ಬಳ್ಳಾರಿ

ಶರನ್ನವರಾತ್ರಿ ಉತ್ಸವ ಆರನೇ ದಿನದ ಕಾರ್ಯಕ್ರಮ

ಶರನ್ನವರಾತ್ರಿ ಉತ್ಸವ ಆರನೇ ದಿನದ ಕಾರ್ಯಕ್ರಮ

ಬಳ್ಳಾರಿ 13: ದಸರಾ ಹಬ್ಬಕ್ಕೆ ಬೇರೆ ಅರ್ಥವಿದೆ ಮತ್ತು ನವರಾತ್ರಿಗೆ ಬೇರೆ ಅರ್ಥವಿದೆ ಸಾರ್ವಜನಿಕರು ಇವೆರಡನ್ನು ಒಂದೇ ಎಂದು ಕೊಂಡು ಆಚರಿಸುತ್ತಿದ್ದಾರೆ. ಇದು ತಪ್ಪು ಕಲ್ಪನೆಯಾಗಿದೆ. ನವರಾತ್ರಿ ಉತ್ಸವಗಳಲ್ಲಿ ಶ್ರೀದೇವಿಯ ಮತ್ತು ಶ್ರೀದುರ್ಗೆಯರನ್ನು ಒಂಬತ್ತು ದಿನಗಳ ಕಾಲ ಪ್ರತಿ ದಿನ ಒಂದೊಂದು ಅಲಂಕಾರಗಳನ್ನು ಮಾಡುವ ಮೂಲಕ ಪೂಜೆಗೈದು ತಮ್ಮ ತಮ್ಮ ಇಷ್ಟಾರ್ಥಗಳ ಸಿದ್ದಿಗೆ ಪ್ರಾರ್ಥಿಸುತ್ತಾರೆ. ಇದು ಕೇವಲ ಒಬ್ಬರ ಮತ್ತು ಒಂದು ಕುಟುಂಬದ ಸ್ವಾರ್ಥವಾಗುತ್ತದೆ. ಇದರ ಬದಲಾಗಿ ಎಲ್ಲಾ ವರ್ಗದ ಜನರಿಗೆ ಸಕಲ ಐಶ್ವರ್ಯಗಳನ್ನು ಕೊಟ್ಟು ಸರ್ವೋಜನ ಸುಖಿನೋಭವಂತು ಎನ್ನುವಂತೆ ಎಲ್ಲರ ಏಳ್ಗೆಗೆ ಮತ್ತು ಸಂತೋಷಕ್ಕೆ ಪ್ರಾರ್ಥಿಸುವುದೇ ನಿಜವಾದ ಹಬ್ಬದ ಅರ್ಥ ಎಂದು ಸತ್ಯಂ ಕಾಲೇಜಿನ ಪ್ರಾಂಶುಪಾಲ  ಚಾಂದ್‌ಭಾಷಾ ಹೇಳಿದರು.  

ಅವರು ನಗರದ ಬಂಡಿಹಟ್ಟಿಯ ಪ್ರದೇಶದ ಶ್ರೀ ಸಿದ್ಧರಾಮೇಶ್ವರ ಕಾಲೋನಿಯಲ್ಲಿ ಶ್ರೀ ಬನ್ನಿ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಪ್ರಥಮ ವರ್ಷದ ಶರನ್ನವರಾತ್ರಿ ಉತ್ಸವಗಳ ಆರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.   

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಷಣ್ಮುಖಪ್ಪ (83) ಅವರಿಗೆ ವಿಶೇಷವಾಗಿ ಸನ್ಮಾನಿಸುವ ಮೂಲಕ ಗುರುವಂದನೆಯನ್ನು ಸಲ್ಲಿಸಲಾಯಿತು. ಎರಿ​‍್ರಸ್ವಾಮಿ, ಷಣ್ಮುಖ, ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  

ಉತ್ಸವ ಸಮಿತಿಯ ಅಧ್ಯಕ್ಷರಾದ ವಿ ಮಹೇಶ್‌ರವರು ಮುಖ್ಯ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಮಿತಿಯ ಕಾರ್ಯನಿರ್ವಾಹಕರಾದ ವಿ ರಾಮಾಂಜಿನೇಯಲು ವಿ ಜಗನ್ನಾಥ ಅಂದ್ರಾಳು, ಕೆ.ಇ.ಬಿ ಗಂಗಣ್ಣ, ಕಟ್ಲೇರು ವೀರೇಶ್,  ಶ್ರೀನಿವಾಸುಲು, ಕೆ ರಾಜಶೇಖರ್, ದೇವರಹಳ್ಳಿ ವಸಂತ, ಪೆನ್ನಮ್ಮನಹಳ್ಳಿ ವೆಂಕಟೇಶ್ ಈ ಜಿ.ರೆಡ್ಡಿ ಚರಕುಂಟೆ, ಮಹಾತ್ಮಗಾಂಧಿ ಶಾಲೆಯ ಮುಖ್ಯ ಶಿಕ್ಷಕ ಎಸ್ ನಾಗರಾಜ್, ಕೆ ಶೇಖರ್‌ಗೌಡ, ಜಿ ರವಿ ಮತ್ತು ಬಂಡಿಹಟ್ಟಿ ಗ್ರಾಮದ ನೂರಾರು ಭಕ್ತರು ಇದ್ದರು.  

ಅಮಾತಿ ಬಸವರಾಜ ಮತ್ತು ತೊಲಮಾಮಿಡಿ ಚಿಕ್ಕಣ್ಣ, ಪೀರಾಸಾಬ್ ಮತ್ತು ಸಿದ್ದಮ್ಮನಹಳ್ಳಿ ವೀರೇಶ್ ಶ್ರೀದೇವಿ ಪುರಾಣ ಪ್ರವಚನ ಮಾಡಿದರು.  

ಕೆ ಹೊನ್ನೂರಸ್ವಾಮಿ ಮತ್ತು ತಂಡದಿಂದ ದಶಕಂಠ ರಾವಣ ಶಿವನ ಆತ್ಮಲಿಂಗ ಎಂಬ ತೊಗಲುಗೊಂಬೆ ಪ್ರದರ್ಶನವನ್ನು ನಡೆಸಿಕೊಟ್ಟರು.

ಸುದ್ದಿ ಓದಿ