ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಆಚರಣೆ
ಬಳ್ಳಾರಿ ನವೆಂಬರ್ 07: ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 7ನೇ ನವೆಂಬರ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗಿತ್ತು.
ಸಮುದಾಯ ಆರೋಗ್ಯ ಕೇಂದ್ರ ರೂಪನಗುಡಿಯಲ್ಲಿ ಕ್ಯಾನ್ಸರ್ ಬಗ್ಗೆ ಆರೋಗ್ಯ ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ, ಮುಖ್ಯವಾಗಿ ಮಹಿಳೆಯರಿಗೆ ಕ್ಯಾನ್ಸರ್ ಕಾಯಲೆ ಬಗ್ಗೆ ಅರಿವು ಮೂಡಿಸಲಾಯಿತು.
“ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ಕಾರ್ಯಕ್ರಮ ಉದ್ಘಾಟಿಸಿದ ಅಸಾಂಕ್ರಾಮಿಕ ರೋಗಗಳ ವಿಭಾಗ ಎನ್ಸಿಡಿ ಘಟಕ ರೂಪನಗುಡಿಯ ವೈದ್ಯಾಧಿಕಾರಿಗಳಾದ ಡಾ.ಚ್.ನಿಜಾಮುದ್ದೀನ್ ಯವರು, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಖಾಯಿಲೆ ಬಹಳ ಪ್ರಬಲವಾಗಿ ಹರಡುತ್ತಿದ್ದು ಹಾಗೂ ಈ ಖಾಯಿಲೆಯಿಂದ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿರುವುದು ಆತಂಕವನ್ನು ಮೂಡಿಸಿದೆ ಎಂದು ತಿಳಿಸಿದರು. ಇದನ್ನು ತಡೆಗಟ್ಟಲು ಮೊದಲನೆಯದಾಗಿ ಈ ಕ್ಯಾನ್ಸರ್ ಖಾಯಿಲೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು. ಈ ಕ್ಯಾನ್ಸರ್ ಖಾಯಿಲೆ ಅಸಹಜವಾದ ಕಣಗಳ ಬೆಳವಣಿಗೆಯಿಂದ ದೇಹದಲ್ಲಿ ಎಲ್ಲಾ ಭಾಗಗಳಿಗೂ ಬರಬಹುದು. ಒಂದು ಅಂಗಕ್ಕೆ (ದೇಹದ ಒಂದು ಭಾಗಕ್ಕೆ) ಬಂದ ಕ್ಯಾನ್ಸರ್ ಕಣಗಳು ಇತರ ಭಾಗಗಳಿಗೂ ಸಾಂಕ್ರಾಮಿಕವಾಗಿ ಹರಡುವುದು. ಈ ಕ್ಯಾನ್ಸರ್ ಖಾಯಿಲೆಯಲ್ಲಿ 4 (ನಾಲ್ಕು) ಹಂತಗಳು ಇರುತ್ತವೆ.ಮೊದಲನೆಯ ಹಂತದಲ್ಲಿ ಇದನ್ನು ಕಂಡು ಹಿಡಿಯುವುದು ಸ್ವಲ್ಪ ಕಷ್ಟಕರವಗಿರುತ್ತದೆ. ಮೊದಲನೆ ಹಾಗೂ ಎರಡನೆ ಹಂತದಲ್ಲಿ ಕಂಡು ಹಿಡಿದರೆ ಈ ಖಾಯಿಲೆಗೆ ಫಲಕಾರಿ ಚಿಕಿತ್ಸೆ ಲಭ್ಯವಿದೆ.ಮೂರನೆ, ನಾಲ್ಕನೇ ಹಂತದಲ್ಲಿ ಈ ಖಾಯಿಲೆಯನ್ನು ಕಂಡು ಹಿಡಿದಲ್ಲಿ ರೆಡಿಯೇಷನ್, ಕೀಮೋಥೆರಪಿ ಚಿಕಿತ್ಸೆ ಲಭ್ಯವಿದ್ದರೂ ಕೂಡ ಇದರ ಗುಣಮುಖ ತೀರ ಕಡಿಮೆ ಇರುತ್ತದೆ. ಆದ ಕಾರಣ ಈ ಕ್ಯಾನ್ಸರ್ ಖಾಯಿಲೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಂತ ಪ್ರಮುಖವಾದ ವಿಷಯವಾಗಿದೆ.ಈ ಕ್ಯಾನ್ಸರ್ ಖಾಯಿಲೆ ದೇಹದಲ್ಲಿ ಎಲ್ಲಾ ಭಾಗಗಳಿಗೂ, ಅಂಗಗಳಿಗೂ ಬರಬಹುದು. ಇದರಲ್ಲಿ ಮುಖ್ಯವಾಗಿ ಶ್ವಸಕೋಶಗಳಿಗೆ ಬರುವ ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೋಶಕ್ಕೆ ಬರುವ ಕ್ಯಾನ್ಸರ್ ಪ್ರಮುಖವಾದವು ಎಂದರು.
ಈ ಖಾಯಿಲೆಯ ಚಿಕಿತ್ಸೆಯಲ್ಲಿ ಪ್ರಮುಖವಾದ ರೇಡಿಯೇಷನ್ ಚಿಕಿತ್ಸೆಯಲ್ಲಿ ಬಳಸುವ ರೇಡಿಯಂ ಮತ್ತು ಪೋಲೋನಿಯಂಗಳನ್ನು ಕಂಡುಹಿಡಿದ “ಮೇಡಂ ಕ್ಯೂರಿ” ಯವರ ಜನ್ಮ ದಿನಾಂಕವನ್ನು “ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಾಗಿ 2014 ರಿಂದ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸುವುದು ಶ್ಲಾಘನೀಯ. ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಮೇಡಂ ಕ್ಯೂರಿ ಯವರು ಎರಡು ಬಾರಿ ನೋಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಹೆಚ್.ನಿಜಾಮುದ್ದೀನ್ಯವರು ತಿಳಿಸಿದರು.
ತದನಂತರ ಮಹಿಳಾ ಮತ್ತು ಪ್ರಸೂತಿ ತಜ್ಞ ವೈದ್ಯರಾದ ಡಾ.ಮೌನಿಕಾ ಜೋಲಾಪುರಂ ಇವರು ಮಹಿಳೆಯರಿಗೆ ಸರ್ವೇಸಾಮಾನ್ಯವಾಗಿ ಬರುವ ಸ್ತನ ಕ್ಯಾನ್ಸರ್ ಹೇಗೆ ಬರುತ್ತದೆ.ಹಾಗೂ ಹೇಗೆ ಕಂಡುಹಿಡಿಯುವುದು, ಸ್ತನ ಕ್ಯಾನ್ಸರ್ಗೆ ಚಿಕಿತ್ಸಾ ವಿಧಾನಗಗಳ ಬಗ್ಗೆ ವಿವರಿಸಿದರು.
ಮತ್ತೋರ್ವ ಮಹಿಳಾ ಮತ್ತು ಪ್ರಸೂತಿ ತಜ್ಞ ವೈದ್ಯರಾದ ಡಾ.ಚಿತ್ರಾ ವರ್ನೇಕರ್ ಇವರು ಮಹಿಳೆಯರಿಗೆ ಬರುವ ಗರ್ಭಕೋಶದ ಕ್ಯಾನ್ಸರ್ ಅದರ ಲಕ್ಷಣಗಳು, ಅದನ್ನು ಹೇಗೆ ಕಂಡುಹಿಡಿಯಬಹುದು, ಅದಕ್ಕಾಗಿ ಲಭ್ಯವಿರುವ ಪರೀಕ್ಷೆಗಳು ಹಾಗೂ ಚಕಿತ್ಸಾ ವಿಧಾನಗಳ ಬಗ್ಗೆ ಸವಿವರವಾಗಿ ವಿವರಿಸಿದರು.
ದಂತ ತಜ್ಞರಾದ ಡಾ.ಪ್ರಿಯಾಂಕ ರೆಡ್ಡಿ ಯವರು ಬಾಯಿ ಮತ್ತು ಗಂಟಲು ಕ್ಯಾನ್ಸರ್ನ ಬಗ್ಗೆ ಮತ್ತು ಅದಕ್ಕೆ ಕಾರಣಗಳಾದ ಬೀಡಿ, ಸಿಗರೇಟು, ತಂಬಾಕು, ಗುಟ್ಕಾ ಸೇವನೆಯಿಂದ ಮುಖ್ಯವಾಗಿ ಗಂಡಸರಲ್ಲಿ ಬರುವ ಬಾಯಿ ಮತ್ತು ಗಂಟಲು, ಹೊಸಡುಗಳ ಕ್ಯಾನ್ಸರ್ನ ಬಗ್ಗೆ ವಿವರಿಸಿದರು.
ಪ್ರಪ್ರಥಮವಾಗಿ ಡಾ.ನಾರಾಯಣ ಬಾಬು ಕಾರ್ಯಕ್ರಮದಲ್ಲಿ ಡಾ.ನಾರಾಯಣ ಬಾಬು, ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ, ಎನ್.ಸಿ.ಡಿ ವಿಭಾಗದ ಸಿಬ್ಬಂದಿಯಾದ ಅನಿಲ್,ಜಗದೀಶ್, ಉಮಾಮತ್ತಿತರರು ಉಪಸ್ಥಿತರಿದ್ದರು, ಅಂತಿಮವಾಗಿ ವಂಧನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.