ಬಳ್ಳಾರಿ

ಸ್ವಚ್ಛತೆ ಗೊಳಿಸುವಲ್ಲಿ ವಿಫಲವಾದ್ ಪಾಲಿಕೆ

ಸ್ವಚ್ಛತೆ ಗೊಳಿಸುವಲ್ಲಿ ವಿಫಲವಾದ್ ಪಾಲಿಕೆ

ಬಳ್ಳಾರಿ ಫೆ 09: ಬಳ್ಳಾರಿ ಮಹಾನಗರ ಪಾಲಿಕೆಯ 3,4 ಮತ್ತು 5ನೇ ವಾರ್ಡಿನ ಹಲವಾರು ಪ್ರದೇಶಗಳಲ್ಲಿ ರಸ್ತೆ ಪಕ್ಕದ ಚರಂಡಿ, ಪ್ರಮುಖ ರಸ್ತೆಗಳ ದೊಡ್ಡ ಕಾಲುವೆಗಳು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ರಸ್ತೆಗಳ ತುಂಬೆಲ್ಲ ರಾಶಿ ರಾಶಿ ಕಸದ ತ್ಯಾಜ್ಯವೇ ತುಂಬಿ ತುಳುಕುತ್ತಿದೆ.

ಪರಿಣಾಮ ಮುಂದಕ್ಕೆ ಹರಿಯಬೇಕಿದ್ದ ಕೊಚ್ಚೆ ನೀರು ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯದಿಂದ ನಿಂತು ದುರ್ನಾಥ ಬೀರುತ್ತಿದೆ. ನಗರದ ಎಲ್ಲ ರಸ್ತೆಗಳು ಸಂಪೂರ್ಣ ಧೂಳಿನಮಯವಾಗಿವೆ. ಮುಖ್ಯ ಕಾರಣ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾ ಸಿಬ್ಬಂದಿಯ ಕೊರತೆ. ನಗರದ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಪಾದಚಾರಿಗಳ ಓಡಾಡಕ್ಕೆ ಅನುಕೂಲವಾಗುವಂತೆ ಪಾದಚಾರಿ ರಸ್ತೆ ನಿರ್ಮಿಸಿದಲ್ಲಿ ಸಂಚಾರ ನಿಯಂತ್ರಣದ ಜೊತೆಗೆ ಅಪಘಾತಗಳಿಗೂ ಕಡಿವಾಣ ಹಾಕಬಹುದಾಗಿದೆ. ಪಾಲಿಕೆಯ ವತಿಯಿಂದ ನಗರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ  ಮಾನವಶಕ್ತಿ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳ ಕೊರತೆಯಿದೆ. ಇದರ ಬಗ್ಗೆ ಯಾವ ಅಧಿಕಾರಿಯೂ ಗಮನ ಹರಿಸುತ್ತಿಲ್ಲ.ನಗರದ ಹಲವಾರು ವಾರ್ಡುಗಳ ಪ್ರದೇಶಗಳಲ್ಲಿ ಚಿಕ್ಕ ಚಿಕ್ಕ ಬೀದಿಗಳಿದ್ದು, ಅದರಲ್ಲಿಯೂ ಚರಂಡಿಯ ನಿರ್ಮಾಣ ಮಾಡಿ ಚರಂಡಿಯಲ್ಲಿ ನೀರು ಹರಿಯದಂತೆ ತ್ಯಾಜ್ಯ ತುಂಬಿ ತುಳುಕಿ ದಿನೇದಿನೇ ಅಲ್ಲಿನ ಪ್ರದೇಶಗಳ ಜನತೆ ಸೊಳ್ಳೆಗಳ ಕಾಟಕ್ಕೆ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. 

ಸ್ವಚ್ಛತೆ ಬಗ್ಗೆ ನಿತ್ಯ ಪಾಠ ಮಾಡುವ ಪಾಲಿಕೆ ತ್ಯಾಜ್ಯ ಮತ್ತು ಕಸ ವಿಲೇವಾಗಿ ವಾಹನಗಳು ಎರಡು-ಮೂರು ದಿನಗಳಿಗೊಮ್ಮೆ ಬರುವುದರಿಂದ ಸಾರ್ವಜನಿಕರು ಬೀದಿಗೆ ಕಸ ಬೀಸಾಡುವುದು ಸರ್ವೇ ಸಾಮಾನ್ಯವಾಗಿದೆ. ರಸ್ತೆಯ ಮಧ್ಯದಲ್ಲೇ ನಿರ್ಮಿಸಿರುವ ಒಳಚರಂಡಿಯ ಮೇಲ್ಭಾಗದ ಮುಚ್ಚಳಿಕೆ ಕಳಪೆಯಾಗಿರುವುದರಿಂದ ನಗರದ ಹಲವಾರು ಕಡೆ ಈ ಮುಚ್ಚಳಿಕೆಗಳು ಒಡೆದು ಜನಸಾಮಾನ್ಯರಿಗೆ ತೊಂದರೆಯಾಗಿದ್ದು,  ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಬಿದ್ದು, ಅಪಘಾತಗಳು ಸಂಭವಿಸಿವೆ. ಬಳ್ಳಾರಿ ನಗರದ ವ್ಯಾಪ್ತಿಯಲ್ಲಿ ಹಲವಾರು ಕಡೆ ಒಳಚರಂಡಿ ಪೈಪ್‍ಲೈನ್ ಒಡೆದು ಹೋಗಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಸೇರುತ್ತಿದೆ. ಈ ನೀರು ಸೇವನೆಯಿಂದ ಸುತ್ತಮುತ್ತಲಿನ ಪ್ರದೇಶಗಳ ಜನರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ನಗರದ ಹಲವಾರು ಕಡೆ ಸಾರ್ವಜನಿಕ ಶೌಚಾಲಯಗಳ ಕೊರತೆ ಇರುವುದರಿಂದ ಹಳ್ಳಿ ಭಾಗಗಳಿಂದ ಬರುವ ಜನರು ಅದರಲ್ಲೂ

ಪ್ರತ್ಯೇಕವಾಗಿ ಮಹಿಳೆಯರಿಗೆ ಮೂತ್ರ ವಿಸರ್ಜನೆ ಮಾಡಲು ತುಂಬಾ ಕಸ್ಟಕರವಾಗಿದೆ. 

ಬಳ್ಳಾರಿ ನಗರದ ಪ್ರದೇಶದ ನಾನಾ ಭಾಗಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕನ್‍ಗುನ್ಯಾ, ಡೆಂಗ್ಯೂ ಮುಂತಾದ ರೋಗಗಳು ಹರಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎತ್ತದಿರುವುದು ವಿಪರ್ಯಾಸ ಸಂಗತಿ.

ಬಳ್ಳಾರಿ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸಂಚಾರಿಗಳಿಗೆ, ಪಾದಚಾರಿಗಳಿಗೆ ಮತ್ತು ವಿಶೇಷವಾಗಿ ಬೀದಿಗಳಲ್ಲಿ ಆಟವಾಡುವ ಚಿಕ್ಕಮಕ್ಕಳು ಹೊರಬರಲು ಹೆದರುವಂತಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಹಾಗೂ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾ, ಇಲ್ಲದೇ ಇದ್ದಲ್ಲಿ ಮಹಾನಗರ ಪಾಲಿಕೆಯ ವಿರುದ್ಧ ಹಂತ ಹಂತವಾಗಿ ಸಾರ್ವಜನಿಕರೊಂದಿಗೆ ವಿವಿಧ ಹೋರಾಟಗಳನ್ನು ಆರಂಭಿಸಬೇಕಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿ ಓದಿ