ಶಿಗ್ಗಾವ್

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ನಾಗಪ್ಪ ಬೆಂತೂರ ಆಯ್ಕೆ

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ನಾಗಪ್ಪ ಬೆಂತೂರ ಆಯ್ಕೆ

ಶಿಗ್ಗಾವಿ 02: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅದ್ಯಕ್ಷರನ್ನಾಗಿ ಸರ್ವಾನುಮತದಿಂದ ಸಾಹಿತಿ, ಶಿಕ್ಷಕ ನಾಗಪ್ಪ ಬೆಂತೂರ ಅವರನ್ನು ಜಿಲ್ಲಾದ್ಯಕ್ಷ ಲಿಂಗಯ್ಯ ಹಿರೇಮಠ ಅವರು  ಘೋಷಿಸಿದರು. 

ಪಟ್ಟಣದ ವಿರಕ್ತಮಠದಲ್ಲಿ ನಡೆದ ಅಜೀವ ಸದಸ್ಯರ ಸಭೆಯಲ್ಲಿ ಜಿಲ್ಲಾದ್ಯಕ್ಷ ಲಿಂಗಯ್ಯ ಹಿರೇಮಠ ಅವರು ನೂತನ ಅದ್ಯಕ್ಷರನ್ನ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ಸಮ್ಮುಖದಲ್ಲಿ ಹಾಗೂ ಅಜೀವ ಸದಸ್ಯರ ಉಪಸ್ಥಿತಿಯಲ್ಲಿ ಘೋಷಿಸಿದರು. 

ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಅದ್ಯಕ್ಷ ಸ್ಥಾನಕ್ಕೆ 5 ಜನ ಆಕಾಂಕ್ಷಿಗಳಾಗಿದ್ದರು ನಂತರ ಐವರಲ್ಲಿ ಸಾಹಿತಿ ನಾಗಪ್ಪ ಬೆಂತೂರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನೆ ಅದ್ಯಕ್ಷರೆಂದು ಘೋಷಿಸಲಾಯಿತು. 

ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ನೂತನ ಅದ್ಯಕ್ಷರನ್ನು ಆಶೀರ್ವದಿಸಿ ಮಾತನಾಡಿ ತಾಲೂಕಿನಲ್ಲಿ ಯುವ ಸಮೂಹ ಸಾಹಿತ್ಯ ಕಟ್ಟುವಲ್ಲಿ ತೊಡಗಿಸಿಕೊಳ್ಳಿ, ಸದಸ್ಯತ್ವವನ್ನ ಹೆಚ್ಚು ಮಾಡಿಕೊಂಡ ಸಂಘಟಿತರಾಗಿ ಬರಹಗಾರರನ್ನು ಬಳಸಿಕೊಂಡು ಸಾಂಸ್ಕೃತಿಕ ನೆಲೆಗಟ್ಟಿನ ಸಾಹಿತ್ಯ ಪರಿಷತ್ ತಾಲೂಕಿನಾದ್ಯಂತ ಬೆಳೆಸಲು ಎಲ್ಲರನ್ನು ಒಗ್ಗೂಡಿಸಿ ಪರಿಷತ್ ತೇರು ನಡೆಯಲಿ ಎಂದು ಕಿವಿ ಮಾತು ಹೇಳಿದರು.  

ಜಿಲ್ಲಾದ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ತಾಲೂಕಿನಾದ್ಯಂತ ಸಾಹಿತ್ಯವನ್ನ ಕಟ್ಟುವ ಕೆಲಸ ನಿಲ್ಲಬಾರದು, ನೂತನ ಅದ್ಯಕ್ಷರು ಸಾಹಿತ್ಯಾಸಕ್ತರ ಬಳಗ ಕಟ್ಟಿಕೊಂಡು ಸಾಹಿತ್ಯವನ್ನು ತಾಲೂಕಿನಲ್ಲಿ ಕಟ್ಟುವ ಕಾರ್ಯ ಮಾಡಬೇಕು ಸರಕಾರದ ಅನುಧಾನ ಇರುವುದಿಲ್ಲ ಸಾಹಿತ್ಯಭಿಮಾನಿಗಳ ಕ್ರೂಢೀಕರಣದಿಂದ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ್ನ ಕಟ್ಟುವ ಕಾರ್ಯವಾಗಲಿ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ನೂತನ ಅದ್ಯಕ್ಷರನ್ನ ಅಜೀವ ಸದಸ್ಯರು, ಕನ್ನಡಾಭಿಮಾನಿಗಳು, ರೈತ ಸಂಘದ ಮುಖಂಡರು ಹಾಗೂ ವಿವಿಧ ಮುಖಂಡರು ಸನ್ಮಾನಿಸಿ ಗೌರವಿಸಿದರು.  

ಹಿರಿಯ ಸಾಹಿತಿ ಬ ಫ ಯಲಿಗಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಆರ್ ಎಸ್ ದೊಡ್ಡಗೌಡರ, ಸಾಹಿತಿ ಶಿವಾನಂದ ಮ್ಯಾಗೇರಿ, ನಿಕಟಪೂರ್ವ ಅದ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಬಂಕಾಪುರ ಹೋಬಳಿ ಘಟಕದ ಅದ್ಯಕ್ಷ ಎ ಕೆ ಅದವಾನಿಮಠ, ಹಿರಿಯರಾದ ಸಿ ವಿ ಮತ್ತಿಗಟ್ಟಿ, ಟಿ ವಿ ಸುರಗೀಮಠ, ಡಾ. ಆರ್ ಎಸ್ ಅರಳೆಲೆಮಠ, ಜಯಣ್ಣ ಹೆಸರೂರ, ಬಸವರಾಜ ನಾರಾಯಣಪೂರ, ರಾಜಶೇಖರ ಹೆಸರೂರ, ಬಸವರಾಜ ಸವಡಿ, ರಮೇಶ ಸಾತಣ್ಣವರ, ಡಾ ಲತಾ ನಿಡಗುಂದಿ, ಲಲಿತಾ ಹಿರೇಮಠ, ಡಾ.ಸುಮಂಗಲಾ ಅತ್ತಿಗೇರಿ,  ಸಂತೋಷಗೌಡ್ರ ಪಾಟೀಲ, ಬಸಲಿಂಗಪ್ಪ ನರಗುಂದ, ಈರಣ್ಣಾ ಸೂರಗೊಂಡ, ಶಂಭು ಕೇರಿ, ಮಂಜುನಾಥ ಮಿರ್ಜಿ, ಸಂತೋಷ ಚಾಕಲಬ್ಬಿ, ಸಂಜೀವ ಮಣ್ಣಣ್ಣವರ, ಸೇರಿದಂತೆ ಅಜೀವ ಸದಸ್ಯರು, ಕನ್ನಡಾಭಿಮಾನಿಗಳು, ರೈತ ಸಂಘದ ಮುಖಂಡರು ಹಾಗೂ ವಿವಿಧ ಮುಖಂಡರು  ಹಾಗೂ ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ