ದಲಿತ ಯುವತಿ ಕೊಲೆ: ಆರೋಪಿ ಬಂಧನಕ್ಕೆ ಆಗ್ರಹಿಸಿ ಮನವಿ
ತಾಳಿಕೋಟೆ27: ಬೆಂಗಳೂರದಲ್ಲಿ ವಿಜಯಪಯರ ಮೂಲದ ದಲಿತ ದಾನೇಶ್ವರಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಾ.ಸಿ.ಎಸ್.ರಘು ಬಣ) ಹಾಗೂ ಅಂಬೇಡ್ಕರ ಸೇನೆ ತಾಲೂಕು ಘಟಕದ ವತಿಯಿಂದ ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ದಾನೇಶ್ವರಿಯನ್ನು ಪ್ರೀತಿಯ ನಾಟಕವಾಡಿದ ಬದಾಮಿ ಮೂಲದ ಶಿವಕುಮಾರ ನಂಬಿಸಿ ಮೋಸ ಮಾಡಿದ್ದಾನೆ. ದಾನೇಶ್ವರಿಯ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿ ಆಕೆಯ ಬದುಕನ್ನು ಹಾಳು ಮಾಡಿದ್ದಾನೆ. ನಂತರ ದಾನೇಶ್ವರಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದಾಗ ಆತ ನನ್ನ ಜಾತಿ ಬೇರೆ ನಿನ್ನ ಜಾತಿ ಬೇರೆ ಎಂದು ಹೇಳಿ ಮದುವೆಯನ್ನು ನಿರಾಕರಿಸಿದ್ದಾನೆ. ದಾನೇಶ್ವರಿ ಒತ್ತಾಯ ಮಾಡಿದಾಗ ಆಕೆಯನ್ನು ನಿರ್ಧಯವಾಗಿ ಪೆಟ್ರೋಲ್ ಹಾಕಿ ಸುಟ್ಟು ಕೊಲೆ ಮಾಡಲಾಗಿದೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದು ಇದರಲ್ಲಿ ಹಲವರ ಕೈವಾಡ ಇರುವದ ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಶಿವಕುಮಾರ ತಲೆ ಮೆರೆಸಿಕೊಂಡಿದ್ದು ಪೊಲೀಸ್ರು ಆತನನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ದಲಿತ ಮೇಲಿನ ಹಲ್ಲೆ, ಅತ್ಯಾಚಾರ, ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದಲಿತರ ಮೇಲಿನ ಹಲ್ಲೆ ಇಡಿ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಆದ್ದರಿಂದ ಕೊಲೆಗೀಡಾದ ದಾನೇಶ್ವರಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕೊಲೆಗೆ ಕಾರಣವಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ತಹಶಿಲ್ದಾರ ಅನೀಲಕುಮಾರ ಢವಳಗಿ ಮನವಿಯನ್ನು ಸ್ವಿಕರಿಸಿದರು. ಈ ಸಂದರ್ಭದಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ದಲಿತ ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ಕಾಶಿನಾಥ ಕಾರಗನೂರ, ಮುಖಂಡರಾದ ಶಂಕರ ಪಡಸಾಲಿ, ಚಿದಾನಂದ ಕಟ್ಟಿಮನಿ, ಸುಭಾಷ ಚಮಲಾಪೂರ, ಭೀಮರಾವ್ ಕಟ್ಟಿಮನಿ, ಪರಶುರಾಮ ಚಲವಾದಿ, ರಮೇಶ ಹೊನ್ನಳ್ಳಿ, ದೇವು ಗೋಟಗುಣಕಿ, ಶರಣು ಭಂಟನೂರ, ಅಂಬೇಡ್ಕರ ಸೇನೆಯ ತಾಲೂಕಾಧ್ಯಕ್ಷ ಬಸ್ಸು ಕಟ್ಟಿಮನಿ, ಕಾರ್ಯದರ್ಶಿ ಗೋಪಾಲ ಕಟ್ಟಿಮನಿ, ಪರಶುರಾಮ ತಳವಾರ, ಯಮನಪ್ಪ ನಾಯ್ಕೋಡಿ, ಆನಂದ ಚಲವಾದಿ, ಸಂಜು ಉತಾಳೆ ಸೇರಿದಂತೆ ಇತರರು ಇದ್ದರು.