ಮನರಂಜನೆ

ನನ್ನಪ್ಪನಿಗೆ ತಮಿಳು ಬರೆಯಲು ಬರುವುದಿಲ್ಲ; ಪುತ್ರಿ ಸೌಂದರ್ಯ ರಜನಿಕಾಂತ್

ನನ್ನಪ್ಪನಿಗೆ  ತಮಿಳು  ಬರೆಯಲು  ಬರುವುದಿಲ್ಲ; ಪುತ್ರಿ ಸೌಂದರ್ಯ ರಜನಿಕಾಂತ್

ಚೆನ್ನೈ, ಅ 27: ತಮ್ಮ ತಂದೆ     ಸೂಪರ್‌  ಸ್ಟಾರ್‌    ರಜನಿಕಾಂತ್    ಅವರಿಗೆ  ತಮಿಳು  ಭಾಷೆಯಲ್ಲಿ    ಬರೆಯಲು   ಬರುವುದಿಲ್ಲ  ಎಂದು  ಚಿತ್ರ  ನಿರ್ದೇಶಕಿ, ರಜನಿಕಾಂತ್ ಪುತ್ರಿ  ಸೌಂದರ್ಯ  ಹೇಳಿದ್ದಾರೆ.   

ಸೌಂದರ್ಯ   ತಮ್ಮದೇ    ಆದ   "ಹಾಟ್"   ಎಂಬ ಸಾಮಾಜಿಕ ಮಾಧ್ಯಮ    ಆರಂಭಿಸಿದ್ದಾರೆ.  ಸೋಮವಾರ ಚೆನ್ನೈನಲ್ಲಿ    ನಡೆದ ಸಮಾರಂಭದಲ್ಲಿ     ರಜನಿಕಾಂತ್ ಆನ್‌ಲೈನ್‌ ಮೂಲಕ        ಚಾಲನೆ  ನೀಡಿದರು.  ಈ ವೇಳೆ  ಮಾತನಾಡಿದ ಸೌಂದರ್ಯಾ,   ತಮ್ಮ   ತಂದೆ   ಒಂದು ಸಂದರ್ಭದಲ್ಲಿ  ಮುಖ್ಯವಾದ  ವಿಷಯವನ್ನು   ವಾಯ್ಸ್ ಮೆಸೇಜ್ ಮೂಲಕ  ತನಗೆ  ರವಾನಿಸಿದ್ದರು.

ಆಗ "ಹಾಟ್"  ಹೆಸರಿನಲ್ಲಿ   ಏಕೆ   ಸಾಮಾಜಿಕ ಮಾಧ್ಯಮ  ಪ್ರಾರಂಭಿಸಬಾರದು  ಎಂಬ   ಆಲೋಚನೆ  ತಮಗೆ ಮೂಡಿಬಂತು.   ಇದು ಟ್ವಿಟರ್,  ಫೇಸ್‌ಬುಕ್‌  ಮಾದರಿಯಲ್ಲಿ     ಸುಧಾರಿತ ಸೇವೆಗಳನ್ನು  ಜನರಿಗೆ    ಒದಗಿಸಲಿದೆ  ಎಂದು ಅವರು ವಿವರಿಸಿದರು.   15  ರಾಷ್ಟ್ರೀಯ ಭಾಷೆಗಳು,  10 ಅಂತಾರಾಷ್ಟ್ರೀಯ ಭಾಷೆಗಳಲ್ಲಿ  ವಾಯ್ಸ್ ಹಾಟ್   ಬಳಸಬಹುದು  ಎಂದು  ತಿಳಿಸಿದರು.  ತಮ್ಮ ತಂದೆ  ಕನ್ನಡ,  ತಮಿಳು, ತೆಲುಗು,  ಹಿಂದಿ  ಹಾಗೂ ಇತರ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ತಮಿಳಿನಲ್ಲಿ ಸರಿಯಾಗಿ ಬರೆಯಲು ಬರುವುದಿಲ್ಲ ಎಂದು ಹೇಳಿದರು.   ಈ  ಸತ್ಯ    ಹೇಳಿದ್ದರಿಂದ    ಜನರಿಗೆ   ಅವರ  ಮೇಲಿರುವ   ಅಭಿಮಾನ ಕಡಿಮೆಯಾಗುವುದಿಲ್ಲ ಎಂದು  ಸೌಂದರ್ಯ  ಅಭಿಪ್ರಾಯಪಟ್ಟರು.

ಸುದ್ದಿ ಓದಿ