ಅಭ್ಯರ್ಥಿ ರಾಜಶೇಖರ ಮುಲಾಲಿ ಪರ ನವಲಗುಂದ ಮತಯಾಚನೆ
ಇಂಡಿ 07: ಕನ್ನಡ ನಾಡು, ನುಡಿ ಉಳಿಸಿ ಬೆಳೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಶೇಖರ ಮುಲಾಲಿ ಅವರನ್ನು ಬೆಂಬಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಸಹಕರಿಸಿ ಎಂದು ರಾಮದುರ್ಗದ ಮಂಜುನಾಥ ನವಲಗುಂದ ಹೇಳಿದರು.
ಅವರು ಭಾನುವಾರ ಪಟ್ಟಣದ ಪ್ರವಾಸಿ ಮಂದರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು-2021 ರ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ರಾಜಶೇಖರ ಮುಲಾಲಿ ಅವರ ಪರ ಮತಯಾಚನೆ ಮಾಡಿದರು.
ಮುಲಾಲಿ ಅವರು ಸಮಾಜ ಸೇವಕರಾಗಿದ್ದು ಸಾಕಷ್ಟು ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಭ್ರ್ರಷ್ಠತನವನ್ನು ಹೊರಹಾಕಿದ್ದಾರೆ ಎಂದರು.
ಬಳ್ಳಾರಿಯ ಕಿಚಿಡಿ ಕೊಟ್ರೇಶ ಮಾತನಾಡಿ ಉತ್ತರ ಕರ್ನಾಟಕದ ಏಕೈಕ ಅಭ್ಯರ್ಥಿ ರಾಜಶೇಖರ ಮುಲಾಲಿ ಅವರನ್ನು ಬೆಂಬಲಿಸಿದರೆ ಉತ್ತರ ಕರ್ನಾಟಕಕ್ಕೆ ಲಾಭವಾಗಲಿದೆ ಹೀಗಾಗಿ ಉತ್ತರ ಕರ್ನಾಟಕದವರು ಮುಲಾಲಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಶ್ರೀಶೈಲ ಮುಳಜಿ, ಭೀಮನಗೌಡ ಬಿರಾದಾರ, ಮಂಜುನಾಥ ಕಾಮಗೊಂಡ, ಬಾಳು ಮುಳಜಿ, ಶಿವಾನಂದ ಚಾಳೀಕಾರ, ಭೀಮಾಶಂಕರ ಆಳುರ, ದಯಾನಂದ ಪಾಟೀಲ, ಸಿದ್ದು ಡಂಗಾ, ಸೋಮು ಆಲಮೇಲ, ಯಲಗೊಂಡ ಬೇವನೂರ ಮತ್ತಿತರರು ಇದ್ದರು.