ಸಂಭ್ರಮದಿಂದ ಮೋತ್ಕರ್ ಶ್ರೀನಿವಾಸ್ ಹುಟ್ಟುಹಬ್ಬ ಆಚರಣೆ
ಲೋಕದರ್ಶನ ವರದಿ
ಬಳ್ಳಾರಿ 09: ಬಳ್ಳಾರಿ ನಗರದ 24ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರ 50ನೇ ಹುಟ್ಟುಹಬ್ಬವನ್ನು ಶನಿವಾರ ತಾಳೂರು ರೋಡ್ ಗೋವಿಂದಪ್ಪ ಕಲ್ಯಾಣಮಂಟಪದಲ್ಲಿ ಭಾ.ಜ.ಪ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಅದ್ಧೂರಿಯಾಗಿ ನಡೆಸಿದರು.
ಈ ಸಂದರ್ಭದಲ್ಲಿ ಮೋತ್ಕರ್ ಶ್ರೀನಿವಾಸ್ ಅವರು ನಗರದ ವಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು. ಮತ್ತು ಗಾಂಧಿನಗರದ ಸೂರ್ಯವೃದ್ಧಾಶ್ರಮದಲ್ಲಿ ವೃದ್ಧರಿಗೆ ಬಟ್ಟೆಗಳನ್ನು ಹಂಚಿ ವಾರ್ಡ್ನಲ್ಲಿ ಅಭಿಮಾನಿಗಳ ಮಧ್ಯ ಕೇಕ್ ಕಟ್ ಮಾಡಿ ಸಿಹಿ ಹಂಚಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪೋನ್ ಮೂಲಕ ಮಂತ್ರಿ ಶ್ರೀರಾಮುಲು, ನಗರ ಶಾಸಕ ಸೋಮಶೇಖರ್ರೆಡ್ಡಿ, ಎಂ.ಪಿ ದೇವೇಂದ್ರ್ಪ, ವಿಧಾನಪರಿಷತ್ ಸದಸ್ಯರಾದ ಏ ಸತೀಶ್ ಸೇರಿದಂತೆ ಹಲವಾರು ರಾಜಕಾರಣಿಗಳು ಮತ್ತು ಗಣ್ಯರು ಹುಟ್ಟುಹಬ್ಬಕ್ಕೆ ಶುಭಕೋರಿದರು. ತಾಳೂರು ರಸ್ತೆ ಮೌನೇಶ್, ಆಶ್ವತ್, ವಿಜಯ್ಕುಮಾರ್ ಠಾಕೂರ್, ಸಿದ್ಧೇಶ್, ನಟರಾಜ್, ನಾಗರೆಡ್ಡಿ, ಮಹೇಶ್, ಡಾನಿಯಲ್, ವೇಮನರೆಡ್ಡಿ, ಮುರುಳಿಧರ್ರೆಡ್ಡಿ, ಶಂಕರ್ಗೌಡ, ಶಿವಕುಮಾರ್, ತಿರುಮಲರೆಡ್ಡಿ, ಟಿ ಎಚ್ ವಿಶ್ವನಾಥ್ ಸೇರಿದಂತೆ ಹಲವಾರು ಅಭಿಮಾನಿಗಳು ಈ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.