ಬಳ್ಳಾರಿ

ಉಚಿತ ಸೇವೆ ಸಲ್ಲಿಸಲು ಗುಜರಾತ್‍ನಿಂದ ಆಗಮಿಸಿದ ನಸಿರ್ಂಗ್ ವಿದ್ಯಾರ್ಥಿಗಳು

ಉಚಿತ ಸೇವೆ ಸಲ್ಲಿಸಲು ಗುಜರಾತ್‍ನಿಂದ ಆಗಮಿಸಿದ ನಸಿರ್ಂಗ್ ವಿದ್ಯಾರ್ಥಿಗಳು

ಬಳ್ಳಾರಿ 19: ಕೊರೊನಾ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾರೂ ಮುಂದೆ ಬರುತ್ತಿಲ್ಲ, ಎಲ್ಲಾ ಕಡೆ ವೈದ್ಯಕಿಯ ಸಿಬ್ಬಂದಿ ಕೊರತೆ ಉಂಟಾಗಿದೆ. ಇಂತಹ ಸಂದೀಗ್ಧ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ನೀಡಲು ಗುಜರಾತ್‍ನ ಸೂರತ್‍ನಿಂದ 18 ವಿದ್ಯಾರ್ಥಿಗಳು ಸ್ವ ಇಚ್ಚೆಯಿಂದ ಸೇವೆ ಮಾಡಲು ಮುಂದೆ ಬಂದಿದ್ದಾರೆ.ಹೌದು ಕೋವಿಡ್ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹರಡುತ್ತಿದೆ. ಇಂತಹ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಅವರ ಆರೋಗ್ಯ ಕಾಪಾಡಲು ವೈದ್ಯಕೀಯ ಸಿಬ್ಬಂದಿಯ ಕೊರತೆ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಬೆಸ್ಟ್ ನರ್ಸಿಗ್ ಕಾಲೇಜಿನ ಅಂತಿಮ ವμರ್Àದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹಾಗೂ ಕೋವಿಡ್ ಕಾರಣದಿಂದ ತಮ್ಮ ಊರುಗಳಿಗೆ ತೆರಳಿದ್ದ ಗುಜರಾತ್ ರಾಜ್ಯದ ವಿದ್ಯಾರ್ಥಿಗಳು ಬಳ್ಳಾರಿ ಜಿಲ್ಲೆಯ ಜಿಂದಾಲ್ ಎದುರುಗಡೆ ನಿರ್ಮಾಣವಾಗುತ್ತಿರುವ 1ಸಾವಿರ ಹಾಸಿಗೆಗಳ ಆಕ್ಸಿಜನ್ ಸಹಿತ ಕೋವಿಡ್ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ.

ನಗರದ ಬೆಸ್ಟ್ ನಸಿರ್ಂಗ್ ಕಾಲೇಜಿನ 18 ವಿದ್ಯಾರ್ಥಿಗಳು ಗುಜರಾತ್ ರಾಜ್ಯದಿಂದ ಮಂಗಳವಾರ ಸಂಜೆ ಆಗಮಿಸಿದ್ದು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ವ್ ತಂಡದ ಸದಸ್ಯರು ಮತ್ತು ಸ್ವಯಂ ಸೇವಕರು ಗುಲಾಬಿ ಹೂಮಳೆ ಸುರಿಸುವ ಮೂಲಕ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.ಕೋವಿಡ್ ಕಾರಣ ತವರಿಗೆ ತೆರಳಿದ್ದ ವಿದ್ಯಾರ್ಥಿಗಳು ಸೇವೆ ಸಲ್ಲಿಸಲು ಮುಂದೆ ಬಂದಿರುವುದು ಒಂದು ಉತ್ತಮ ಬೆಳವಣಿಗೆ. 18 ಜನ ನಸಿರ್ಂಗ್ ವಿದ್ಯಾರ್ಥಿಗಳ ಆಗಮನ 1ಸಾವಿರ ಆಕ್ಸಿಜನ್ ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರೆತೆಯನ್ನು ನೀಗಿಸುವುದರ ಜೊತೆಗೆ ಜಿಲ್ಲಾಡಳಿತದ ಕಾರ್ಯಕ್ಕೆ ಕೈಜೋಡಿಸಿದಂತಾಗಲಿದೆ.

ಇನ್ನೊಂದು ತಂಡವು ಇದೇ ರೀತಿ ಸೇವೆ ಸಲ್ಲಿಸಲು ಜಿಲ್ಲೆಗೆ ಶೀಘ್ರ ಆಗಮಿಸಲಿದೆ ಎಂದು ರೆಡ್ ಕ್ರಾಸ್ ಕಾರ್ಯದರ್ಶಿ μÀಕೀಬ್ ಅವರು ತಿಳಿಸಿದರು. ಜಿಂದಾಲ್ ಬಳಿ ನಿರ್ಮಿಸಲಾಗಿರುವ 1ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ತಮ್ಮ ಸ್ವ ಇಚ್ಛೆಯಿಂದ ಮಾನವಿಯ ಸೇವೆಯನ್ನು ಮಾಡಲು ಮುಂದೆ ಬಂದವರನ್ನು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಗುಲಾಬಿ ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು. ರೈಲ್ವೆ ನಿಲ್ದಾಣಕ್ಕೆ ಬಂದ ನಂತರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದ ನಂತರ ಟೀ, ಬಿಸ್ಕೆಟ್, ಬನ್ ಮತ್ತು ತಂಪು ಪಾನಿಯವನ್ನು ನೀಡಿ ಬಸ್ ಮುಖಾಂತರ ಜಿಂದಾಲಿನ 1ಸಾವಿರ ಹಾಸಿಗೆಗಳ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.ಈ ಸಮಯದಲ್ಲಿ ಬೆಸ್ಟ್ ನಸಿರ್ಂಗ್ ಕಾಲೇಜಿನ ಮುಖ್ಯಸ್ಥರಾದ ಸತ್ಯನಾರಾಯಣ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎ.μÀಕೀಬ್, ಬೆಸ್ಟ್ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ, ಭರತ್ ಜೈನ್, ಖಾಜಾ ಮೈನುದ್ದೀನ್, ಶಮೀಮ್ ಜಕಾಲಿ, ರಿಜ್ವಾನ, ಮೈನುದ್ದೀನ್ ಜಕಾಲಿ, ಶ್ವೇತಾ ಮತ್ತು ಮಂಜುನಾಥ್ ಹಾಗೂ ಇತರರು ಇದ್ದರು.

ಸುದ್ದಿ ಓದಿ