ಮುಸ್ಲಿಂ ಸಿ.ಎಂ. ದಲಿತ ಡಿಸಿಎಂ ನಿರ್ಧಾರಕ್ಕೆ ಸ್ವಾಗತ
ತಾಳಿಕೋಟಿ: ಬರಲಿರುವ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮುಖ್ಯಮಂತ್ರಿ ಹಾಗೂ ದಲಿತ ಉಪಮುಖ್ಯಮಂತ್ರಿ ಮಾಡಲಾಗುವುದು ಎಂದು ತಿಳಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ನಿರ್ಧಾರವು ಸ್ವಾಗತಾರ್ಹವಾಗಿದೆ ಅವರನ್ನು ಅಭಿನಂದಿಸುತ್ತೇನೆ ಎಂದುಪತ್ರಿಕೆಯೊಂದಿಗೆ ಮಾತನಾಡಿದ ಜೆಡಿಎಸ್ ಮುದ್ದೇಬಿಹಾಳ ತಾಲೂಕಾ ಕಾರ್ಯದರ್ಶಿ ನದೀಂ ಕಡು ಹೇಳಿದರು. ನದೀಂ ಕಡು ಅವರು ಎರಡೂ ರಾಷ್ಟ್ರೀಯ ಪಕ್ಷಗಳು ಇಲ್ಲಿಯವರೆಗೆ ಈ ಎರಡೂ ಸಮುದಾಯಗಳನ್ನು ಕೇವಲ ತಮ್ಮ ಓಟ್‌ಬ್ಯಾಂಕ್‌ಗಾಗಿ ಮಾತ್ರ ಬಳಸಿಕೊಂಡಿವೆ. ಅವರಿಗೆ ಇವರ ಹಿತ ಕುರಿತು ನೈಜ ಕಾಳಜಿ ಇಲ್ಲ. ಮಾಜಿ ಸಿ.ಎಂ. ಕುಮಾರಣ್ಣನವರ ಈ ನಿರ್ಧಾರವು ಕೇವಲ ಜೆಡಿಎಸ್ ಪಕ್ಷ ಮಾತ್ರ ಈ ವರ್ಗದ ನೈಜ ಹಿತಚಿಂತಕ ಎಂಬುದನ್ನು ಸಾಬೀತು ಮಾಡಿದೆ.. ಡೊಂಗಿ ಜಾತ್ಯಾತೀತವಾದಿಗಳಿಗೆ ಬರಲಿರುವ ಚುನಾವಣೆಯಲ್ಲಿ ಭಾರಿ ಮುಖಭಂಗವಾಗಲಿದೆ ಎಂದು ಅವರು ಹೇಳಿದರು.