ಮುದ್ದೆಬಿಹಾಲ್

ಮೈಸೂರು ಪಾದಯಾತ್ರೆ: ಸಿದ್ದರಾಮಯ್ಯರ ಜನಪ್ರಿಯತೆ, ಇಮೇಜ್‌ಗೆ ಧಕ್ಕೆ ತರಲು ಷಡ್ಯಂತ್ರ

ಮೈಸೂರು ಪಾದಯಾತ್ರೆ: ಸಿದ್ದರಾಮಯ್ಯರ ಜನಪ್ರಿಯತೆ, ಇಮೇಜ್‌ಗೆ ಧಕ್ಕೆ ತರಲು ಷಡ್ಯಂತ್ರ

ಮುದ್ದೇಬಿಹಾಳ 08: ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಈ ರಾಜ್ಯದ ಬಡ ಜನರ, ಶೋಷಿತರ ಧ್ವನಿಯಾಗಿ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಜನಪರ ಆಡಳಿತ ಸಹಿಸಿಕೊಳ್ಳಲು ಸಾಧ್ಯವಾಗದೇ ಬಿಜೆಪಿಯವರು ನಡೆಸುತ್ತಿರುವ ಬೆಂಗಳೂರು ಟು ಮೈಸೂರು ಪಾದಯಾತ್ರೆ  ಜನಪ್ರಿಯ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯರ ಜನಪ್ರಿಯತೆ, ಇಮೇಜ್ ಗೆ ಧಕ್ಕೆ ತರಲು ಷಡ್ಯಂತ್ರವಾಗಿದೆ ವಿನಃ ಹೋರಾಟಕ್ಕೆ ಯಾವೂದೇ ಅರ್ಥವಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ದೂರವಾಣಿ ಮೂಲಕ ಪತತ್ರಿಕೆಯೊಂದಿಗೆ ಮಾತನಾಡಿದ ಅವರು  ಡಾ, ಬಿ ಆರ್ ಅಂಬೇಡ್ಕರವ್ರು ಹೇಳಿದಂತೆ ಕಾಂಗ್ರೇಸ್ ಪಕ್ಷದ ಸರಕಾರ ಎಲ್ಲ ವರ್ಗದವರನ್ನು ಗೌರವಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಐದು ಗ್ಯಾರಂಟಿಗಳನ್ನು ನೀಡಿದ್ದಲ್ಲದೇ ಕಳೇದ 40 ವರ್ಷಗಳ ಅವರ ಸುಧೀರ್ಘ ಆಡಳಿತದಲ್ಲಿ ಯಾವೂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಸ್ವಚ್ಛ ರಾಜಕಾರಣಕ್ಕೆ ಹೆಸರಾದವರು. ಯಾವಾಗೇಲ್ಲ ದೇಶದಲ್ಲಿ ರಾಜದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುತ್ತದೇಯೋ ಆಗೆಲ್ಲ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಲೇ ವ್ಯಾಪಕ ಬ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಇದಕ್ಕೆ ಸಾಕ್ಷ್ಯವೆಂಬಂತೆ ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರ​‍್ಪ ಅವರು ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮರೆತಿದ್ದಾರೆ. 

ಕಳೇದಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಅನ್ಯಾಯ ಮಾಡಿದ್ದರಿಂದಲೇ ಈ ಬಾರಿ ಕೇಂದ್ರ ಬಿಜೆಪಿ ಸ್ವತಂತ್ರ ಆಡಳಿತಕ್ಕೆ ಬರಲು ಸಾಧ್ಯವಾಗಲಿಲ್ಲ ಜೊತೆಗೆ ಜಾತಿ ಧರ್ಮದ ಮದ್ಯೆ ಕೋಮುವಾದಗಳನ್ನು ಸೃಷ್ಠಿಸಿ ಜನರನ್ನು ದಾರಿತಪ್ಪಿಸಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ ವಿನಃ ಸಂಪೂರ್ಣ ಜನಮತದಿಂದ ಇವರು ಅಧಿಕಾರಕ್ಕೆ ಬಂದಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೇರವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ, ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಹವಣಿಕೆ ಈ ಹಿಂದೆಯೂ ಇತ್ತು. ಈಗಲೂ ಇದೆ. ಈಗ ಸಿದ್ದರಾಮಯ್ಯರ ಹೆಸರು ಹಾಳು ಮಾಡಿದರೆ ಮುಂದೆ ಬಿಜೆಪಿಗೆ ಅನುಕೂಲ ಆಗುತ್ತೆ ಎಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸುತ್ತಿದ್ದಾರೆ. ಇದರಿಂದ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೇಸ್ ಸರಕಾರಕ್ಕೆ ಯಾವೂದೇ ತೊಂದರೆಯಾಗುವುದಿಲ್ಲ ಸಮಸ್ಯೆಯ ಮಾತೇ ಇಲ್ಲ. ರಾಜ್ಯದ ಜನರು ಕಾಂಗ್ರೇಸ್ ಸರಕಾರಕ್ಕೆ ಸಂಪೂರ್ಣ ಬಹು,ಮತ ಕೊಟ್ಟಿದ್ದಾರೆ ಮುಂದಿನ ನಾಲ್ಕು ವರ್ಷ ಈ ರಾಜ್ಯದ ಜನರ ಸೇವೆ ಮಾಡುವ ಅವಕಾಶವನ್ನು ಜನರು ಕೊಟ್ಟಿದ್ದಾರೆ ಯಾರೂ ಏನೇ ತಿಪ್ಪರಲಗಾ ಹಾಕಿದರೂ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರಕ್ಕೆ ಯಾವೂದೇ ತೊಂದರೆಯಾಗುವುದಿಲ್ಲ.  

 ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರ ಪಾತ್ರ ಇಲ್ಲವೆಂದು ಗೊತ್ತಿದ್ದರೂ ಹೆಸರಿಗೆ ಕಳಂಕ ತರಲು ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬಿ ವೈ ವಿಜೇಯೇಂದ್ರ ತಮ್ಮ ತಂದೆ ಯಾಕೇ ಜೈಲಿಗೆ ಹೋದರು ಮೂರು ಬಾರಿ ಯಾಕೆ ರಾಜಿನಾಮೆ ಕೊಟ್ಟರು ಎಂಬುದು ಸ್ವಲ್ಪ ಹಿಂದೆ ಹೋಗಿ ಆತ್ಮಾವಲೋಕನ ಮಾಡಿಕೊಳ್ಳಲಿ. ಸಧ್ಯ ಸಮ್ಮ ಸರಕಾರವೇನು ಕೈಕಟ್ಟಿ ಕುಳಿತಿಲ್ಲ ಸಧ್ಯದಲ್ಲಿಯೇ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಬಿಜೆಪಿಯವರ ಮಾಡಿರುವ ಬ್ರಹ್ಮಾಂಡ ಬ್ರಷ್ಟಾಚಾರ ಬಗ್ಗೆ ಎಳೆ ಎಳೆಯಾಗಿ ನಮ್ಮ ಸರಕಾರ ತನಿಖೆ ಕೈಗೋಳ್ಳಲಿದೆ ಆಗ ಬ್ರಷ್ಟಾಚಾರಿಗಳ್ಯಾರು, ಜನಸೇವಕರಾ​‍್ಯರು ಎಂಬುದು ಸ್ಪಷ್ಟವಾಗಲಿದೆ. 

ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಬಾರದು ಸಂವಿದಾನ ಬದ್ದ ನಿಲುವು ಕೈಗೊಳ್ಳಬೇಕು ಸಿದ್ರಾಮಯ್ಯನವರಿಗೆ ನೋಟಿಸ್ ಕೋಡುವ ಮುಂಚೆ ತನಿಖೆಯ ಅಂಶಗಳ ಬಗ್ಗೆ ಪರಾಮರ್ಶಿಸಿ ತಿರ್ಮಾನ ಕೈಗೊಳ್ಳಬೇಕಿತ್ತು ಆದರೇ ಯಾರೋ ಒಬ್ಬರು ಮನವಿ ಕೊಟ್ಟಕೂಡಲೇ ಒಬ್ಬ ಹಿಂದುಳಿದ ಸಮಾಜದ ಜನಪ್ರೀಯ ಮುಖ್ಯಮಂತ್ರಿಗಳಿಗೆ ಶೊಕಾಸ್ ನೋಟಿಸ್ ನೀಡಿದ್ದು ಸರಿಯಲ್ಲ ಎಂದು ಹರಿಹಾಯ್ದರು. 


ಸುದ್ದಿ ಓದಿ