ಶಿಗ್ಗಾವ್

ನರೇಂದ್ರ ಮೋದಿಜಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ

ನರೇಂದ್ರ ಮೋದಿಜಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ

ಶಿಗ್ಗಾವಿ 25: ಪಟ್ಟಣದ ಮಹಿಳಾ ಮೋರ್ಚಾ ಭಾಜಪ ಪ್ರ.ಕಾರ್ಯದರ್ಶಿ ಸಂಜನಾ ರಾಯ್ಕರ ನೇತೃತ್ವದಲ್ಲಿ ಅವರ ಮನೆಯಲ್ಲಿ  ನರೇಂದ್ರ ಮೋದೀಜೀಯವರ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಲಾಯಿತು .ನಂತರ ಮನೆಯ ಮೇಲೆ ಪಕ್ಷದ ಬಾವುಟವನ್ನು ಹಾರಿಸಿ ನರೇಂದ್ರ ಮೋದಿಯವರಿಗೆ ಭಾಜಪ ಮಹಿಳಾ ಮೋರ್ಚಾದ ಸದಸ್ಯರೆಲ್ಲರೂ ಸೇರಿ ವಂದನೆಯನ್ನು ಸಲ್ಲಿಸಿದರು ನಂತರ ಮನೆಯ ಬಾಗಿಲ ಮುಂದೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಉಷಾ ಬಿಳಿಕುದುರಿ, ರತ್ನಾ ಬನ್ನಿಕೊಪ್ಪ ,ನಿರ್ಮಲ ಎಡೆಪ್ಪನವರ, ನೀಲವ್ವ ಕಾಲವಾಡ, ಭಾರತೀ ರಾಂಪುರಮಠ, ನಿರ್ಮಲ ಸೌದತ್ತಿ, ನಾಗರತ್ನ ಕುನ್ನೂರ,. ವಿದ್ಯಾ ಮುಂಡಗೋಡ, ಮಂಜುಳ ಭದ್ರಶೆಟ್ಟಿ,  ರತ್ನಾ ಕೋಣನವರ, ರೇಣುಕಾ ಕಲಾಲ, ರಾಜೇಶ್ ರಾಯ್ಕರ್, ಶಿವಣ್ಣ ಬಿಳಿ ಕುದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ