ಎನ್ಎಸ್ಎಸ್ ಶಿಬಿರ
ತಾಳಿಕೋಟೆ22: ಪಟ್ಟಣದ ಎಚ್.ಎಸ್.ಪಾಟೀಲ ಪದವಿ ಪೂವ್ ಕಾಲೇಜಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲಿಕರನ ಇಲಾಖೆ ಇವರ ಸಹಯೋಗದಲ್ಲಿ 75 ನೇ ವರ್ಷದ ಸ್ವಾತಂತ್ರ-್ಯ ಅಮೃತ ಮಹೋತ್ಸವದ ಅಂಗವಾಗಿ ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ 5 ದಿನಗಳ ಕಾರ್ಯಾಗಾರ ಹಾಗೂ ಶ್ರಮದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಜು. 22 ರಿಂದ ಜು. 26 ರವರೆಗೆ ಶಿಬಿರ ನಡೆಯಲಿದೆ. 22 ರಂದು ಬೆಳಿಗ್ಗೆ 9 ಗಂಟೆಗೆ ಶಿಬಿರದ ಉದ್ಘಾಟನೆ ನಡೆಯಿತು. ಸ್ವಚ್ಛ ಭಾರತ, ಶ್ರೇಷ್ಠ ಭಾರತ, ಯುವಶಕ್ತಿ ದೇಶದ ಅಸ್ತಿ ಹಾಗೂ ಶ್ರಮಮೇವ ಜಯತೆ ಗೋಷವಾಕ್ಯದಡಿಯಲ್ಲಿ ನಡೆಯಲಿರುವ ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿದಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ನೇರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷ ಎಚ್.ಎಸ್.ಪಾಟೀಲ, ಸಾನಿಧ್ಯವನ್ನು ಗುಂಡಕನಾಳ ಬ್ರಹನ್ಮಠದ ಗುರಲಿಂಗ ಶಿವಾಚಾರ್ಯರು ವಹಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ ಪ್ರೋ.ಬಿ.ಆರ್.ಪೊಲೀಸ್ಪಾಟೀಲ ವಹಿಸಲಿದ್ದು, 5 ದಿನಗಳ ಕಾಲ ವಿವಿಧ ಉಪನ್ಯಾಸ ಮಾಲಿಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.