ಬಂಕಾಪುರ ಪಟ್ಟಣದ ಪುರಸಭೆಯ ಬಜೆಟ್ ಮಂಡನೆ
ಲೋಕದರ್ಶನ ವರದಿ
ಶಿಗ್ಗಾವಿ : ಬಂಕಾಪುರ ಪಟ್ಟಣದ ಪುರಸಭೆಯ 2022-23 ನೇ ಸಾಲಿನ 6.40 ಲಕ್ಷ ರೂ. ಉಳಿತಾಯ ಬಜೆಟ್ನ್ನು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಂಡಿಸಿದರು.
ನೂತನವಾಗಿ ಆಯ್ಕೆಯಾದ ಪುರಸಭೆ ಸದಸ್ಯರಿಗೆ ಇದುವರೆಗೂ ಅಧಿಕಾರ ಹಸ್ತಾಂತರ ಆಗದೇ ಇರುವುದರಿಂದ ಪುರಸಭೆ ಆಡಳಿತಾಧಿಕಾರಿ ಉಪವಿಭಾಗಾಧಿಕಾರಿ ಅವರೇ ಬೆಳೆಯುತ್ತಿರುವ ಸಮಗ್ರ ಪಟ್ಟಣದ ಅಭಿವೃದ್ಧಿ ಹಿತದೃಷ್ಠಿಯಿಂದ ಬಜೆಟ್ ಪ್ರತಿಯನ್ನು ಬಿಡುಗಡೆ ಗೋಳಿಸಿದರು.
ರಾಜ್ಯ ಸ್ವ ಸಂಗ್ರಹಣೆಯಿಂದ 208.95 ಲಕ್ಷ ರೂ.ಆಧಾಯ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ 202.55 ಲಕ್ಷ ರೂ. ವೆಚ್ಚಮಾಡುವುದಾಗಿ ಅಂದಾಜಿಸಲಾಗಿದೆ.
ರಾಜ್ಯ ಸ್ವ ಸಂಗ್ರಹಣೆ : ಆಸ್ತಿ ತೆರಿಗೆ, ನೀರಿನ ಕಂದಾಯ, ಅಭಿವೃದ್ಧಿ ಶುಲ್ಕ, ಮಳಿಗೆ ಬಾಡಿಗೆ ಪುರಸಭೆಯ ಮೂಲ ಆದಾಯವಾಗಿದೆ. ಇವುಗಳಿಂದ ಹೆಚ್ಚಿನ ಆದಾಯ ನೀರೀಕ್ಷಿಸಲಾಗಿದೆ. ನೀರು ಸರಬರಾಜು ಸುದಾರಣೆಯಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ನೀರು ಬಳಕೆ ಶುಲ್ಕದಿಂದ 38.76 ಲಕ್ಷ, ಹೊಸ ನಳಗಳ ಸಂಪರ್ಕದಿಂದ 20.31 ಲಕ್ಷ, ಆಸ್ತಿ ತೆರಿಗೆಯಿಂದ 75.56 ಲಕ್ಷ, ವ್ಯಾಪಾರ ಪರವಾನಗೆಯಿಂದ 1.97 ಲಕ್ಷ, ಸಂತೆ ಹರಾಜಿನಿಂದ 15 ಲಕ್ಷ, ಕಟ್ಟಡ ಪರವಾನಗೆಯಿಂದ 7.2 ಲಕ್ಷ, ಅಭಿವೃದ್ಧಿ ಶುಲ್ಕದಿಂದ 1.95 ಲಕ್ಷ, ಒಟ್ಟಾರೆ ಇತರೆ ಮೂಲಗಳಿಂದ 48.38 ಲಕ್ಷ ರೂ. ಸೇರಿದಂತೆ ಒಟ್ಟು 208.95 ಲಕ್ಷ ರೂ. ಆದಾಯವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.
ರಾಜ್ಯ ಹಣಕಾಸು ಯೋಜನೆ ಅನುದಾನ : ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ 30.71 ಲಕ್ಷ ವೇತನ ನಿಧಿ, 1.50 ಕೋಟಿ ವಿದ್ಯುತ್ ಬಿಲ್ ಪಾವತಿ, 1.4 ಕೋಟಿ ರೂ ಕುಡಿಯುವ ನೀರಿನ ಪರಿಹಾರ 20 ಲಕ್ಷ ಸೇರಿದಂತೆ ಒಟ್ಟು 3.40 ಕೋಟಿ ರೂ ಅನುದಾನವನ್ನು ರಾಜ್ಯ ಸರ್ಕಾರದಿಂದ ನೀರೀಕ್ಷಿಸಲಾಗಿದೆ.
ಕೇಂದ್ರ ಹಣಕಾಸು ಆಯೋಗದ ಅನುದಾನ : 15 ನೇ ಹಣಕಾಸಿನ ಅನುದಾನವನ್ನು 1.50 ಕೋಟಿ ರೂ, ಕಾರ್ಯ ನಿರ್ವಹಣಾ ಅನುದಾನ 40 ಲಕ್ಷ ರೂ ನೀರೀಕ್ಷಿಸಲಾಗಿದ್ದು, ಅದರಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೋಳ್ಳಲು ತಿರ್ಮಾನಿಸಲಾಗಿದೆ.
ಸರ್ಕಾರದ ವಿಶೇಷ ಅನುದಾನದಡಿ 8 ಕೋಟಿ ರೂ, ಪೌರಕಾರ್ಮಿಕರ ಗೃಹ ಭಾಗ್ಯ ನಿರ್ಮಾಣಕ್ಕೆ, 20 ಲಕ್ಷ ರೂ, ಜಿ+1 ಮನೆಗಳ ನಿರ್ಮಾಣಕ್ಕಾಗಿ 1.50 ಕೋಟಿ, ನಲ್ಮ ಯೋಜನೆಅಡಿ 11.25 ಲಕ್ಷ ಅನುದಾನ ನೀರೀಕ್ಷಿಸಲಾಗಿದ್ದು, ಸ್ವಚ್ಛ ಭಾರತ 55 ಲಕ್ಷ, ಅತಿವೃಷ್ಠಿ ಅದರಲ್ಲಿ ಕಚೇರಿ, ಕಟ್ಟಡ, ವಿದ್ಯುತ್ ಮುದ್ರಣ, ಹೊರಗುತ್ತಿಗೆದಾರರ ವೇತನ, ರಸ್ತೆ ಚರಂಡಿ ಸಣ್ಣ ಸೇತುವೆಗಳು, ಬಡಾವಣೆಗಳಿಗೆ ವಿದ್ಯುತಿಕರಣ ಮಾರ್ಗಗಳು, ಬೀದಿ ವ್ಯಾಪಾರಸ್ತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲಾಗುವುದು. ಎಸ್.ಬಿ.ಎಂ. ಯೋಜನೆಅಡಿ 55 ಲಕ್ಷಗಳ ವಿವಿದ ಕಾಮಗಾರಿಗಳು, ಅತಿವೃಷ್ಠಿ 50 ಲಕ್ಷ, ಎಂಎಲ್ಸಿ/ಎಂಪಿ ಅನುದಾನ 50 ಲಕ್ಷ, ನಗರೋತ್ಥಾನದಡಿ 10 ಕೋಟಿ ರೂ ದಲ್ಲಿ ವಿವಿದ ಕಾಮಗಾರಿಗಳನ್ನು ಕೈಗೊಳ್ಳಲು ತಿರ್ಮಾನಿಸಲಾಗಿದೆ.
ಕಛೇರಿ ವೆಚ್ಚ : ಅಂಚೆ, ದೂರವಾಣಿ, ವಿದ್ಯುತ್, ಮುದ್ರಣ, ಡಿಸೇಲ್, ಲೇಖನ ಸಾಮಗ್ರಿ, ಹೊರಗುತ್ತಿಗೆ ವೇತನ, ಕಛೇರಿ ಯಂತ್ರೋಪಕರಣಗಳ ದುರಸ್ತಿ ಸೇರಿದಂತೆ 202.55 ಲಕ್ಷ ವೆಚ್ಚಗಳನ್ನು ಬಜೆಟ್ ಪ್ರತಿಯಲ್ಲಿ ಮಂಡಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಬಸಮ್ಮ ಕೊರಕಲ್, ಮಲ್ಲಮ್ಮ ಹರವಿ, ಅಶ್ವಿನಿ ಸುಣಗಾರ, ಬಿ.ಎಸ್.ಗಿಡ್ಡಣ್ಣವರ, ವೀರಯ್ಯ ಹಿರೇಮಠ ಇತರರು ಇದ್ದರು.