ಬಳ್ಳಾರಿಯಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಣೆ ; ವೋಟರ್ ಐಡಿಯಷ್ಟೇ ಅಲ್ಲ ಅದೊಂದು ಮಹತ್ವದ ಜವಾಬ್ದಾರಿ: ಜಿಲ್ಲಾಧಿಕಾರಿ
ಬಳ್ಳಾರಿ 25: ಮತದಾರರ ಗುರುತಿನ ಚೀಟಿ ಎನ್ನುವುದು ಕೇವಲ ಐಡಿ ಕಾರ್ಡ್ ಅಲ್ಲ ದೇಶದ ಯೋಗ್ಯ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತ್ತು ದೇಶದ ವ್ಯವಸ್ಥೆ ಸರಿಯಾಗಿ ಮುನ್ನಡೆಸುವಂತೆ ಮಾಡುವ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು.
ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಮಂಗಳವಾರ ಏರಿ್ಡಸಿದ್ದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅತ್ಯಂತ ಅಮೂಲ್ಯವಾದುದು. ತಾವು ಮತಚಲಾಯಿಸುವಾಗ ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯೋಗ್ಯ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಿ ಅಂತವರಿಗೆ ಮತಚಲಾಯಿಸಬೇಕು ಎಂದರು.
ಯೋಗ್ಯ ಅಭ್ಯರ್ಥಿಗಳಿಗೆ ಮತಚಲಾಯಿಸಿದರೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ಮುನ್ನಡೆಯಲು ಸಾಧ್ಯ ಎಂದು ಹೇಳಿದ ಡಿಸಿ ಮಾಲಪಾಟಿ ಅವರು ಮತದಾನ ಮಾಡುವುದರಿಂದ ವಿಮುಖರಾಗದೇ ಪ್ರತಿ ಚುನಾವಣೆಯಲ್ಲಿ ತಮ್ಮ ಅಭಿಪ್ರಾಯವನ್ನು ತಮ್ಮ ಮತದ ಮೂಲಕ ದಾಖಲಿಸಬೇಕು ಎಂದರು.
ಎಸ್ಪಿ ಸೈದುಲು ಅಡಾವತ್ ಅವರು ಮಾತನಾಡಿ, ದೇಶದಲ್ಲಿರುವ ಪ್ರತಿಯೊಬ್ಬರ ಮತಕ್ಕೂ ಒಂದೇ ಮೌಲ್ಯವಿದೆ.ಮತದಾನದಲ್ಲಿ ಶೇಕಡವಾರು ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು,ಯಾರು ಕೂಡ ಮತದಾನದಿಂದ ವಿಮುಖರಾಗದೇ ಕಡ್ಡಾಯವಾಗಿ ಮತಚಲಾಯಿಸಬೇಕು ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್, ತಹಸೀಲ್ದಾರ್ ರೆಹಮಾನ್ ಪಾಶಾ ಸೇರಿದಂತೆ ಜಿಲ್ಲಾಧಿಕಾರಿಕಾರಿ ಕಚೇರಿಯ ಚುನಾವಣಾ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
*ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ: ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಏರಿ್ಡಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಜಿಲ್ಲಾಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ವಿತರಿಸಿದರು.
ಪ್ರೌಢಶಾಲಾ ಹಂತ: ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಯು.ನಂದಿತಾ 9ನೇ ತರಗತಿ ತೋರಣಗಲ್ ಸರಕಾರಿ ಪ್ರೌಢಶಾಲೆ(ದ್ವಿತೀಯ ಸ್ಥಾನ). ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಅಶ್ವಿನಿ ಕುರುಗೋಡು ಆದರ್ಶ ವಿದ್ಯಾಲಯ 10ನೇ ತರಗತಿ(ಪ್ರಥಮ ಸ್ಥಾನ). ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಕಾಳಿಕಾ ಹೊಸನೆಲ್ಲುಡಿ ಕುರುಗೋಡು ತಾಲೂಕು(ಪ್ರಥಮ ಸ್ಥಾನ). ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹನಾ ಕೆ, ವಿದ್ಯಾ ಕುರುಗೋಡು ಆದರ್ಶ ವಿದ್ಯಾಲಯ(ಪ್ರಥಮ), ನಂದಿತಾ,ಸಹನಾ ತೋರಣಗಲ್ ಸರಕಾರಿ ಪ್ರೌಢಶಾಲೆ(ದ್ವಿತೀಯ).
ಪಿಯು ವಿಭಾಗ: ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಎಂ.ಸಿಂಧುಜಾ(ದ್ವಿತೀಯ),ಎನ್.ಹರ್ಷಿತಾ(ತೃತೀಯ). ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ರಾಜು.ಬಿ.ಎಸ್ (ದ್ವಿತೀಯ). ಭಿತ್ತಿಚಿತ್ರಗಳ ಸ್ಪರ್ಧೆಯಲ್ಲಿ ಎನ್.ಧನಲಕ್ಷ್ಮೀ(ಪ್ರಥಮ),ಎಂ.ವಿಷ್ಣುವರ್ಧನ ರೆಡ್ಡಿ(ದ್ವಿತೀಯ), ಕೆ.ಎಂ.ಪವಿತ್ರಾ(ತೃತೀಯ).ಪದವಿ ಹಂತದ ವಿಭಾಗ: ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪಲ್ಲವಿ(ಪ್ರಥಮ), ಡಿ.ದುರ್ಗಮ್ಮ(ತೃತೀಯ). ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಐಶ್ವರ್ಯ (ಪ್ರಥಮ), ಸಂಧ್ಯಾ ಆರ್.ಬಿ(ತೃತೀಯ). ಭಿತ್ತಿಚಿತ್ರ ಸ್ಪರ್ಧೆ ಜೀವಾ.ಪಿ(ಪ್ರಥಮ),ಜೆ.ದೇವಮ್ಮ(ದ್ವಿತೀಯ), ಸಿ.ಆದಿಲಕ್ಷ್ಮೀ(ತೃತೀಯ).
ಪ್ರೌಢಶಾಲಾ ವಿಭಾಗದ ಭಿತ್ತಿಚಿತ್ರಗಳ ಸ್ಪರ್ಧೆಯಲ್ಲಿ ಕಾಳಿಕಾ ಎಂ,ಅಶ್ವಿನಿ ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ಅವರಿಗೂ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.
ಯುವ ಮತದಾರರಾದ ಚಂದ್ರಶೇಖರ್, ರಂಗನಾಯಕಲು ಬಿ.ಟಿ,ಕಮಲ, ಸಿ.ಎಚ್.ಸುಪ್ರಜ, ಏಡಮಲ್ಲಾ ಮಾಧವಿ ಅವರಿಗೆ ಜಿಲ್ಲಾಧಿಕಾರಿ ಮಾಲಪಾಟಿ ಅವರು ಗುರುತಿನ ಚೀಟಿಗಳನ್ನು ವಿತರಿಸಲಾಯಿತು.ಉತ್ತಮ ಬಿಎಓ ಪ್ರಶಸ್ತಿಗೆ ಭಾಜನರಾದ ಲಕ್ಷ್ಮೀದೇವಿ ಅವರನ್ನು ಸನ್ಮಾನಿಸಲಾಯಿತು.