ನಾಗಪ್ಪ ಬಿ.ಇ.ಗೆ ಪಿಎಚ್ಡಿ ಪದವಿ
ಬಳ್ಳಾರಿ 20: ಜಿಲ್ಲೆಯ ನಾಗಪ್ಪ ಬಿ.ಇ. ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ರಾಜೇಂದ್ರಪ್ರಸಾದ್ ಎನ್.ಎಲ್. ರವರ ಮಾರ್ಗದರ್ಶನದಲ್ಲಿ ಸಮಾಜ ವಿಜ್ಞಾನ ವಿಷಯದ ಸಮಾಜಶಾಸ್ತ್ರದಲ್ಲಿ “ದೇವದಾಸಿ ಮಹಿಳೆಯರ ಸಮಸ್ಯೆ ಮತ್ತು ಸವಾಲುಗಳು: ಒಂದು ಸಮಾಜಶಾಸ್ತ್ರೀಯ ಅಧ್ಯಯನ” (ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿದಂತೆ) ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದು, ಈ ಪ್ರಬಂಧಕ್ಕೆ ವಿಶ್ವವಿದ್ಯಾಲಯ “ಡಾಕ್ಟರ್ ಆಫ್ ಫಿಲಾಸಫಿ” ಪದವಿಯನ್ನು ನೀಡಿ ಗೌರವಿಸಿದೆ.