ಕಾಗವಾಡ

ನೀಟ್ ಪರಿಕ್ಷೆ : ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನೀಟ್ ಪರಿಕ್ಷೆ : ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ

ಕಾಗವಾಡ  28: ಅಥಣಿ ತಾಲೂಕಾ ಮಾಳಿ ಸಮಾಜ,   ಮಹಾತ್ಮಾ ಜ್ಯೋತಿಬಾ ಪುಲೆ ಮಾಳಿ ಸಮಾಜ ಯುವಕ ಸಂಘ ಹಾಗೂ ಪುಲೆ ಬ್ರಿಗೇಡ್ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಮಾಳಿ (ಮಾಲಗಾರ) ಸಮಾಜದ 2025 ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜುಲೈ 06 ರಂದು ಅಥಣಿ ಪಟ್ಟಣದ ಗಚ್ಚಿನಮಠದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ಅಥಣಿ ಮಹಾತ್ಮಾ ಜ್ಯೋತಿಬಾ ಪುಲೆ ಮಾಳಿ ಸಮಾಜ ಯುವಕ ಸಂಘದ ಅಧ್ಯಕ್ಷರಾದ ಗೀರೀಶ ಕಲ್ಲಪ್ಪಾ ದಿವಾನಮಳ ತಿಳಿಸಿದ್ದಾರೆ.  

ಅವರು ಶನಿವಾರ ದಿ. 28ರಂದು ತಾಲೂಕಿನ ಐನಾಪೂರ ಪಟ್ಟಣ ಪಂಚಾಯತ ಆವರಣದಲ್ಲಿ ಐನಪೂರ ಮಾಳಿ ಸಮಾಜವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜುಲೈ 06 ರಂದು ಮುಂಜಾನೆ 10 ಗಂಟೆಗೆ 2024-25ನೇ ಸಾಲಿನಲ್ಲಿ ಮಾಳಿ (ಮಾಲಗಾರ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿ/ನಿಯರು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವರ್ಗದಲ್ಲಿ 85ಅ ಮೇಲ್ಪಟ್ಟು ಹಾಗೂ ನೀಟ್ ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಮಾಳಿ ಸಮಾಜದ ವಿವಿಧ ಕ್ಷೇತ್ರದ ಉನ್ನತ ಅಧಿಕಾರಿಗಳಿಗೆ ಹಾಗೂ ಸಮಾಜಕ್ಕೆ ಅತ್ಯುನ್ನತ ಸೇವೆ ಸಲ್ಲಿದ ಗಣ್ಯರಿಗೆ ಸತ್ಕರಿಸಿ ಗೌರವಿಸಲಾಗುವುದು. ಸಮಾಜ ವಿದ್ಯಾರ್ಥಿಗಳು ಜುಲೈ 04 ರ ಒಳಗಾಗಿ ತಮ್ಮ ಹೆಸರಗಳನ್ನು 9964761435, 9880596787, 9164574168 ನಂಬರಿಗೆ ಸಂಪರ್ಕಿಸಿ ನೊಂದಯಿಸಬೇಕು. 

ಸಮಾರಂಭದ ದಿವ್ಯ ಸಾನಿದ್ಯವನ್ನು ಗಜ್ಜಿನಮಠದ ಶ್ರೀ ಪನಿಪ್ರ ಶಿವಬಸವ ಮಹಾಸ್ವಾಮಿಗಳು, ಮೋಟಿಗಿ ಮಠದ ಶ್ರೀ ಮನಿಪ್ರ ಪ್ರಭುಚನ್ನಬಸವ ಮಹಾಸ್ವಾಮಿಗಳು, ಶಟ್ಟರಮಠದ ಶ್ರೀ ಮನಿಪ್ರ ಮರಳಸಿದ್ಧ ಮಹಾಸ್ವಾಮಿಗಳು ಉಸಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಪುರಸಭೆಯ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ, ಸದಾಶಿವ ಬುಟಾಳಿ, ಡಾ. ಸಿ.ಬಿ .ಕುಲಗೋಡ, ಶಿವಾನಂದ ದಿವಾನಮಳ, ಕಾಡಪ್ಪಾ ಮಾಳಿ, ಗೀರೀಶ ಬುಟಾಳಿ, ಬಸವರಾಜ ಗುಮಟಿ, ಬಸಮರಾಜ ಬುಟಾಳಿ, ಹಣಮಂತ ಬಾಸಿಂಗಿ, ಮಹಾಂತೇಶ ಮಾಳಿ, ರಮೇಶ ಮಾಳಿ, ಹಾಗೂ ಸಮಾಜದ ಸರಕಾರಿ ಅಧಿಕಾರಿಗಳು, ವಿವಿಧ ಗ್ರಾಮಗಳ ಮಾಳಿ ಸಮಾಜದ ಪದಾಧಿಕಾರಿಗಳು ಆಗಮಿಸಲಿದ್ದಾರೆಂದು ತಿಳಿಸಿದರು. 

ಈ ವೇಳೆ ಸುಭಾಸ ಮಾಳಿ, ಸುರೇಶ ಕಾಗಲಿ, ರವಿ ಬಡಕಂಬಿ, ಮಹಾದೇಶ ಚಮಕೇರಿ, ಶ್ರೀಶೈಲ ನಾಂದನೀಕರ, ಮಾರುತಿ ಜೀರಗಾಳೆ, ಬಸವರಾಜ ತೇರದಾಳ, ರಮೇಶ ಮಾಳಿ, ಶಿವಾನಂದ ಬೆಳಕೂಡ, ಪ್ರಶಾಂತ ತೋಡಕರ, ಉಪಸ್ಥಿತರಿದ್ದರು. 

ಸುದ್ದಿ ಓದಿ