ಬಳ್ಳಾರಿ

ನಿಸ್ವಾರ್ಥ ಸೇವೆಯೇ ನಿತ್ಯ ಶಿವಾರ್ಚನೆ: ಹೊಂಬಳ

ನಿಸ್ವಾರ್ಥ ಸೇವೆಯೇ ನಿತ್ಯ ಶಿವಾರ್ಚನೆ: ಹೊಂಬಳ

ಬಳ್ಳಾರಿ 12: ಸ್ವಾರ್ಥ ದೂರವಾಗಿ ಸ್ವಾಭಿಮಾನದಿಂದ ಬದುಕುವುದೇ ಜೀವನದ ಸಾರ್ಥಕತೆ. ನಿಸ್ವಾರ್ಥ ಸೇವೆಯೇ ನಿತ್ಯ ಶಿವಾರ್ಚನೆ. ಮಂಗಳ, ಶುಭ, ಕಲ್ಯಾಣ ಚಿಂತನೆಯೇ ಶಿವ ಚಿಂತನೆಯೆಂದು ಗುಗ್ಗರಹಟ್ಟಿಯ ಎಸ್‍ಯುಜೆಎಸ್ ಪ.ಪೂ. ಕಾಲೇಜಿನ ಉಪನ್ಯಾಸಕ ಶಿವಾನಂದ ಪಿ. ಹೊಂಬಳ ನುಡಿದರು. ಕೌಲ್‍ಬಜಾರ್‍ನ ಸಂತ ಜೋಸೆಫರ ಪ್ರೇಮಾಶ್ರಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ 250ನೇ ಮಹಾಮನೆ ಕೋಳೂರು ಮೂಲೆಮಠದ ರುದ್ರಯ್ಯ ಪಾರ್ವತಮ್ಮ ದತ್ತಿ ಮತ್ತು ಸಿ.ಎಂ.ವೀರಭದ್ರಯ್ಯ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ನಿತ್ಯ ಸುಖವನ್ನು ನೀಡುವ ಶರಣ ಚಿಂತನೆಗಳಲ್ಲಿ ಅರ್ಚನೆ, ಪೂಜೆಗಳೇ ಪ್ರಮುಖವಲ್ಲ. ಆ ವಿಚಾರದಲ್ಲಿ ಸದಾ ಜಾಗೃತವಾಗಿರುವುದೇ ಜಾಗರಣೆ. ತತ್ವ ಚಿಂತನೆ ಜೊತೆಗೆ ಸದಾ ಇರುವುದೇ ಉಪವಾಸವೆಂದರು. ಪ್ರೇಮಾಶ್ರಮದ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಪ್ಪ ದತ್ತಿ ದಾತೃಗಳನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಿಗೆ ಪುಸ್ತಕ, ಪೆನ್ನು, ಪೆನ್ಸಿಲ್, ಪೌಚ್, ಮಾಸ್ಕ್‍ಗಳನ್ನು ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಹಿರಿಯ ನಿಲಯ ಪಾಲಕ ಸಿಸ್ಟರ್ ಫಾತೀಮಾ, ವಿಠ್ಠಲ್ ಗಂಗನಾಳ, ರಾಜಶೇಖರ, ಶೋಭಲತ ಉಪಸ್ಥಿತರಿದ್ದರು.

ಸುದ್ದಿ ಓದಿ