ಸಂಗೀತ ಬದುಕಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ: ಜಯಾನಂದ ಮಾದರ
ಲೋಕದರ್ಶನ ವರದಿ
ಗೋಕಾಕ 21: ಕಲೆ, ಸಾಹಿತ್ಯ, ಸಂಗೀತದಿಂದ ನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗುತ್ತದೆ. ಅದರಲ್ಲೂ ಸಂಗೀತ ವಿದ್ಯೆಯು ಬದುಕಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಸ್ಥಳೀಯ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು.
ಅವರು ವಿವೇಕಾನಂದ ನಗರದ ಪಂ.ಬಿ.ಸಿ.ದೇಗಾಂವಿಮಠ ಸಭಾಂಗಣದಲ್ಲಿ ರವಿವಾರದಂದು ಗಾನಯೋಗಿ ಪಂಚಾಕ್ಷರಿ ಗಾನಕಲಾ ಪರಿಷತ್ತು ಹಮ್ಮಿಕೊಂಡಿದ್ದ 83ನೇ ಮಾಸಿಕ ವಿಶೇಷ ಸಂಗೀತ ಗಾನಲಹರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೈಲೂರಿನ ಅಕ್ಕಮಹಾದೇವಿ ಮತ್ತು ಚನ್ನಯ್ಯ ದೇಗಾಂವಿಮಠ ಇವರ ಸಹಸ್ರ ಚಂದ್ರ ದರ್ಶನ ಮಹೋತ್ಸವ ಹಾಗೂ ಬಾಳೇಕುಂದ್ರಿಯ ಸರೋಜಿನಿ ಮತ್ತು ಬಾಳಯ್ಯ ದೇಗಾಂವಿಮಠ ಇವರ ಅಮೃತ ಮಹೋತ್ಸವ ಆಚರಿಸಿ ದೇಗಾಂವಿಮಠ ಪರಿವಾರದಿಂದ ಸತ್ಕರಿಸಲಾಯಿತು.
ಹಿರಿಯ ಸಂಗೀತ ಕಲಾವಿದ ನಟರಾಜ ಮಹಾಜನ ನಾಸಿಕ ಶಹನಾಯಿ ನುಡಿಸಿ ಜನಮನ ರಜಿಸಿದರು. ಇನ್ನೋರ್ವ ಹಿರಿಯ ಅಂಧ: ಕಲಾವಿದ ಡಿ.ಆರ್.ಮಾಲದಿನ್ನಿಯವರು ಕೊಳಲುವಾದನ ಡಾ.ಮಂಜುನಾಥ ದೇಗಾಂವಿಮಠ. ಸಂಗೀತಾ ದೇಗಾಂವಿಮಠ, ಲಲಿತಾ ಮಿಣಚಿ, ವೈಶಾಲಿ ಭರಭರಿ, ವಂದನಾ ಸುಪಲಿ, ಎಸ್.ಬಿ. ಬೂದಗುಂಪಿ. ಸವಿತಾ ಅಂಗಡಿ. ಸೀಮಾ ಕೆ. ಶ್ರೀದೇವಿ ಬೋಳೆತ್ತಿನ, ಮೀನಾಕ್ಷಿ ಸುಭಂಜಿ, ಜಯಂತಿ ಮಾವರಕರ, ಸಂಗೀತಾ ಭಜಂತ್ರಿ ವಿವಿಧ ಪ್ರಕಾರದ ಸಂಗೀತ ಕಾರ್ಯಕ್ರಮ ನೀಡಿದರು. ಉಭಯಗಾನ ಶಾರದಾ ಸಂಗೀತ ವಿದ್ಯಾಲಯದ ಮಕ್ಕಳಿಂದ ಜಾನಪದ ಹಾಗೂ ಭಾವಗೀತೆಗಳು ಮೂಡಿಬಂದವು.
ಸಂಸ್ಥಾಪಕ ಪಂ.ಬಿ.ಸಿ. ದೇಗಾಂವಿಮಠ ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಕ ಎಸ್.ಎಫ್.ಕುಂಬಾರ ಸ್ವಾಗತಿಸಿದರು.