ಮುದ್ದೆಬಿಹಾಲ್

ಸಜ್ಜನ, ಬಿರಾದಾರ, ಪಾಟೀಲರಿಗೆ ನಾಡಗೌಡ ಸನ್ಮಾನ

ಸಜ್ಜನ, ಬಿರಾದಾರ, ಪಾಟೀಲರಿಗೆ ನಾಡಗೌಡ ಸನ್ಮಾನ

ಮುದ್ದೇಬಿಹಾಳ 27:  ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಪಟ್ಟಣದ ಉದ್ಯಮಿ ಶರಣು ಸಜ್ಜನ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕಾಮರಾಜ ಬಿರಾದಾರ ಹಾಗೂ ತಾಲೂಕಾ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಗೊಂಡ ವೆಂಕನಗೌಡ ಪಾಟೀಲ ಅವರಿಗೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ಸೋಮವಾರ ಸಂಜೆ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಪಟ್ಟಣದ ಬಹುತೇಕ ಎಲ್ಲ ಗಣ್ಯರ, ಉದ್ಯಮಿಗಳ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು. 

ಈ ವೇಳೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ಮಾತನಾಡಿದ ಅವರು, ಶರಣು ಸಜ್ಜನ ಅವರು ಬಡತನದಲ್ಲಿ ಹುಟ್ಟಿ ಸಣ್ಯ ಉದ್ಯಮಿ ಪ್ರಾರಂಭಿಸಿ ಬಳಿಕ ದಾಲ ಮಿಲ್ ಇಂಡಸ್ಟ್ರೀಯನ್ನು ಸ್ಥಾಪಿಸಿ ಎಲ್ಲರ ವಿಶ್ವಾಸಾರ್ಹ ಸಾಧನೆ ಮಾಡುವ ಮೂಲಕ ಬೆಳೆದು ನಿಂತಿದ್ದಾರೆ ಅಷ್ಟು ಮಾತ್ರವಲ್ಲದೇ  ಸದಾ ಸ್ನೇಹ ಜೀವಿಯಾಗಿ ಪಟ್ಟಣ ಯಾವೂದೇ ಕಾರ್ಯಕ್ರಮಗಳಿರಲಿ, ಸಾಮಾಜಿ ಕಾರ್ಯವಿರಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲದರಲ್ಲೂ  ಮುಂದಾಳತ್ವ ವಹಿಸಿ ಯಶಸ್ವಿಗೊಳಿಸುವ ಕ್ರೀಯಾಶಿಲರು ಅವರಿಗೆ ವಾಣಿಜ್ಯ ಪ್ರಶಸ್ತಿ ದೊರೆತಿರುವುದು ಇತರರಿಗೆ ಮಾದರಿಯಾಗಿದ್ದಾರೆ, ಅದರಂತೆ ಸಣ್ಣ ವಯಸ್ಸಿನಲ್ಲೇ  ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡಾಂಭೆಯ ತೇರು ಎಳೆಯುವ ಜವಾಬ್ದಾರಿ ಹೊತ್ತುಕೊಂಡಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ನಿಲ್ಲುವುದು ಸಾಮಾನ್ಯದ ವಿಷಯವಲ್ಲ. ಸಂಘಟಿತ ಸ್ವಭಾವ, ತಾಳ್ಮೇ, ಎಲ್ಲವನ್ನು ಸಹಿಸಿಕೊಳ್ಳುವ ತಾಯಿ ಹೃದಯ ಇರಬೇಕಾಗುತ್ತದೆ ಸಧ್ಯ ಅದೆಲ್ಲವನ್ನು ಒಪ್ಪಿಕೊಂಡು ಮುನ್ನಡೆಯಲು ಹೋರಟಿರುವ ಕಾಮರಾಜ ಬಿರಾದಾರ ಅವರಿಗೆ ಅವರು ಕೈಗೊಳ್ಳು ಯಾವೂದೇ ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಎಲ್ಲ ಕಾರ್ಯಗಳ ಯಶಸ್ವಿಗೆ ಪಟ್ಟಣದ ಎಲ್ಲ ಗಣ್ಯರು, ಮುಖಂಡರು  ಸೇರಿದಂತೆ ಎಲ್ಲರೂ ಟೊಂಕಕಟ್ಟಿ ನಿಂತುಕೊಳ್ಳುವ ಮೂಲಕ ಯಶಸ್ವಿಗೊಳಿಸಲು ಸಹಕಾರಿಸುತ್ತೇವೆ ಎಂಬುದನ್ನು ಈ ಸಂದರ್ಭದಲ್ಲಿ ಭರವಸೆ ನೀಡುತ್ತೇವೆ, ಜೊತೆಗೆ ನೇರ ನಿಷ್ಟುರತೆಗೆ ಹೆಸರಾಗಿರುವ ವೆಂಕನಗೌಡ ಪಾಟೀಲ ಅವರು ಸಧ್ಯ ತಾಲೂಕಾ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವುದು ಸಂತಸದ ವಿಷಯ ಆದರೇ ವೀರಶೈವ ಮಹಾಸಭಾದಲ್ಲಿ ರಾಜಕೀಯ ಪ್ರವೇಶ ಹೆಚ್ಚಾಗಿದೆ ನೇರವಾಗಿ ಧೈರ್ಯದಿಂದ ಮಾತನಾಡುವ ಮೂಲಕ ವಾಕ್ ಚಾತುರ್ಯಹೊಂದಿದ್ದಾರೆ ಅಲ್ಲಿರುವ ಸಮಸ್ಯೆಗಳನ್ನು ತಿಳಿಗೊಳಿಸುವಲ್ಲಿ ಪ್ರಯತ್ನಿಸಲಿ ಎಂದರು. ಜೊತೆಗೆ ಈ ಸಂದರ್ಭದಲ್ಲಿ ಸನ್ಮಾನ ಸಮಾರಂಭದಲ್ಲಿ ಬಾಗವಹಿಸಿದ ಎಲ್ಲ ಗಣ್ಯರು ಮುಖಂಡರು, ಸಾಹಿತಿಗಳು, ಉದ್ಯಮಿಗಳು ಪಟ್ಟಣದ ಯಾವೂದೇ ಸಾಮಾಜಿಕ ಕಾರ್ಯವನ್ನು ಯಾವೂದೇ ರಾಜಕೀಯ ಪಕ್ಷಕ್ಕದೆ ಸೀಮಿತವಾಗದೇ ಜಾತಿ ಮತ ಪಂಥ ಎನ್ನದೇ ಎಲ್ಲರೂ ಒಗ್ಗಟ್ಟಾಗಿ ನಿಂತು ಎಲ್ಲ ಜನರು ಮೆಚ್ಚುವ ಹಾಗೇ ಸಾಂಸ್ಕೃತಿಕ, ಹಬ್ಬ ಹರಿದಿನಗಳು ಸೇರಿದಂತೆ ಎಲ್ಲ ಸಾಮಾಜಿಕ ಕಾರ್ಯಗಳನ್ನು ಯಶಸ್ವಿಗೆ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದರು. 

 ಈ ವೇಳೆ ಗಣ್ಯ ಉದ್ಯಮಿಗಳಾದ ಬಸವರಾಜ ಮೋಟಗಿ, ಸುನೀಲ ಇಲ್ಲೂರ, ರಮೇಶ ಓಸ್ವಾಲ್, ಎಂ.ಬಿ. ನಾವದಗಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್,  ಸಂಗಣ್ಣ ಬಿರಾದಾರ(ಜಿಟಿಸಿ) ತಾಲೂಕಾ ಬ್ಲಾಕ್  ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಗಫೂರಸಾಬ ಮಕಾಂದಾರ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಎಸ್ ಎಸ್ ಆಲೂರ, ಗುರಲಿಂಗಪ್ಪ ಗೌಡ ಪಾಟೀಲ,ಮುತ್ತು ಕಡಿ, ಸುಧೀರ ನಾವದಗಿ, ರಾಜುಗೌಡ ಗೌಡರ,ರುದ್ರುಗೌಡ ಅಂಗಡಗೇರಿ, ಸುರೇಶ ಪಾಟೀಲ, ಅಮರೇಶ ಗೂಳಿ, ವಾಯ್ ಎಚ್ ವಿಜಯಕರ, ಪಿಂಟು ಸಾಲಿಮನಿ, ಸಂಗಪ್ಪ ಮೇಲಿಮನಿ, ಶ್ರೀಶೈಲ ಪೂಜಾರಿ, ಹುಸೇನ ಮುಲ್ಲಾ, ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ,  ಗೋಪಿ ಮಡಿವಾಳರ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ