ರಾಷ್ಟ್ರೀಯ ವಿಶ್ವ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿ
ಕಂಪ್ಲಿ 09: ಕಂಪ್ಲಿಯ ಎಂ.ಡಿ.ಕ್ಯಾಂಪಿನಲ್ಲಿ ಗುರುವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ, ರಾಷ್ಟ್ರೀಯ ವಿಶ್ವ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ಜರುಗಿತು.
ಮಾವಿನಹಳ್ಳಿಯ ಶ್ರೀಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಾರ್ಯದರ್ಶಿ ಕುರುಬರ ಹೇಮೇಶ್ವರ ತಂಡದವರಿಂದ ಕ್ಷಯ ರೋಗ ಕುರಿತ ಬೀದಿ ನಾಟಕ ಪ್ರದರ್ಶನಗೊಂಡಿತು. ವೈದ್ಯಾಧಿಕಾರಿ ಡಾ.ರಾಧಿಕಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಕಲಾವಿದರಾದ ಹೇಮೇಶ್ವರ, ಚಂದ್ರಶೇಖರ್, ಪರಮೇಶ್, ದೊಡ್ಡ ಬಸಪ್ಪ, ಹುಲಿಯಪ್ಪ, ಡಿ.ಶ್ವೇತಾ ಸೇರಿ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು.