ಸುಗಮ ಸಂಗೀತಕ್ಕೆ ತಲೆದೂಗಿದ ಸಂಗೀತಾಸಕ್ತರು
ಬಳ್ಳಾರಿ 15: ಶಿವಕುಮಾರ್ ಸ್ವಾಮೀಜಿಯವರ ಪುಣ್ಯತಿಥಿಯ ಅಂಗವಾಗಿ ಬಳ್ಳಾರಿ ನಗರದ ವಿರಾಟ್ ನಗರದ ಹವಂಭಾವಿಯಲ್ಲಿರುವ "ಗಾನಯೋಗಿ ಕಲಾ ಕೇಂದ್ರ"ದಲ್ಲಿ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ವತಿಯಿಂದ ದ್ವಿತೀಯ ಮಾಸಿಕ ಸಂಗೀತ ಕಾರ್ಯಕ್ರಮ ನಡೆಯಿತು.
ಶಾಸ್ತ್ರೀಯ ಗಾಯನ ದೊಡ್ಡಯ್ಯ ಗವಾಯಿಗಳು ಕಲ್ಲೂರು ಮತ್ತು ಸುಗಮ ಸಂಗೀತ ಅನುಕೃಪ ಅವರಿಂದ ಜರುಗಿತು. ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಸಂಗೀತಾಸಕ್ತರನ್ನು ಮಂತ್ರಮುಗ್ದರನ್ನಾಗಿ ಮಾಡಿದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾ ಸಿದ್ದರಾಮ ಕಲ್ಮಠ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಗೀತದಿಂದ ಮನುಷ್ಯನ ಬೌದ್ಧಿಕ, ಬುದ್ಧಿ ಮಟ್ಟ ಬೆಳವಣಿಗೆಯಾಗುತ್ತದೆ. ಭಾಷೆ ಪ್ರಬುದ್ಧವಾಗುತ್ತದೆ. ಮಕ್ಕಳು ಉತ್ತಮ ಸುಸಂಸ್ಕೃತರಾಗುತ್ತಾರೆ. ಈ ನಿಟ್ಟಿನಲ್ಲಿ ದೊಡ್ಡಬಸವ ಗವಾಯಿಗಳು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವ ಕಾಯಕವನ್ನು ಮುಕ್ತಕಂಠದಿಂದ ಪ್ರಶಂಶಿಸಿದರು. ಮುಖ್ಯ ಅತಿಥಿಗಳಾಗಿ ಭಾವಗಹಿಸಿದ್ದ ಸೋಮನಾಥ ಸಾಲಿಮಠ, ರಾಜಶೇಖರ ರವರು ಸಂಗೀತ ಕಲಿಕೆಯಲ್ಲಿ ತೊಡಗಿದ್ದ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಿಕರಿಗೆ ವಂದಿಸಿ, ಈ ಪರಂಪರೆ ಹೀಗೆ ಸದಾ ಕಾಲ ಮುಂದುವರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಶಾಲೆಯ ಮುಖ್ಯಸ್ಥರಾದ ದೊಡ್ಡ ಬಸವ ಗವಾಯಿಗಳು ದೊಡ್ಡ ಗವಾಯಿಗಳನ್ನು ಸನ್ಮಾನಿಸಿ ಗೌರವಿಸಿದರು. ಹರಳಿಕಟ್ಟಿ ಪವಮಾನ ಹಾಗೂ ಸುಧಾಕರ ರವರು ತಬಲ ಸಾಥ್ ನೀಡಿದರು. ಸಂಗೀತ ಶಾಲೆಯ ಅನೇಕ ವಿದ್ಯಾಥಿಗಳು ಹಾಡಿದರು. ಪ್ರಶಾಂತ ಕೊಳಲು ನುಡಿಸಿದರು.