ತಾಳಿಕೋಟಿ

ಕ್ಷತ್ರಿಯ ಮರಾಠಾ ಸಮಾಜದಿಂದ ಶಾಸಕ ನಡಹಳ್ಳಿಗೆ ಸನ್ಮಾನ

ಕ್ಷತ್ರಿಯ ಮರಾಠಾ ಸಮಾಜದಿಂದ ಶಾಸಕ ನಡಹಳ್ಳಿಗೆ ಸನ್ಮಾನ

ತಾಳಿಕೋಟಿ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ಕನರ್ಾಟಕ ಕ್ಷತ್ರಿಯ ಮರಾಠಾ ಸಮಾಜ (ರಿ) ತಾಳಿಕೋಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದಲ್ಲಿ ಇತ್ತೀಚೆಗೆ ಕ್ಷತ್ರಿಯ ಮರಾಠಾ ಸಮಾಜದ ವತಿಯಿಂದ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿಯ ಭೂಮಿಪೂಜಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು.

ಸಮಾಜ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನುಷ್ಠಾನವಾಗಬೇಕು ಎಂಬುದು ಕ್ಷತ್ರಿಯ ಸಮಾಜದ ಬಂಧುಗಳ ಬಹುದಿನಗಳ ಬೇಡಿಕೆಯಾಗಿತ್ತು ಅದನ್ನು ಮನ್ನಿಸುವ ಕೆಲಸ ಮಾಡಿದ್ದೇನೆ ಆದಷ್ಟು ಬೇಗ ಇದನ್ನು ಪ್ರತಿಷ್ಠಾಪಿಸುವ ಕೆಲಸ ಮುಕ್ತಾಯವಾಗಬೇಕು ಬಜೆಟ್ ಅಧಿವೇಶನದ ನಂತರ  ಮುಖ್ಯ ಮಂತ್ರಿಗಳಿಂದ ಇದರ ಉದ್ಘಾಟನೆಯನ್ನು ಮಾಡಿಸುತ್ತೇನೆ ಎಂದ ಅವರು ಮಹಾಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬೇಡಿ ಅವರು ಮನುಕುಲದ ಆಸ್ತಿಯಾಗಿದ್ದಾರೆ.

ಅವರ ಸಂದೇಶ ಎಲ್ಲ ಜಾತಿ ಜನಾಂಗದವರಿಗೂ ಅನ್ವಯಿಸುತ್ತವೆ, ಶಿವಾಜಿ ಮಹಾರಾಜರ ದೇಶಭಕ್ತಿ ಅನುಕರಣೀಯವಾಗಿದೆ, ನಾನು ಎಂದೂ ಜಾತಿರಾಜಕಾರಣ ಮಾಡಿಲ್ಲ, ನನ್ನ ಕ್ಷೇತ್ರದ ಎಲ್ಲ ಜನರ ಕಲ್ಯಾಣ ನನಗೆ ಮುಖ್ಯವಾಗಿದೆ ಎಂದರು.

ಈ ಸಮಯದಲ್ಲಿ ಕ್ಷತ್ರಿಯ ಮರಾಠಾ ಸಮಾಜ ತಾಳಿಕೋಟಿ ಅಧ್ಯಕ್ಷ ಸಂಭಾಜಿರಾವ್ ವಾಡ್ಕರ, ಹಿರಿಯ ಸದಸ್ಯ ಕಾಶೀರಾಯ ಮೋಹಿತೆ, ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಮುತ್ತಪ್ಪ ಚಮಲಾಪೂರ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಜಿ.ಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಮುಖಂಡ ಶಿವಶಂಕರ ಹಿರೇಮಠ, ಪುರಸಭೆ ಸದಸ್ಯ ಅಣ್ಣಪ್ಪ ಜಗತಾಪ, ಜಯಸಿಂಗ್ ಮೂಲಿಮನಿ, ಮುದಕಣ್ಣ ಬಡಿಗೇರ, ನಿಂಗು ಕುಂಟೋಜಿ, ಮಾಜಿ ಸದಸ್ಯ ಗೋವಿಂದ ಗೌಡಗೇರಿ, ಪ್ರಕಾಶ ಹಜೇರಿ, ಬಿ.ಎಂ. ಪಾಟೀಲ ಇದ್ದರು.

ಸುದ್ದಿ ಓದಿ