ವಿಜಯಪುರ

ನಾಗರಾಜ ಕಬಾಡೆ ಅವರನ್ನು ಹೊಸ ಜಿಲ್ಲಾಧ್ಯಕ್ಷರಾಗಿ ನೇಮಕ

ನಾಗರಾಜ ಕಬಾಡೆ ಅವರನ್ನು ಹೊಸ ಜಿಲ್ಲಾಧ್ಯಕ್ಷರಾಗಿ ನೇಮಕ

ವಿಜಯಪುರ 09: ಭೀಮ್ ರಾಜ್ಯ ದಲಿತ ಸೇವಾ ಸಮೀತಿ (ರಿ) ವತಿಯಿಂದ ಮಹತ್ವದ ಸಂಘಟನೆ ಬಲವರ್ಧನೆ ಕ್ರಮವಾಗಿ, ವಿಜಯಪುರ ಜಿಲ್ಲೆಗೆ ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ನಾಗರಾಜ ಕಬಾಡೆ ಅವರನ್ನು ಭೀಮ್ ರಾಜ್ಯ ದಲಿತ ಸೇವಾ ಸಮಿತಿ (ರಿ) ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ. ಅವರ ಸಾಮಾಜಿಕ ಸೇವೆ, ಸಂಘಟನೆಪರ ಕಾಳಜಿ ಹಾಗೂ ದಲಿತ ಸಮುದಾಯದ ಅಭಿವೃದ್ಧಿಗೆ ತೋರಿದ ಬದ್ಧತೆಯನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ.ಈ ನೇಮಕಾತಿಯನ್ನು ಭೀಮ್ ರಾಜ್ಯ ದಲಿತ ಸೇವಾ ಸಮಿತಿ (ರಿ) ರಾಜ್ಯಾಧ್ಯಕ್ಷರಾದ ಅಪ್ಪುರಾಜ್ ನಿಮಾದಾರ ಅವರು ಘೋಷಣೆ ಮಾಡಿದ್ದಾರೆ.ಹೊಸ ಜಿಲ್ಲಾಧ್ಯಕ್ಷರಾದ ನಾಗರಾಜ ಕಬಾಡೆ ಅವರು ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ, ಸಮಾಜದ ಹಿತಕ್ಕಾಗಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. 


ಸುದ್ದಿ ಓದಿ