ಹಳೆಯ ದ್ವೇಶ ವ್ಯಕ್ತಿ ಕೊಲೆಯತ್ನ
ಮುಂಡಗೋಡ 06: ಹಳೆಯ ದ್ವೇಶದಿಂದ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಟಿಬೇಟಿಯನ್ ಕಾಲನಿ ಕ್ಯಾಂಪ್ ನಂ 6 ರಲ್ಲಿ ನಡೆದಿದ್ದು, ಆರೋಪಿ ತೆಂಜಿನ್ ತ್ಸೆಯಾಂಗ್ ಮೇಲೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಾಮಯಾಂಗ ಡಾಕ್ಪಾ ತೆಂಜಿನ್ ಯೇಶಿ ಚಾಕು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಮೈದಾನದಲ್ಲಿ ಆಟವಾಡುತಿರುವಾಗ ಏಕಾ ಏಕಿ ತೆಂಜಿನ್ ಎಂಬುವವನು ಹಳೆಯ ದ್ವೇಶದಿಂದ ಈತನ ಮೇಲೆ ದಾಳಿ ನಡೆಸಿ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಾಯಾಳು ಜಾಮಯಾಂಗ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.