ಮುಸ್ಲಿಂ ಧರ್ಮಗುರು ಖಾಜಿಗೆ ಶ್ರೀಶೈಲ ಶ್ರೀಗಳಿಂದ ಸನ್ಮಾನ
ತಾಳಿಕೋಟಿ 14 ಪಟ್ಟಣದ ಮುಸ್ಲಿಂ ಸಮಾಜದ ಮುಸ್ಲೀಂ ಧರ್ಮಗುರು ಸಾಮರಸ್ಯದ ಹರಿಕಾರ ಸೈಯದ್ಶಕೀಲ ಅಹ್ಮದ ಖಾಜಿ ಇವರನ್ನು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು.
ಇತ್ತೀಚಿಗೆ ಪಟ್ಟಣದಲ್ಲಿ ಲೋಕಕಲ್ಯಾಣ ಮತ್ತು ಧರ್ಮ ಜಾಗೃತಿ ನಿಮಿತ್ಯ ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆಯ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಮುಸ್ಲಿಂ ಧರ್ಮಗುರು ಸೈಯದಶಕೀಲ ಅಹ್ಮದ ಖಾಜಿ ಅವರಿಗೆ ಸನ್ಮಾನ ನೀಡಲಾಯಿತು.
ತಮ್ಮ ಆಶಿರ್ವಚನದಲ್ಲಿ ಜಗದ್ಗುರುಗಳು ಮುಸ್ಲೀಂ ಧರ್ಮಗುರು ಖಾಜಿ ಅವರು ಈ ಭಾಗದಲ್ಲಿ ಸಾಮರಸ್ಯ ಹಾಗೂ ಭಾವೈಕ್ಯೆತೆಗಾಗಿ ಹಗರಿಲಿರುಳು ಶ್ರಮಿಸುತ್ತಿದ್ದಾರೆ. ಅವರು ಈ ಧರ್ಮಸಭೆಯಲ್ಲಿ ಭಾಗವಹಿಸಿರುವುದರಿಂದ ಇದು ಕೇವಲ ಒಂದು ಧರ್ಮ ಸಭೆ ಆಗಿರದೆ, ಭಾವೈಕ್ಯತೆಯ ಧರ್ಮಸಭೆ ಆಗಿದೆ. ಎಂದು ಹೇಳಿದರು.
ವೇದಿಕೆಯಲ್ಲಿ ಗಚ್ಚಿನಮಠದ ಕಾಶೀನಾಥ ಸ್ವಾಮಿಗಳು, ಗುಂಡಕನಾಳ ಹಿರೇಮಠದ ಗುರುಲಿಂಗಯ್ಯ ಸ್ವಾಮಿಗಳು, ಕುಂಟೋಜಿ ಹಿರೇಮಠದ ಚನ್ನವೀರ ದೇವರು, ಚಬನೂರು ಹಿರೇಮಠದ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು, ನಾವದಗಿಯಜಯರಾಜೇಂದ್ರ ಒಡೆಯರು, ಕೊಡೆಕಲ್ಲ ದರದುಂಡೇಶ್ವರ ಮಠದ ಶಿವಕುಮಾರ ಶ್ರೀಗಳು, ಖಾಸ್ಗತೇಶ್ವರ ಮಠದ ಮುಖ್ಯಸ್ಥ ಮುರುಗೇಶ ವಿರಕ್ತಮಠ, ಶಾಸಕ ಎ. ಎಸ್. ಪಾಟೀಲ(ನಡಹಳ್ಳಿ), ಭರತಗೌಡ ನಡಹಳ್ಳಿ ಮತ್ತೀತರರು ಇದ್ದರು.