ಸಿರುಗುಪ್ಪ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜನ್ಮದಿನ ಆಚರಣೆ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜನ್ಮದಿನ ಆಚರಣೆ

ಸಿರಗುಪ್ಪ 11: ನಮ್ಮ ದೇಶ ಭಾರತ 136 ಕೋಟಿ ಭಾರತೀಯರಿಗೆ ಸೇರಿದ್ದು ಕೇವಲ 1ಜಾತಿಯವರಿಗೆ 1ಧರ್ಮಕ್ಕೆ ಸೇರಿದ್ದಲ್ಲ ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು ಎಂದು ಸೈಯದ್ ಶಾ ಖಾಜಿ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಅಭಿಪ್ರಾಯ ಪಟ್ಟರು. 

 ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ 271 ನೇ ಜನ್ಮ ದಿನವನ್ನು ನೆನಪಿಸಿ ಸ್ಮರಿಸಿ ಮಾತನಾಡುತ್ತಾ ಅವರು ಟಿಪ್ಪು ಸುಲ್ತಾನ್ ಸರ್ವ ಧರ್ಮದವರಿಗೂ ದೊರೆ ಮಹಾರಾಜ ಮತ್ತು ಜಾತ್ಯತೀತ ನಾಯಕರು ಟಿಪ್ಪು ಸುಲ್ತಾನ್ ಎಲ್ಲೆಲ್ಲಿ ಮಸೀದಿಗಳನ್ನು ನಿರ್ಮಿಸುತ್ತಿದ್ದರು ಅದರ ಪಕ್ಕದಲ್ಲಿಯೇ ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದರು. ಎನ್ನುವುದಕ್ಕೆ ದಾಖಲೆ ಪುರಾವೆ ಗಳಿವೆ ಇತ್ತೀಚೆಗೆ ದೇಶದಲ್ಲಿ ಜಾತಿ ವಾದಿ ಸಂಘಟನೆ ಮತಾಂಧತೆ ಕಾರಣಕ್ಕೆ ವಿರೋಧಿ ಸುತ್ತವೆ ಟಿಪ್ಪು ಸುಲ್ತಾನ್ ಬಗ್ಗೆ ಈಗ ವಿರೋಧಿ ಸುತ್ತಿರುವ ಸಂಘಟನೆ ಗಳು ಯಾವತ್ತೂ ಬ್ರಿಟಿಷರ ವಿರುದ್ಧ ಹೋರಾಡಿಲ್ಲ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದರೆ ಒಬ್ಬನಾದರೂ ಸತ್ತಿರುವ ಉದಾಹರಣೆ ಇದ್ದರೆ ಹೇಳಲಿ ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಡಿ ಅವರಿಗೆ ಯಾವತ್ತೂ ತಲೆ ತಗ್ಗಿಸದೆ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ಸುಲ್ತಾನ್ ಅವರ ಜನ್ಮ ದಿನ ಪ್ರತಿಯೊಬ್ಬರೂ ಆಚರಿಸಿರಿ ನಮ್ಮೆಲ್ಲರಿಗೂ ಟಿಪ್ಪು ಸುಲ್ತಾನ್ ಬಗ್ಗೆ ಹೆಮ್ಮೆ ಇರಲಿ ಸುಳ್ಳುಗಳಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ ಸತ್ಯಕ್ಕೆ ಸಾವಿಲ್ಲ ಎಂದರು.  

ಜಮೀನ್ದಾರ್ ಸೈಯದ್ ಶಾ ಮೊಹಿಯುದ್ದೀನ್ ಖಾದ್ರಿ ಸೈಯದ್ ಶಾ ಅಹ್ಮದ್ ಖಾದ್ರಿ ಮತ್ತು ಅವರ ಸಹೋದರರು ಮೈಸೂರು ಹುಲಿ ಟಿಪ್ಪುಸುಲ್ತಾನ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯರಾದ ಹಾಜಿ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ ತಾಲ್ಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ ಖತೀಬ್ ಜಹೀರುದ್ದೀನ್ ಬಾಬು ಸಮಾಜ ಸೇವಕರಾದ ಎ.ಮೊಹಮ್ಮದ್ ಇಬ್ರಾಹಿಂ, ಎ ಮೊಹಮ್ಮದ್ ನೌಶಾದ್ ಅಲಿ ಮೊಹಮ್ಮದ್ ಖಲೀಲ್  ಉಪಸ್ಥಿತ ರಿದ್ದರು.  

ನಗರದ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಟಿಪ್ಪು ಭಾವ ಚಿತ್ರಕ್ಕೆ ಟಿಪ್ಪುಸುಲ್ತಾನ್ ತಾಲ್ಲೂಕಾ ಅಧ್ಯಕ್ಷರಾದ ಹಮೀದ್ ಸಾಬ್ ಇಬ್ರಾಹಿಂಪುರ್ ಅವರು ಮಾಲಾರೆ​‍್ಣ ಮಾಡಿದರು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮೀರ ಹುಸೈನ್ ಈದ್ಗಾ ಕಬರಸ್ತಾನ್ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್ ನಗರಸಭೆ ಸದಸ್ಯ ಎಸ್ ಮೋದಿನ್ ಮಾಜಿ ಸದಸ್ಯ ಚೌದ್ರಿ ಖಾಜಾಸಾಬ್ ಎನ್ ಎಸ್ ಸಲೀಂ ಸಾಬ್ ಎಚ್ ಎಂ ಅಲಿ ಚೌದ್ರಿ ಹಾರೂನ್ ಸಾಹೇಬ್ ಅನ್ಸಾರಿ ಗೌಸಿ ಪಟ್ಟೆ ಶರೀಫ್ ಟೈಲರ್ ಜಿ ಖಾಜ ಅಜೀಮ್ ಎಚ್‌. ಉಸ್ಮಾನ್  ಸಾಬ್ ಇಬ್ರಾಹಿಂ ಸಾಬ್ ಎಲ್ಲಾ ಸಮಾಜದ ಮುಖಂಡರು ಪ್ರಗತಿಪರ ಸ್ವತಂತ್ರ ಹೋರಾಟಗಾರರು ಹಾಜರಾಗಿದ್ದರು. 


ಸುದ್ದಿ ಓದಿ