ಸಂಕೇಶ್ವರ

ಮೊಹರಂ: ಪಂಜಾ, ಪೀರಸಾಬ ಮೆರವಣಿಗೆ

ಮೊಹರಂ: ಪಂಜಾ, ಪೀರಸಾಬ ಮೆರವಣಿಗೆ

ಸಂಕೇಶ್ವರ 18: ಸಂಕೇಶ್ವರದಲ್ಲಿ ಮುಸ್ಲಿಂ ಬಾಂಧವರು ಹಾಗೂ ಎಲ್ಲ ಸಮುದಾಯದವರು ಮೊಹರಂ ಹಬ್ಬವನ್ನು ಆಚರಿಸಿದರು, ಮೆರವಣಿಗೆ ಉದ್ದಕ್ಕು ಹಿಂದೂ ಮುಸ್ಲಿಂ ಎಲ್ಲರೂ ಒಂದಾಗಿ ಭಾವೈಕ್ಯತೆಯಿಂದ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಪಂಜಾ ಮತ್ತು ಪೀರಸಾಬ ದೇವರುಗಳನ್ನು ಭಕ್ತರು ಹೆಗಲ ಮೇಲೆ ಎತ್ತಿಕೊಂಡು ನಾಮಸ್ಮರಣೆ ಮಾಡಿಕೊಂಡು ಬೇರೆ ಬೇರೆ ಕಡೆಯಿಂದ ಮಡ್ಡಿಗಲ್ಲಿ, ಬಣ್ಣದ ಚಾವಡಿ, ಗಾಂಧಿ ಚೌಕ ಮುಖಾಂತರ ನದಿ ಗಲ್ಲಿ ಹಾಗೂ ಮಠ ಗಲ್ಲಿ ನದಿಯಲ್ಲಿ ಸೇರುವ ಮುಖಾಂತರ ವಿಸರ್ಜನೆಗೊಂಡಿತು. 


ಸುದ್ದಿ ಓದಿ