಹ
ಮುಂಡರಗಿ 25 :ಇತ್ತೀಚಿನ ವಿಧಾನಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೇಸ್ನ ಸದಸ್ಯರಾದ ಹಂಪಿನಗೌಡ ಬಾದರ್ಲಿಯವರ ಪ್ರಶ್ನೆಗೆ ಉತ್ತರಿಸಿದ ಯೋಜನಾ ಹಾಗೂ ಸಾಂಖಿಕ ಸಚಿವರಾದ ಡಿ.ಸುಧಾಕರ್ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಈ ಭಾಗದ ಅನುದಾನಿತ ಹಾಗೂ ಅನುದಾನರಹಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಲು ಕೆ.ಕೆ.ಆರ್.ಡಿ.ಬಿ ಅನುದಾನ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮದೊಂದಿಗೆ ಅನುದಾನ ನೀಡಲಾಗುವದು ಎಂಬ ಹೇಳಿಕೆ ಸ್ವಾಗತಾರ್ಹ ಎಂದು ಯೋಜನಾ ಆಯೋಗ ಮಾಜಿ ಸದಸ್ಯರಾದ ಡಾ.ಬಿ.ಜಿ.ಜವಳಿ ಹೇಳಿದರು.
ಶೈಕ್ಷಣಿಕ ಪ್ರಗತಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಬಲ್ಲದು, ಮೈಸೂರ ಭಾಗಕ್ಕೆ ಹೊಲಿಸಿದರೆ ಈ ಪ್ರದೇಶ ಸಾಕಷ್ಟು ಹಿಂದುಳಿದಿದ್ದು ಸರ್ಕಾರ ಈ ಭಾಗದ ಅಭಿವೃದ್ದಿಗೆ ಕ್ರಿಯಾಯೋಜನೆ ತಯಾರಿಸಿ ಕಾಲಮಿತಿಯಲ್ಲಿ ಕಾರ್ಯನಿರ್ವಹಿಸಬೇಕು. ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾದ ಅಜಯಸಿಂಗ್ರವರ ಅವಧಿಯಲ್ಲಿ ಈ ಭಾಗ ಅಭಿವೃದ್ದಿಯಾಗಲಿ ಎಂದು ಹೇಳಿದರು.