ಬಳ್ಳಾರಿ

ತಾಯಿ ಮಗು ಕಾಣೆ ಪ್ರಕರಣ ದಾಖಲು

ತಾಯಿ ಮಗು ಕಾಣೆ ಪ್ರಕರಣ ದಾಖಲು

ವಿಜಯನಗರ(ಹೊಸಪೇಟೆ) 08: ಹೊಸಪೇಟೆ ತಾಲೂಕಿನ ಇಂಗಳಿ ಗ್ರಾಮದ 37 ವರ್ಷದ ಮಂಜುಳಾ ಎನ್ನುವ ತಾಯಿ ಮತ್ತು ಆಕೆಯ ಮಗು 6 ವರ್ಷದ ರಮೇಶ್, 2021ನೇ ಅ.25ರಂದು ತಾಯಿ ಮಗು  ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್‌.ಐ ಜಿ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಮಹಿಳೆಯ ಚಹರೆ ಗುರುತು: 5.3 ಅಡಿ ಎತ್ತರ, ಗೋದಿ ಮೈಬಣ್ಣ ಇದ್ದು, ಸಾಧಾರಣ  ಮೈಕಟ್ಟು, ಕೋಲು ಮುಖ ಇದ್ದು, ಕುತ್ತಿಗೆಯ ಬಲಭಾಗದಲ್ಲಿ ಒಂದು ಕಪ್ಪು ಮಚ್ಚೆ ಇದೆ. ಕನ್ನಡ ಭಾಷೆ ಮಾತನಾಡುತ್ತಾಳೆ ಹಾಗೂ ಕಾಣೆಯಾದ ದಿನ ಚೂಡಿದಾರ್ ಧರಿಸಿದ್ದು, ಕಲರ್ ಯಾವುದೆಂದು ಗೊತ್ತಿರುವುದಿಲ್ಲ. 

ಕಾಣೆಯಾದ ಬಾಲಕನ ಚಹರೆ ಗುರುತು:  3.5 ಅಡಿ ಎತ್ತರ, ಗೋದಿ ಮೈ ಬಣ್ಣ , ಸಾದಾರಣ ಮೈಕಟ್ಟು , ಕೋಲು ಮುಖ ಇದ್ದು, ಕೈ ಕಾಲುಗಳ ನಡುಕ ಇರುತ್ತದೆ.  

ಕನ್ನಡ ಭಾಷೆ ಮಾತನಾಡುತ್ತಾನೆ ಹಾಗೂ ಕಾಣೆಯಾದ ದಿನ ನಿಕ್ಕರ್ ್ಘ ಟಿ-ಶರ್ಟ್‌ ಧರಿಸಿದ್ದು, ಕಲರ್ ಯಾವುದೆಂದು ಗೊತ್ತಿರುವುದಿಲ್ಲಾ. 

ಕಾಣೆಯಾದವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಪೇಟೆ ಕಂಟ್ರೋಲ್ ರೂಂ.226100 (08394) ಗ್ರಾಮೀಣ ಪೊಲೀಸ್ ಠಾಣೆ ದೂ.228233 (08394), ಪಿ.ಐ. ಗ್ರಾಮೀಣ ಪೊಲೀಸ್ ಠಾಣೆ ಮೊ.9480803075ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ