ಬಳ್ಳಾರಿ

ತಾಯಿ ಮಗು ಕಾಣೆ: ಪ್ರಕರಣ ದಾಖಲು ,,..

ತಾಯಿ ಮಗು ಕಾಣೆ: ಪ್ರಕರಣ ದಾಖಲು ,,..

ಬಳ್ಳಾರಿ 07: ಬಳ್ಳಾರಿ ನಗರದ ರೂಪನಗುಡಿ ರಸ್ತೆಯಲ್ಲಿ ವಾಸವಿದ್ದ ವಿಜಯಲಕ್ಷ್ಮಿ ಎಂಬ 28 ವರ್ಷದ ಮಹಿಳೆ ಮತ್ತು ತನ್ನ ಮಗಳಾದ 4 ವರ್ಷದ ಅಪೂರ್ವ ಎಂಬ ಮಗು ಕಾಣೆಯಾಗಿರುವ ಕುರಿತು ಬಳ್ಳಾರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಎ.ಎಸ್‌.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಯುವತಿಯ ಗಂಡನಾದ ರಾಜು ಅವರು ನ.26,2021 ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ತನ್ನ ಹೆಂಡತಿ ಮತ್ತು ಮಗಳಾದ ಅಪೂರ್ವ ಮನೆಯಲ್ಲಿ ಇರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಮಹಿಳೆಯ ಚಹರೆಯ ವಿವರ: ಎತ್ತರ 5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಬಲಗೈನ ಮಣಿಕಟ್ಟಿನ ಹತ್ತಿರ ರಾಜು ಅಂತ ಅಚ್ಛೆ ಇರುತ್ತದೆ. 

ಕಾಣೆಯಾದ ಮಗುವಿನ ಚಹರೆ ಗುರುತು: ಎತ್ತರ 3 ಅಡಿ, ಕೋಲು ಮುಖ, ಗೋಧಿ ಮೈಬಣ್ಣ ಆಗಿರುತ್ತದೆ. 

ಮೇಲ್ಕಂಡ ಚಹರೆಯುಳ್ಳ ಮಹಿಳೆ ಹಾಗೂ ಮಗುವಿನ ಮಾಹಿತಿ ದೊರೆತಲ್ಲಿ ಬಳ್ಳಾರಿ ಎಸ್‌.ಪಿ ದೂ.08392-258400, ಬಳ್ಳಾರಿ ಉಪವಿಭಾಗದ ಡಿ.ಎಸ್‌.ಪಿ ದೂ.08392-272322, ಮಹಿಳಾ ಪೋಲಿಸ್ ಠಾಣೆಯ ಪಿ.ಐ ಮೊ.9480803088 ಹಾಗೂ ಬಳ್ಳಾರಿ ಮಹಿಳಾ ಪೋಲಿಸ್ ಠಾಣೆ ದೂ.08392-268108 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 


ಸುದ್ದಿ ಓದಿ