ನಿರುದ್ಯೋಗದ ವಿರುದ್ಧ ರಾಷ್ಟ್ರಮಟ್ಟದ ಆನ್ಲೈನ್ ಸಮಾವೇಶ
ಬಳ್ಳಾರಿ 19: ಎಐಡಿವೈಒ ಅಖಿಲ ಭಾರತ ಸಮಿತಿ ಹಾಗೂ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಗಳು ದೇಶದಲ್ಲಿನ ನಿರುದ್ಯೋಗದ ವಿರುದ್ಧ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಯುವಜನ ಆನ್ಲೈನ್ ಸಮಾವೇಶವನ್ನು ದಿ. 18ರಂದು ಹಮ್ಮಿಕೊಂಡಿದ್ದವು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಧ್ಯಪ್ರದೇಶದ ಮಾಜಿ ಅಡ್ವೋಕೇಟ್ ಜನರಲ್ ಆನಂದ ಮೋಹನ್ ಮಾಥುರ್, “ನಮ್ಮ ಸಂವಿಧಾನದ 21ನೇ ವಿಧಿಯು, ವ್ಯಕ್ತಿಯ ಅಸ್ತಿತ್ವ ಮತ್ತು ಬದುಕುವ ಹಕ್ಕು ಅಮೂಲ್ಯವೆಂದು ಹೇಳುತ್ತದೆ. ಆದರೆ ಉದ್ಯೋಗವಿಲ್ಲದೆ ಜೀವನವೇ ಇಲ್ಲ, ಉದ್ಯೋಗವಿಲ್ಲದೆ ವ್ಯಕ್ತಿಯ ಅಸ್ತಿತ್ವವೂ ಇರುವುದಿಲ್ಲ. ವಿದ್ಯಾವಂತ ನಿರುದ್ಯೋಗಿಗಳು ಕೆಲಸದ ಬೇಟೆಯಲ್ಲಿ ನಿರತರಾಗಿ ಹೈರಾಣಾಗುತ್ತಿದ್ದಾರೆ, ಭ್ರಮನಿರಸನಗೊಂಡಿದ್ದಾರೆ, ಹತಾಶೆಗೊಳಗಾಗಿದ್ದಾರೆ. ಸತತವಾಗಿ ಸರ್ಕಾರಗಳೆಲ್ಲವೂ ಯುವಜನತೆಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾದ್ರೋಹ ಬಗೆದಿವೆ. ಇಂದುದೇಶದ ನಿರುದ್ಯೋಗದ ಪ್ರಮಾಣವು ಶೇ.46ರಷ್ಟು ಆಗಿದೆ. ಕೃಷಿಯು ನಿರಾತಂಕದಿಂದ ನಡೆದರೆ ಕೃಷಿಕರಿಗೆ ಉದ್ಯೋಗ ಸಿಗುತ್ತದೆ. ಉದ್ದಿಮೆಗಳು ತಡೆರಹಿತವಾಗಿ ನಡೆದರೆ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಆದರೆ ಇಂದು ಕೃಷಿ ಮತ್ತು ಉದ್ದಿಮೆಗಳೆರಡೂ ನೆಲಕಚ್ಚಿವೆ. ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಬಹುದು. ಹಾಗೆಯೇ ನಮ್ಮ ದೇಶದಲ್ಲಿಯೂ ಸಹ ಉದ್ಯೋಗವನ್ನು ಮೂಲಭೂತ ಹಕ್ಕೆಂದು ಘೋಷಿಸುವಂತೆ ಆಗ್ರಹಿಸಿ ಹೋರಾಟ ನಡೆಸಬೇಕು” ಎಂದು ಸಮಾವೇಶದ ಪ್ರತಿನಿಧಿಗಳಿಗೆ ಸಲಹೆ ನೀಡಿದರು.
ಸಮಾವೇಶದ ಮುಖ್ಯ ಭಾಷಣಕಾರರಾದ ಮಾತನಾಡಿದ ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ದೇಶದ ನಗರ ಮತ್ತು ಗ್ರಾಮೀಣ ಭಾಗದ ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸರ್ಕಾರಗಳು ಯುವಜನರನ್ನು ಈ ವಿಷಯದಲ್ಲಿ ನಿರಾಸೆಗೊಳಿಸುತ್ತಲೇ ಬಂದಿವೆ. ಚುನಾವಣೆಗಳ ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆ ಯುಚರ್ಚೆಯ ಮುಖ್ಯ ವಿಷಯವಾಗಿರುತ್ತದೆ. ಆದರೆ ಅಧಿಕಾರ ಗ್ರಹಣವಾದೊಡನೆ ಎಲ್ಲಾ ಸರ್ಕಾರಗಳೂ ಇದನ್ನು ಮರೆಯುತ್ತವೆ. ಎರಡನೇ ಬಾರಿಗೆ ಬಹುದೊಡ್ಡ ಆಶ್ವಾಸನೆಗಳೊಂದಿಗೆ ಅಧಿಕಾರ ಹಿಡಿದ ಬಿ.ಜೆ.ಪಿ ಯುಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುತ್ತಿದೆ. ಬ್ಯಾಂಕ್, ರೈಲ್ವೆ, ಎಲ್ಐಸಿ, ಅಂಚೆ ಮೊದಲಾದ ಸರ್ಕಾರಿ ಉದ್ದಿಮೆ ಮತ್ತು ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿವೆ, ಆದರೆನೇಮಕ ಮಾಡಿಕೊಳ್ಳುತ್ತಿಲ್ಲ.ಇರುವ ಹುದ್ದೆಗಳನ್ನು ನಾಶಮಾಡುತ್ತಿದೆ. ಪ್ರಧಾನಿ ಮೋದಿಯವರು ಉದ್ಯೋಗವನ್ನು ನೀಡುವ ವಾಗ್ದಾನದೊಂದಿಗೆ, ಅಧಿಕಾರಕ್ಕೇರಿದವರು, ಈಗ ಉದ್ಯೋಗದ ಪ್ರಶ್ನೆಗೆತಮ್ಮ ಮೌನವನ್ನೇ ಉತ್ತರವನ್ನಾಗಿ ನೀಡಿದ್ದಾರೆ, ‘ಮೌನಿ ಮೋದಿ’ಯಾಗಿದ್ದಾರೆ. ಕಳೆದ 5 ವರ್ಷಗಳಿಂದ 15,000 ಹುದ್ದೆಗಳೂ ಸೃಷ್ಟಿಯಾಗಿಲ್ಲ. ಉದ್ಯೋಗ ಎಂದು ಕರೆಯಬಹುದಾದರೆ, ಗ್ರಾಮೀಣ ಯುವಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂ ಕೆಲಸ ಸಿಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವು ಜನಪರತೆಯನ್ನು ಹೊಂದಿದ್ದರೆ, ಅಲ್ಲಿ ಕನಿಷ್ಠ ಪ್ರಮಾಣಿಕತೆಯಿದ್ದರೆ, ನಾಗರಿಕರಿಗೆ ಆರೋಗ್ಯ, ಶಿಕ್ಷಣ, ಯೋಗ್ಯತೆಗೆ ತಕ್ಕ ಉದ್ಯೋಗವನ್ನು ಸೃಷ್ಟಿಸಿ ಕೊಡಬೇಕು. ಜನತೆಯ ಸಾರ್ವತ್ರಿಕ ಮೂಲಜೀವನಾವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ನೀರಾವರಿ ಯೋಜನೆಗಳು ಇತ್ಯಾದಿಗಳನ್ನು ಸಮಗ್ರವಾಗಿ ಮತ್ತು ಜನಪರವಾಗಿ ತಯಾರಿಸಿ ಅನುಷ್ಠಾನಗೊಳಿಸಿದಾಗ ಮಾತ್ರ ಕೋಟ್ಯಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ.”
ಹೋರಾಟ ಸಮಿತಿಯು, ಕ್ವಿಟ್ ಇಂಡಿಯಾ ಚಳುವಳಿಯು ಆರಂಭವಾದ ಆಗಸ್ಟ್ 9ರಂದು ಸ್ಥಗಿತಗೊಂಡಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಮತ್ತು ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೆ ತುಂಬಿಕೊಳ್ಳಬೇಕು ಎಂದು ಆಗ್ರಹಿಸಿ, ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಬೇಕೆಂದು ಕರೆ ನೀಡಿತು. ದೇಶದಾದ್ಯಂತ ಸಾವಿರಾರು ಯುವಜನರು ಈ ಸಮಾವೇಶದಲ್ಲಿ ಪಾಲ್ಗೊಂಡರು. ವಿಜಯನಗರ ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ, ಬಡಾವಣೆಗಳಲ್ಲಿ ಹಾಗೂ ವಿವಿಧ ಹಳ್ಳಿಗಳಲ್ಲಿ ಕೋವಿಡ್ ಅವಶ್ಯಕ ಎಚ್ಚರಿಕಾ ಕ್ರಮಗಳೊಂದಿಗೆ ಹತ್ತಾರು ಪ್ರತಿನಿಧಿಗಳು ಒಂದೆಡೆ ಸೇರಿ ಸಮಾವೇಶದ ಕಲಾಪಗಳಲ್ಲಿ ಪಾಲ್ಗೊಂಡರು.