ಲೇಖನಗಳು

ನಗು ಎಂದಿದೆ ಮಂಜಿನ ಬಿಂದು

ನಗು ಎಂದಿದೆ ಮಂಜಿನ ಬಿಂದು


ಮನುಷ್ಯನ ಬದುಕಿಗೆ ನವರಸಗಳು ಬೇಕೆ ಬೇಕು. ಆಯಾಕಾಲಕ್ಕೆ ತಕ್ಕಂತೆ ಮನುಷ್ಯ ವರ್ತನೆಗಳು ಬದಲಾಗುತ್ತ ಹೋಗುತ್ತದೆ. ತಮ್ಮ ಇರು"ಕೆಗೆ, ತಮ್ಮ ಸ್ವಾತಂತ್ರ್ಯಕ್ಕೆ, ತಮ್ಮತನವನ್ನು  ಉಳಿಸಿಕೊಳ್ಳುವುದಕ್ಕೆ ಎಲ್ಲ ರೀತಿಯ ಭಾವಗಳು ಜೊತೆಯಾಗಿರಬೇಕು. ಆದರೆ ನಾವು ಯಾವ ಜಾಗದಲ್ಲಿ, ಯಾವ ಸನ್ನಿವೇಶದಲ್ಲಿ ಹೇಗಿರಬೇಕು ಎನ್ನುವದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ನಾವು ಅಭಾಸರಾಗಿ ಕಂಡವರಿಗೆ ನೆಗೆಪಾಟಲಾಗಿ ಬಿಡುತ್ತೇವೆ. 

ನಗು ಮತ್ತು ಕೋಪ ಒಂದು ನಾಣ್ಯದ ಎರಡು ಮುಖಗಳು. ಆದರೆ ಒಳ್ಳೆಯ ಜೀವನಕ್ಕೆ ತೊಂಬತ್ತು ಪರ್ಸೆಂಟ್ ನಗು"ರಬೇಕು. ಹತ್ತು ಪರ್ಸೆಂಟ್ ಕೋಪ ಇರಬೇಕು ಎಂದು "ರಿಯರು ಹೇಳುತ್ತಾರೆ. ಸಿಟ್ಟು ಕೇವಲ ಅಲ್ಲಿಯ ವಾತಾವರಣವನ್ನು ಮಾತ್ರ ಅಶುದ್ಧ ಗೊಳಿಸುವುದಿಲ್ಲ. ಸಂಬಂಧ ಹಾಳು ಮಾಡುತ್ತದೆ, ಅನಾರೋಗ್ಯ ಸ್ಟೃಸುತ್ತದೆ,. ಒಂದು ಕೋಪ ಮನಸ್ಸು ಮನಸ್ಸಿನ ನಡುವೆ, ಮನೆ ಮನೆಗಳ ನಡುವೆ, ಹಳ್ಳಿ ಹಳ್ಳಿಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ, ದೇಶ ದೇಶಗಳ ನಡುವೆ ಉದ್ವಿಗ್ನವನ್ನು ಸ್ಟೃಸಿ ಬಿಡುವುದು.  

ಆದರೆ ನಗು ಹಾಗಲ್ಲ. ಒಂದು ನಗು ಇಡೀ ಜಗತ್ತನ್ನೆ ಗೆಲ್ಲಬಹುದು ಎಂದು ಹೇಳುತ್ತಾರೆ. ನಿಜ ನಗು"ನಲ್ಲಿ ಆ ತಾಕತ್ತಿದೆ. ಅದೆಷ್ಟೋ ಸಲ ಮನದಲ್ಲಿದ್ದ ಕೋಪವು ತಣಿಸುವುದೇ ಈ ನಗು. ಯಾರದ್ದೋ ಮೇಲಿನ ಕೋಪದಲ್ಲಿ ಮನೆಗೆ ಬಂದು ಹೆಂಡತಿ ಮಕ್ಕಳ ಮೇಲೆ ಕೂಗಾಡುವುದು ಕಾಣುತ್ತೇವೆ. ಆಗೆಲ್ಲ ಹೆಂಡತಿ ಮಕ್ಕಳು ಮುನಿಸಿಕೊಂಡರೆ ಸಂಸಾರ ಪಾಲಾಗಿ ಬಿಡಬೇಕಿತ್ತು. ಹಾಗಾಗುವುದಿಲ್ಲ. ಸಿಟ್ಟಿನಲ್ಲಿ ಮಾತುಗಳು ಬರುತ್ತಿದೆ ಎನ್ನುವದು ಅರ್ಥವಾದಂತೆ ಅಲ್ಲೊಂದು ಮೌನ ವ್ಯಾಪಿಸಿಕೊಳ್ಳುತ್ತದೆ. ಸಿಟ್ಟಿನಿಂದ ಬಂದ ಮಾತುಗಳು ಖಾಲಿಯಾುತು ಎಂದು ಗೊತ್ತಾದ ಮೇಲೆ ಆಕೆ ಕೇಳುತ್ತಾಳೆ ಪ್ರವಚನ ಮುಗಿತೇ? ಎಂದು. ಆತ ಎನ್ನುತ್ತಾನೆ ನಿನಗೆಲ್ಲ ತಮಾಷೆಯೇ, ನನ್ನ ನೋಡಿದ್ರೆ ತಮಾಷೆ ಅನ್ಸುತ್ತೆ ಅಲ್ವ. ಅಂತ. ಅವನು ಆ ಕ್ಷಣಕ್ಕೆ ಹಾಗೆ ಹೇಳಿದ್ದರೂ ಅವನೊಳಗೂ ತಾನು ಕೋಪಿಸಿಕೊಂಡು ಒದರಾಡಿದ ರೀತಿಗೆ ಮನದೊಳಗೆ ನಗು ಬಂದಿರುತ್ತದೆ. ತೋರಿಸಿಕೊಳ್ಳಲಾರ. ಅಲ್ಲಿಗೆ ಆ ಕೋಪ ತಣಿದಿರುತ್ತದೆ.  

ನಗು ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಒಂದು ದಿವ್ಯ ಓಷಧ. ಆ ಓಷಧವನ್ನು ನಾವು ಆಗಾಗ ಸೇ"ಸುತ್ತಲೇ ಇರಬೇಕು. ಹಾಗಂತ ಕಂಡಕಂಡಲ್ಲೆಲ್ಲ ನಮ್ಮ ಹಲ್ಲು ತೋರಿಸುವುದಲ್ಲ. ಒಂದು ಗಂಭೀರವಾದ ಚರ್ಚೆ ನಡೆಯುವಲ್ಲಿ ಯಾವುದೋ ತಮಾಷೆ ಮಾಡಿ ಹ್ಹಹ್ಹಹ್ಹ ಎಂದು ನಕ್ಕರೆ ಉಳಿದವರು ಇವನಿಗೆ ಹುಚ್ಚು "ಡಿತೇ ಎಂದು ಬೆರಗಾಗಿ ಒಂದು ಕ್ಷಣ ನೋಡಬಹುದು. ಬೈಯ್ಯಲುಬಹುದು. ಅದೇ ನಾಲ್ಕು ಜನ ಸೇರಿ ನಗುತ್ತಿರುವಲ್ಲಿ ಗಂಭೀರವಾಗಿ ಕುಳಿತಿರುವುದು ಸಹಜತೆ ಅಲ್ಲ. ನಗು ತರಿಸುವಂತಹ ಮಾತನ್ನು ನಯವಾಗಿ, ತಿಳಿಯಾಗಿ ಹೇಳಿದಾಗ ಎಂಥಹದ್ದೆ ಬಿಗುವಾತಾವರಣ ಇದ್ದರೂ ಅಲ್ಲಿ ತಂಗಾಳಿ ಬೀಸುತ್ತದೆ.  

 ಆತ ಆಫೀಸಿಗೆ ನಿತ್ಯವೂ ನಗುಮೊಗದಿಂದಲೇ ಬರುತ್ತಿದ್ದ. ಅವನ ನಗುಮೊಗ ಎಲ್ಲರಿಗೂ ಇಷ್ಟವಾಗುತಿತ್ತು. ಆದರೆ ಆತನ ನಗು ಮೇಲಧಿಕಾರಿಗೆ ಇಷ್ಟವಾಗುತ್ತಿರಲಿಲ್ಲ. ಮನುಷ್ಯ ಸೀರಿಯಸ್ ಆಗಿರುವುದು ಕಲಿಯಬೇಕು. ಯಾವಾಗಲೂ ನಗುತ್ತ, ಎಲ್ಲರೊಟ್ಟಿಗೆ ಮಾತನಾಡುತ್ತ ಎಲ್ಲವರೂ ನನ್ನವರು ಎಂದು ಹೇಳುತ್ತ ಇರಬಾರದು ಎಂದು ಸಾಕಷ್ಟು ಸಲ ಕ್ಯಾಬಿನ್‌ನಲ್ಲಿ ಮತ್ತು ಹೊರಗಡೆ ಸಿಕ್ಕಾಗಲೂ ಹೇಳಿದ್ದರು. ಆದರೆ ಆತ ತನ್ನ ದಿನಚರಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಆತನ ಸಹೋದ್ಯೊಗಿ ಒಬ್ಬಾತ ಮೇಲಧಿಕಾರಿ ಹೇಳಿದಂತೆ ತುಂಬಾ ಸೀರಿಯಸ್ ಆಗಿ ಇರುತ್ತಿದ್ದ.  ಹಾಗಿರುವಾಗ ಒಮ್ಮೆ ಆ ಕಂಪನಿಗೆ ಚೆಕ್ಕಿಂಗ್ ಎಂದು ಹೆಡ್ ಆಫೀಸಿನಿಂದ ನಾಲ್ಕು ಜನರು ಬಂದಿದ್ದರು. ಕಂಪನಿಯ ಹಲವು ದಾಖಲೆ ಪತ್ರಗಳನ್ನು ಕೇಳಿ ಪಡೆದು ಚೆಕ್ ಮಾಡುತ್ತಿದ್ದರು. ಅವರೆದುರು ನಿಂತ ನಗುಮೊಗದ ವ್ಯಕ್ತಿ ಅವರೊಟ್ಟಿಗೆ ಆಪ್ತವಾಗಿದ್ದು ಅವರು ಸ್ವಲ್ಪ ಸಿಡುಕಿದರೂ ಸಣ್ಣ ನಗು ಚೆಲ್ಲಿ ಬಿಡುತ್ತಿದ್ದ. ಅವರು ತಮ್ಮ ಗರ್ವ ಪಕ್ಕಕ್ಕಿಟ್ಟು ಒಂದಷ್ಟು ತಿಳಿಸಿ ಹೇಳಿ, ಮತ್ತೆ "ಗೆ ಆಗದಂತೆ ನೋಡಿಕೊಳ್ಳಿ ಎಂದಷ್ಟೆ ಹೇಳಿದರು. ಆದರೆ ಗಂಭೀರತೆಯನ್ನು ರೂಢಿಸಿಕೊಂಡವನಿಗೆ ಹೆಡ್ ಆಫಿಸಿನಿಂದ ಬಂದವರ ಮಾತುಗಳು "ಡಿಸಲಿಲ್ಲ ಎಂದು ಕೋಪಿಸಿಕೊಳ್ಳುತ್ತಿದ್ದ. ಏನಾದರೂ ತಿಳಿಸಿ ಹೇಳುತ್ತಿದ್ದರೂ ಅವರೊಟ್ಟಿಗೆ ಬೆರೆಯದೇ, ತನ್ನದೇ ನಡುವಳಿಕೆ ಸರಿ ಎನ್ನುವಂತೆ ನಡೆದುಕೊಂಡ. ಹಾಗಾಗಿ ಅವನ ಹೆಸರಲ್ಲಿ ಒಂದು ಮೆಮೊ ತೆಗೆದು ಹೋಗಿ ಬಿಟ್ಟರು. ಅಂದರೆ ಮುಖದಲ್ಲಿಯ ಒಂದು ಹಂತದ ನಗುವು ಇದ್ದಾಗ ಎಲ್ಲ ಸಮಯವನ್ನು ನಮ್ಮದಾಗಿಸಿಕೊಳ್ಳಬಹುದು ಎನ್ನುವದು ತಿಳಿಯುತ್ತದೆ. 

ಬೆಳೆಸಿದಂತೆಲ್ಲ ಬೆಳೆಯುವುದು ಈ ನಗುವು ಅಂತ 'ಬಿಚಿ'ಯವರುಯವರು ಹೇಳುತ್ತಾರೆ. ಹೌದು ನಗು"ಗೆ ಕೊನೆ ಅನ್ನುವದು ಇಲ್ಲ. ನಗು ಇದ್ದಲೆಲ್ಲ ಹೂವು ಅರಳಿದಂತೆ ಎನ್ನುವ ಮಾತು ಇದೆ. ಒಂದು ಮುಗುಳು ನಗೆ ನಮ್ಮೆದುರಿನ ವ್ಯಕ್ತಿಯ ಹಲ್ಲು ನೋಡಲು ಇರುವ ಅಸ್ತ್ರ ಎಂದು ನಮ್ಮ ಶಿಕ್ಷಕರೊಬ್ಬರು ತಮಾಷೆ ಮಾಡುತ್ತಿದ್ದರು. 'ನಗು ಇದ್ದರೆ ಮೊಗದಲ್ಲಿ, ಮಗು ಇದ್ದಂತೆ ಮನೆಯಲ್ಲಿ, ಮುಖಕ್ಕೆ ತರುವುದು ಕಾಂತಿ, ಮನದಲ್ಲಿ ಮೂಡುವುದು ಶಾಂತಿ ಎಂದು ಕ"ಯೊಬ್ಬ ಬರೆಯುತ್ತಾನೆ. ಹಾಗಂತ ನಗುತ್ತಿದ್ದವರೆಲ್ಲ ಸುಖಿಗಳು ಎಂದೆನಿಲ್ಲ. ಉದಾಹರಣೆಗೆ ಚಾರ್ಲಿ ಚಾಪ್ಲಿನ್ ಎಲ್ಲರನ್ನು ನಗಿಸಿದ. ಆದರೆ ಅವನ ಎದೆಯೊಳಗೆ ನೋ"ನ ಆಳ ಬಹಳವೆ ಇತ್ತು. ಆದರೆ ಕಷ್ಟದಲ್ಲೂ ನಗುತ್ತಾರಲ್ಲ ಅವರಿಗೆ ಸೋಲು ಇರುವುದಿಲ್ಲ. ಅಯ್ಯೋ ನನಗೆ ಕಷ್ಟ"ದೆ. ನನಗೆ ಬದುಕೆ ಸಾಕಾಗಿದೆ ಎನ್ನುವ ಚಿಂತೆ ಮಾಡಿಮಾಡಿ ಸಾವನ್ನು ಬಯಸುವವರು ಇದ್ದಾರೆ. ಆದರೆ ಹೃದಯದಲ್ಲಿ ಅದೆಷ್ಟೇ ನೋ"ದ್ದರೂ ನಗುತ್ತರೆ ಎಂದರೆ ಆತ ಸಾಯುವಂಥ ಕೆಟ್ಟ ನಿರ್ಧಾರ ಮಾಡುವುದಿಲ್ಲ. ಬಂದಿದ್ದನ್ನು ಎದುರಿಸೋಣ ಎಂದುಕೊಳ್ಳುತ್ತ ಇರುತ್ತಾನೆ. 

ಒಂದು ನಿ"ುಷದ ಕೋಪ ಇಡೀ ಜೀವನ ಸುಡುವುದು ಒಂದು ನಿ"ುಷದ ನಗು ಬದುಕಿಗೆ ಉತ್ಸಾಹವನ್ನು ತುಂಬುವುದು. ಬದುಕಿಗೆ ಭರವಸೆಯನ್ನು ಹುಟ್ಟಿ ಹಾಕುವುದು. ಈ ಭರವಸೆಯು ನಮ್ಮ ಹಲವು ಕನಸುಗಳಿಗೆ ಸಹಕಾರ ನೀಡುವುದು. ಭರವಸೆ ಮತ್ತು ಉತ್ಸಾ" ಮನುಷ್ಯ ತನ್ನ ಸಾಧನೆ, ಗುರಿಯತ್ತ ಬೇಗನೇ ನಡೆದು ಬಿಡಬಲ್ಲನು. ಹಾಗಾಗಿ ನಗು ಮನುಷ್ಯನಿಗೆ ಬಹಳ ಮುಖ್ಯ.  


ಸುದ್ದಿ ಓದಿ