ರೈತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ : ದಯಾಸಾಗರ ಪಾಟೀಲ
ಇಂಡಿ 25 : ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ಅಕ್ಕಲಕೋಟ - ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಬಳಿ ಜೋಡಗುಡಿ ಹತ್ತಿರ ರೈತರು ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದೆ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಎಂದು ಬಿಜೆಪಿ ಮುಖಂಡರಾದ ದಯಾಸಾಗರ ಪಾಟೀಲ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಹಾಗೂ ರೈತರಿಗೆ ಸಮರ್ಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ಬೀಕರ ಬರಗಾಲದಿಂದ ಕಂಗಾಲಾಗಿದ್ದ ಹಾಗೂ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪ್ರಧಾನ ಮಂತ್ರಿ ಭೀಮಾ ಫಸಲು ಯೋಜನೆ ಅಡಿಯಲ್ಲಿ ಬೆಳೆ ವಿಮೆ ಕಟ್ಟಿದ ರೈತರಿಗೆ ಮಧ್ಯೆ ಯಂತ್ರ ಬೆಳೆ ವಿಮೆ ನೀಡಬೇಕು ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಮುಂದುವರದಿದ್ದೆ.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ ಬಗಲಿ ಹಾಗೂ ವಿಜಯಪೂರ ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ ಜಂಟಿಯಾಗಿ ಮಾತನಾಡಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.. ಇಂದಿನ ಈ ಹೋರಾಟದಲ್ಲಿ ಇಂಡಿ ತಾಲೂಕು ಕಿಸಾನ್ ಸಂಘದ ಅಧ್ಯಕ್ಷರಾದ ಈರ್ಪ ಗೋಟ್ಯಾಳ ದಸಗೀರಸಾಬ ಬಾಗವಾನ ಅಂಬಣ್ಣ ಖಸ್ಕಿ ಚನ್ನಪ್ಪ ಮಿರಗಿ ಮದರಿ ಶಾಂತಪ್ಪ ರೂಗಿ ಶರಣು ಪಂತೋಜಿ ಚಂದ್ರಾಮ ಖಸ್ಕಿ ಶಿವಕಾಂತ ಖಸ್ಕಿ ಭೀಮಣ್ಣ ಕಪಾಲಿ ಸಿದ್ದಗೊಂಡ ತೆನ್ನಹಳ್ಳಿ ಚಂದ್ರಕಾಂತ ಮೇತ್ರಿ ಮಾದೇಪ್ಪ ಗೊಳ್ಳಗಿ ಗುರ್ಪ ಮೇತ್ರಿ ಮಳಸಿದ್ದಪ್ಪ ತಳವಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.