ಬಳ್ಳಾರಿ

ನಾರಾ ಸೂರ್ಯ ನಾರಾಯಣ ರೆಡ್ಡಿ ಹುಟ್ಟು ಹಬ್ಬ: ಒಂದು ಕೋಟಿ ರೂ. ದೇಣಿಗೆ

ನಾರಾ ಸೂರ್ಯ ನಾರಾಯಣ ರೆಡ್ಡಿ ಹುಟ್ಟು ಹಬ್ಬ: ಒಂದು ಕೋಟಿ ರೂ. ದೇಣಿಗೆ

ಲೋಕದರ್ಶನ ವರದಿ 

ಬಳ್ಳಾರಿ 04: ಕೆಪಿಸಿಸಿ ಮಾಜಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ, ಜನಪ್ರಿಯ ನಾಯಕ ನಾರಾ ಸೂರ್ಯ ನಾರಾಯಣ ರೆಡ್ಡಿಯವರು ಹುಟ್ಟು ಹಬ್ಬದ ಪ್ರಯುಕ್ತ ಎಸ್‌.ವಿ.ಬಿ.ಸಿ ತಿರುಪತಿ ತಿರುಮಲ ದೇವಸ್ಥಾನ ಸನ್ನಿಧಿಯ ಒಂದು ಕೋಟಿ ರೂಪಾಯಿಗಳನ್ನು ದೇವಸ್ಥಾನದ ಟ್ಟಸ್ಟ್‌ಗೆ ಅನ್ನದಾನ ಕಾರ್ಯಕ್ರಮಕ್ಕಾಗಿ ನೀಡಿದರು.  


ಈ ಸಂದರ್ಭದಲ್ಲಿ ನಾರಾರೆಡ್ಡಿಯವರು ಮಾತನಾಡಿ, ದೇವರು ನನಗೆ ಒಳ್ಳೆಯ ಆರೋಗ್ಯ ಮತ್ತು ಐಶ್ವರ್ಯವನ್ನು ನೀಡಿದ್ದಾರೆ ಇದರಿಂದ ನಾನು ಸ್ವಾಮಿಯ ಭಕ್ತರಿಗೆ ಅನ್ನದಾನವನ್ನು ನಡೆಸಲು ನನ್ನ ಅಲ್ಪ ಸೇವೆಯನ್ನು ಮಾಡಿದ್ದೇನೆಂದರು. ಮುಂದಿನ ದಿನಗಳಲ್ಲಿ ನನ್ನ ಮಕ್ಕಳು ದೇವರ ಆಶೀರ್ವಾದದಿಂದ ರಾಜಕೀಯವಾಗಿ ಮತ್ತು ವ್ಯವಹಾರಿಕವಾಗಿ ಹಾಗೂ ಆರ್ಥಿಕವಾಗಿ ಬೆಳೆದು ಇದೇ ರೀತಿಯಾಗಿ ದೇವರು ಆಶೀರ್ವಾದವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದರು.  

ವಿಶ್ವದ ಸರ್ವ ಜನರು ಕೋರೋನಾದಿಂದ ಮುಕ್ತಿ ಹೊಂದಬೇಕೆಂದು ಸಹ ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದರು.  


ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಜಗದೀಶ್, ನಾಗರಾಜರೆಡ್ಡಿ, ಪಟೇಲ್‌ನಗರದ ವೆಂಕಟ್ ಯಾದವ್, ಕಾರ್ತಿಕ್ ಮತ್ತು ನಾರಾಯಣರೆಡ್ಡಿಯವರ ಅಪಾರ ಅಭಿಮಾನಿಗಳು ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದರು. 


ಸುದ್ದಿ ಓದಿ