ಹಗರಿಬೊಮ್ಮನಹಳ್ಳಿ

ತಂಬ್ರಹಳ್ಳಿ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ತಂಬ್ರಹಳ್ಳಿ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ಹಗರಿಬೊಮ್ಮನಹಳ್ಳಿ20 : ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಜರುಗಿತು. 

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್‌.ಬಿ. ನಾಗನಗೌಡ್ರು ಉದ್ಘಾಟಿಸಿ ಮಾತನಾಡಿ ಗ್ರಂಥಾಲಯಗಳು ಜ್ಞಾನದ ದೇಗುಲವಿದ್ದಂತೆ ಅವುಗಳಲ್ಲಿ ಧ್ಯಾನಾಸಕ್ತರಾಗಿ ಓದಿ ಅರ್ಥೈಸಿಕೊಂಡರೆ ಜೀವನ ಸಾರ್ಥಕ ರೂಪ ತಾಳುತ್ತದೆ, ಗ್ರಂಥಾಲಯಗಳು ಜ್ಞಾನ ಬಂಢಾರವನ್ನು ಒದಗಿಸುತ್ತವೆ, ಎನು ಬೇಕಾದರೂ ಕದಿಯಬಹುದು ಆದರೆ ಒದಿನಿಂದ ಪಡೆದ ಜ್ಞಾನ ಎಂದಿಗೂ ಕದಿಯಲಾಗುವುದಿಲ್ಲ ಪ್ರತಿಯೊಬ್ಬರೂ ಪುಸ್ತಕಗಳನ್ನು ಒದುವ ಹವ್ಯಾಸ ಬೇಳೆಸಿಕೊಳ್ಳಬೇಕು ಪುಸ್ತಕಗಳಿಗಿಂತ ಬೇರೆ ಉತ್ತಮ ಗೆಳೆಯ ಇನ್ನೊಬ್ಬರಿಲ್ಲ ಎಂದರು. 

ಗ್ರಾಮೀಣ ಅಭಿವೃಧ್ಧಿ ಪಂಚಾಯತ್ ರಾಜ್ ಇಲಾಖೆಗೆ ಗ್ರಂಥಾಲಯಗಳು ಒಳಪಟ್ಟಿದಾಗಿನಿಂದ ಅಭಿವೃಧ್ಧಿ ಪಥದತ್ತ ಸಾಗುತ್ತಿವೆ, ಇನ್ನು ಒಂದು ಹೆಜ್ಜೆ ಎಂಬಂತೆ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡುತ್ತಿರುವುದಾಗಿದೆ ಇದರಿಂದ ಗ್ರಂಥಾಲಯಗಳಿಗೆ ಇಂದು ಒದುಗರ ಸಂಖ್ಯೆ ಹೆಚ್ಚಾಗಿದೆ ಇದು ಸಂತಸದ ವಿಷಯವಾಗಿದೆ ಎಂದರು. 

ದಿವಂಗತ ಗುಳಗಿ ನಾಗರಾಜ್ ಅವರ ಸ್ಮರಣಾರ್ಥ ಅವರ ಅಳಿಯರಾದ ಜಿ.ಬಿ.ಸತೀಶ್‌ಗೌಡ ಗ್ರಂಥಾಲಯಕ್ಕೆ 10ಸಾವಿರ ರೂಗಳನ್ನು ದತ್ತಿಯಾಗಿ ಗ್ರಂಥಪಾಲಕರಿಗೆ ನೀಡಿದರು. ಗ್ರಂಥಾಲಯದ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಎಸ್‌ಬಿಐ ನೌಕರ ಗಣೇಶ್ ಹವಾಲ್ದಾರ್ ಮಾತನಾಡಿದರು.ಉತ್ತಮ ಒದುಗ ಎಂದು ಗ್ರಂಥಾಲಯದಿಂದ ಕಡ್ಡಿ ಮಲ್ಲಿಕಾರ್ಜುನ್ ಅವರನ್ನು ಸನ್ಮಾನ ಮಾಡಲಾಯಿತು.ವಿವಿಧ ಸಾಧನೆಗೈದ ಗಣ್ಯರನ್ನು ಈವೇಳೆ ಸನ್ಮಾನಿಸಲಾಯಿತು.ಪುಸ್ತಕ ಪ್ರದರ್ಶನ ನಡೆಯಿತು. 

ಗ್ರಾ.ಪಂ.ಅಧ್ಯಕ್ಷೆ ಪ್ರತಿಭಾ ಗೀರೀಶ್, ಸದಸ್ಯ ಮಹೆಬೂಬ್ ಬಾಷಾ, ಬಸ್ಸಮ್ಮ, ಗ್ರಂಥಾಲಯದ ದತ್ತಿ ದಾನಿಗಳಾದ ಬಿ.ದೇವಿಪ್ರಸಾಧ್, ವೆಂಕೋಬಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನ.20 ಹೆಚ್‌ಬಿಹೆಚ್ 01 : ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಿಮಿತ್ತಾ ಪುಸ್ತಕ ಪ್ರದರ್ಶನ ನಡೆಯಿತು. 


ಸುದ್ದಿ ಓದಿ