ಸಂಭ್ರಮದಿಂದ ನಾಗರ ಪಂಚಮಿ ಆಚರಣೆ
ಲೋಕದರ್ಶನ ವರದಿ
ವಿಜಯಪುರ 18: ಎಬಿವಿ ಶಾಲೆಯಲ್ಲಿ ನಿತ್ಯ ನಡೆಯುವುದು ವಿದ್ಯಾರ್ಜನೆಯ ಯಾಗ, ಸಂಸ್ಕೃತಿಯ ಆಚರಣೆಗೆ ಬೇಕು ಸಮಯದ ತ್ಯಾಗ. ವಿಷ್ಣುವಿನ ಶಯನಕ್ಕೆ ಆಸರೆಯಾದ ಹಿ ಶೇಷನಾಗ, ಸಮುದ್ರ ಮಂಥನದಲ್ಲಿ ಹಗ್ಗನಾದ ಹಿವಾಸುಕಿನಾಗ, ಭಾಗವತದಲ್ಲಿ ಪರೀಕ್ಷಿತ್ ರಾಜನಿಗೆ ಶಾಪನಾದ ಹಿ ತಕ್ಷಕ ನಾಗ ಹೀಗೆ ನಾಗದೇವತೆಗಳ ಆರಾಧನೆಯು ನಮ್ಮ ಪುರಾಣ, ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗ.
ಈ ಮಹತ್ವವನ್ನು ಸಾರುವ ನಾಗರ ಪಂಚಮಿ ಹಬ್ಬವನ್ನು ಸಿದ್ಧೇಶ್ವರ ಸಂಸ್ಥೆಯ ಂಃಗಿ ಅಃಖಇ ಶಾಲೆಯಲ್ಲಿ ಸಾಂಪ್ರದಾಯಿಕ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಶಾಲೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಗರ ಪಂಚಮಿ ಹಬ್ಬದ ಸಂಪ್ರದಾಯ ಮತ್ತು ಮಹತ್ವವನ್ನು ಸ್ಮರಿಸಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ಸಂಗಮ ಅವರು ನಾಗರ ಪಂಚಮಿ ಹಬ್ಬದ ಶುಭಾಶಯಗಳನ್ನು ತಿಳಿಸಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಇಂತಹ ಹಬ್ಬಗಳ ಮಹತ್ವವನ್ನು ವಿವರಿಸಿದರು.
ಶಾಲೆಯ ಉಪಪ್ರಾಂಶುಪಾಲ ರವಿಕಾಂತ ಮೆಂಡೇಗಾರ ಅವರು ನಾಗರ ಪಂಚಮಿ ಹಬ್ಬದ ಮಹತ್ವವನ್ನು ತಿಳಿಸಿ, ಎಲ್ಲರಿಗೂ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ನಾಗರ ಪಂಚಮಿ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪೂಜೆ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸುವ ಮೂಲಕ ಹಬ್ಬವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.