ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮ
ಬಳ್ಳಾರಿ 25: ಜನತೆಯ ರಕ್ಷಣೆ ಮತ್ತು ಸುರಕ್ಷಿತ ಸಂಚಾರ ಮಾಡಿಕೊಡುವುದು ನಮ್ಮ ಕರ್ತವ್ಯವಾಗಿದ್ದು, ಪ್ರತಿ ವಿದ್ಯಾರ್ಥಿ ಚಾಲನೆ ಮಾಡಬೇಕಾದರೆ ನಿಗದಿತ ವಯಸ್ಸು ತುಂಬಿರಬೇಕು, ಲೈಸನ್ಸ್ ಹೊಂದಿರಬೇಕು, ಪ್ರತಿವರ್ಷ ರಸ್ತೆ ಅಪಘಾತಗಳಿಂದ ಎರಡು ಲಕ್ಷ ಜನರು ಮೃತಪಡುತ್ತದ್ದಾರೆ. ಆದ್ದರಿಂದ ನಿಮ್ಮ ಜೀವನ, ಪೋಷಕರ ಬಗ್ಗೆ ಜವಾಬ್ದಾರರಾಗಿರಬೇಕು ಎಂದು ಪೋಲೀಸ್ ಇನ್‍ಸ್ಪೆಕ್ಟರ್ ನಾಗರಾಜ ಮಾಡಹಳ್ಳಿ ಹೇಳಿದರು.
ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜ.25ರಂದು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಜರುಗಿತು.
ಪ್ರಾಂಶುಪಾಲ ಡಾ. ಕುಪ್ಪಗಲ್ ವೀರೇಶ್ ಸ್ವಾಗತ ಭಾಷಣ ಮಾತನಾಡಿ, ಇಂಜನೀಯರಿಂಗ್ ವಿದ್ಯಾರ್ಥಿಗಳು ಹೆಚ್ಚುವರಿ ಬಳಸುವುದು ಮೋಟಾರ್ ಬೈಕ್‍ಗಳು, ಹಾಗು ಹಲವಾರು ಕಾರಣಗಳಿಂದ ವೇಗದಚಾಲನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ, ಆದರೆ ಪ್ರತಿಯೊಬ್ಬರು ಪ್ರತಿ ಜೀವನ, ನಮ್ಮ ದೇಶಕ್ಕೆ ಹಾಗೂ ಅವರ ಕುಟುಂಬಗಳಿಗೆ ಅವಸರವಿದೆ. ಈ ನಿಟ್ಟಿನಲ್ಲಿ, ರಸ್ತೆ ಸುರಕ್ಷತಾ ಜಾಗೃತಿ ನೀಡುವುದು ನಮ್ಮ ಪ್ರಧಾನ ಕರ್ತವ್ಯ, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಪಡಿಸಿದರು.
ಪೊಲೀಸ್ ಸಬ್ ಇನ್ಸಪೆಕ್ಟರ್ ಲಕ್ಷ್ಮೀಪತಿ, ಪೊಲೀಸ್ ಅಸಿಸ್ಟಂಟ್ ಸಬ್-ಇನ್ಸಫೆಕ್ಟರ್ ಸುರೇಷ್ ಮಾತನಾಡಿದರು.
ಪೊಲೀಸ್ ಇನ್ಸಪೆಕ್ಟರ್ ನಾಗರಾಜ ಮಾಡಹಳ್ಳಿ, ಪೊಲೀಸ್ ಸಬ್-ಇನ್ಸ್ಪೆಕ್ಟರ್ ಲಕ್ಷ್ಮೀಪತಿ, ಪೊಲೀಸ್ ಅಸಿಸ್ಟಂಟ್ ಸಬ್-ಇನ್ಸ್ಪೆಕ್ಟರ್ ಸುರೇಷ್ , ಪ್ರಾಂಶುಪಾಲರಾದ ಡಾ. ಕುಪ್ಪಗಲ್ ವೀರೇಶ್ ಉಪಪ್ರಾಂಶುಪಾಲರಾದ ಡಾ.ಟಿ. ಹನುಮಂತರೆಡ್ಡಿ, ಮತ್ತು , ಡಾ. ಸವಿತಾ ಸೋನಾಲಿ , ಹಾಗು ಸಂಯೋಜಕರು ಡಾ.ಜೇವರ್ಗಿ ಪಕ್ಕೀರಪ್ಪ, ಡಾ.ಬಿ.ಸುಮಂಗಳ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿವೃಂದದವರು, ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಅಪರ್ಣ ವಸ್ತ್ರ್ತದ್ ಇವರು ನಿರೂಪಣೆ ಮಾಡಿದರು. ಅಲ್ಲದೆ ಡಾ. ಜೇವರ್ಗಿ ಪಕ್ಕೀರಪ್ಪ, ಇವರು ವಂದನಾರ್ಪಣೆ ಮಾಡಿದರು