ವಿಜಯಪುರ

ನನ್ನ ಬೆಳೆ ನನ್ನ ಹಕ್ಕು: ರೈತರ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ

ನನ್ನ ಬೆಳೆ ನನ್ನ ಹಕ್ಕು: ರೈತರ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ

ಲೋಕದರ್ಶನ ವರದಿ 

 ಆಲಮೇಲ 13: ರಾಜ್ಯ ಸರಕಾರ 2026-27 ನೇಸಾಲಿನ  ಮುಂಗಾರು ಹಂಗಾಮಿನ  ರೈತರ ಬೆಳೆ ಸಮೀಕ್ಷೆ ಕಾರ್ಯವನ್ನು ಆಲಮೇಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆರಂಭಿಸಿದೆ. ಸಂಪೂರ್ಣ ತಂತ್ರಜ್ಞಾನದ  ಸದುಪಯೋಗ ಪಡೆದು ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ದಾಖಲಿಸಬೇಕೆಂದು ಕೃಷಿ ಅಧಿಕಾರಿ ಅನೀಲದೇವ ದಶವಂತ ರೈತರಿಗೆ ತಿಳಿಸಿದರು. ರೈತರು ತಮ್ಮ ಮೂಬೈಲ್ ಮೂಲಕವೆ ಸ್ವತ; ಬೆಳೆ ಸಮೀಕ್ಷೆ ಮಾಡುವ ಕಾರ್ಯ ವಿಧಾನ ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ಮಾಹಿತಿಯನ್ನು ನೇರವಾಗಿ ದಾಖಲಿಸಿ ಸರ್ಕಾರಿ ದಾಖಲೆಗಳಲ್ಲಿ  ಸೇರೆ​‍್ಡಗೊಳಿಸಬಹುದು.

ಬೆಳೆ ಸಮೀಕ್ಷೆಯ ಕೃಷಿ ಕ್ಷೇತ್ರ ಪ್ರಮುಖ ಪ್ರಕ್ರಿಯೆ ಆಗಿದ್ದು ರಾಜ್ಯದಲ್ಲಿ ಯಾವ ಪ್ರದೇಶದಲ್ಲಿ ಯಾವ ಬೆಳೆ ಎಷ್ಟು ವಿಸ್ತೀರ್ಣದಲ್ಲಿ ಬೆಳೆಯಲಾಗಿದೆ ಎಂಬ ಮಾಹಿತಿ ಬೆಳೆ ವಿಮೆಯನ್ನು  ಸಂಗ್ರಹಿಸಲು ನೆರವಾಗುತ್ತದೆ. ಬೆಳೆ ವಿಮೆ ಬೆಳೆ ನಷ್ಟ ಪರಿಹಾರ ಪ್ರಕೃತಿ ವಿಕೋಪ ಪರಿಹಾರ ಬೆಂಬಲ ಬೆಲೆ ಯೋಜನೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ  ಆಧಾರವಾಗಿರುತ್ತದೆ. ತಮ್ಮ ಬೆಳೆಗಳ ರೈತರು ಅವಕಾಶ ಬಳಸಿಕೊಂಡು ತಮ್ಮ ಬೆಳೆಗಳ  ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ರೈತ ಕೇಂದ್ರದ ಉಚಿತ ಸಹಾಯವಾಣಿ ಸಂಖ್ಯೆ 1800 4253553ಗೆ ಸಂಪರ್ಕಿಸಬಹುದು. 


ಸುದ್ದಿ ಓದಿ